LIFESTYLE:
ಮದುವೆ ಜೀವನದ ಒಂದು ಭಾಗ. ಇದರಲ್ಲಿ ಹೊಂದಾಣಿಕೆ, ಅರ್ಥ ಮಾಡಿಕೊಳ್ಳುವುದರ ಜೊತೆಗೆ ಲೈಂಗಿಕತೆ ಕೂಡ ಇರಬೇಕು. ಸಂಗಾತಿಯು ಲೈಂಗಿಕತೆಯಿಂದ ದೂರವಿರುವುದು ಸಾಮಾನ್ಯವಾದ ಸಂಗತಿಯಲ್ಲ. ಇದರ ಹಿಂದೆ ಕೆಲವು ಮಹತ್ವದ ಕಾರಣಗಳು ಇರಬಹುದು. ಸಂಗಾತಿಯ ಮನದಾಳದ ಮಾತನ್ನು ಮೊದಲು ಅರಿತುಕೊಳ್ಳಿ. ಲೈಂಗಿಕತೆಗೆ ಆಸಕ್ತಿ ತೋರಿಸದಿರಲು ಕಾರಣವೇನಿರಬಹುದೆಂದು ತಿಳಿದುಕೊಳ್ಳಿ
ಲೈಂಗಿಕ ಬಯಕೆಯನ್ನು ತಿಳಿದುಕೊಳ್ಳಿ
ಕೆಲ ಸಂಗಾತಿಗಳು ಒಂದೇ ರೀತಿಯ ಲೈಂಗಿಕ ಬಯಕೆಯನ್ನು ಹೊಂದಿರುವುದಿಲ್ಲ. ಆದರೆ ಲೈಂಗಿಕ ಬಯಕೆ ಎಂಬುದು ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿರುತ್ತದೆ. ಮುಖ್ಯವಾಗಿ ನಿಮ್ಮ ಸಂಗಾತಿಗೆ ಸಂಭೋಗದಲ್ಲಿ ಹೆಚ್ಚಿನ ಆಸಕ್ತಿ ಇಲ್ಲದಿರುವುದು ಕೂಡ ಒಂದು ಕಾರಣವಾಗಿರಬಹುದು. ಹಾಗಾಗಿ ನಿಮ್ಮ ಪಾಲುದಾರರೊಂದಿಗೆ ಈ ಕುರಿತು ಮನದಾಳದ ಮಾತನಾಡುವುದು ಒಳ್ಳೆಯದು.
ಒತ್ತಡಕ್ಕೆ ಒಳಗಾಗಬಹುದು
ನಿಮ್ಮ ಹೆಂಡತಿಯು ಲೈಂಗಿಕತೆಗೆ ಹೆಚ್ಚು ಒಲವು ತೋರುತ್ತಿಲ್ಲ ಎಂಬುದಕ್ಕೆ ಮತ್ತೊಂದು ಕಾರಣವೇನೆಂದರೆ ಒತ್ತಡ. ಇತ್ತೀಚಿನ ಒತ್ತಡದ ಬದುಕಿನಲ್ಲಿ ಮಹಿಳೆಯರು ಕೂಡ ಹೊರಗೆ ಹಾಗು ಮನೆ ಇವೆರಡನ್ನೂ ನಿಭಾಯಿಸುವ ದೊಡ್ಡ ಹೊರೆ ಅವಳಿಗೆ ಇರುವುದರಿಂದ ಲೈಂಗಿಕತೆಯ ಮೇಲೆ ಆಸಕ್ತಿ ಕಡಿಮೆ ಇರಬಹುದು.
ಭಾವನಾತ್ಮಕ ಸಂಪರ್ಕ
ನಿಮ್ಮ ಸಂಗಾತಿಯು ನಿಮ್ಮೊಂದಿಗೆ ಭಾವನಾತ್ಮಕ ಸಂಪರ್ಕ ಹೊಂದಿಲ್ಲದಿರುವುದು ಕೂಡ ಲೈಂಗಿಕತೆಯಿಂದ ದೂರವಿರಲು ಕಾರಣವಾಗಬಹುದು. ಬಹುತೇಕ ಮಹಿಳೆಯರು ಭಾವನಾತ್ಮಕತೆ ಸಂಪರ್ಕವು ಲೈಂಗಿಕತೆಗೆ ಅಗತ್ಯ ಎಂದು ಭಾವಿಸಲಾಗುತ್ತದೆ.
ದೈಹಿಕ, ಮಾನಸಿಕ ನೋವು
ಸಂಗಾತಿಯು ಲೈಂಗಿಕತೆಯನ್ನು ನಿರಾಕರಿಸಲು ಮತ್ತೊಂದು ಕಾರಣವೆಂದರೆ, ದೈಹಿಕ ಹಾಗು ಮಾನಸಿಕ ನೋವು. ಕೆಲವೊಮ್ಮೆ ಒತ್ತಡದ ಜೀವನದಿಂದಾಗಿ ಅವಳ ಅಥವಾ ಅವನ ದೇಹದಲ್ಲಿ ಆಗುತ್ತಿರುವ ಯಾವುದೇ ಮಾರ್ಪಾಡುಗಳನ್ನು ವಿಚಾರಿಸುವ ತಾಳ್ಮೆಯಾಗಲೀ ಅಥವಾ ಸಮಯವಾಗಲೀ ಇಲ್ಲದೇ ಇರಬಹುದು.