LIFESTYLE:
ಪವಿತ್ರಾ
ಕಣ್ಣುಗಳ ಸೌಂದರ್ಯ ಹೆಚ್ಚಿಸುವಲ್ಲಿ ರೆಪ್ಪೆಗಳ ಪಾತ್ರ ಬಹಳ ದೊಡ್ಡದು. ಹಾಗಿದ್ದರೆ ನೀಳವಾದ ಆಕರ್ಷಕ ಕಣ್ಣರೆಪ್ಪೆ ಗಳನ್ನು ಪಡೆಯುವುದು ಹೇಗೆ? ಮೇಕಪ್ ಮೂಲಕ ಅಥವಾ ಮಾರುಕಟ್ಟೆಯಲ್ಲಿ ಸಿಗುವ ನಕಲಿ ಕಣ್ಣರೆಪ್ಪೆಗಳ ಮೂಲಕ ನಿಮ್ಮ ಸೌಂದರ್ಯವನ್ನು ಹೆಚ್ಚಿಸಬಹುದು ಎಂಬುದೇನೋ ನಿಜ. ಅದರ ಬದಲು ನೈಸರ್ಗಿಕವಾಗಿ ಉದ್ದ ರೆಪ್ಪೆಯನ್ನು ಪಡೆಯುವ ವಿಧಾನವನ್ನು ತಿಳಿಯೋಣ.
ನೀವು ಗ್ರೀನ್ ಟೀ ಪ್ರಿಯರೇ. ಅದನ್ನು ತಯಾರಿಸಿದ ಬಳಿಕ ಕುಡಿಯುವ ಮುನ್ನ ಹತ್ತಿಯ ಉಂಡೆಯನ್ನು ಗ್ರೀನ್ ಟೀಗೆ ಅಡಿ ಕಣ್ಣರೆಪ್ಪೆಯ ಭಾಗಕ್ಕೆ ಹಚ್ಚಿ. ವಾರದಲ್ಲಿ ನಾಲ್ಕು ದಿನ ಹೀಗೆ ಮಾಡುತ್ತೀರಿ. ಮೂರರಿಂದ ನಾಲ್ಕು ಬಾರಿ ಹೀಗೆ ಚಹಾಗೆ ಅದ್ದಿ ಕಣ್ಣು ರೆಪ್ಪೆಗೆ ಒತ್ತಿ ಕೊಂಡರೆ ಸಾಕು.
ಒಂದು ಹನಿ ಆಲೀವ್ ಎಣ್ಣೆಯನ್ನು ಕೈಬೆರಳ ತುದಿಯಲ್ಲಿ ತೆಗೆದುಕೊಂಡು ಕಣ್ಣ ರೆಪ್ಪೆಗಳಿಗೆ ಹಚ್ಚಿ ಒಂದು ನಿಮಿಷ ಮಸಾಜ್ ಮಾಡಿ. ಇದು ಕಣ್ಣುಗಳಿಗೆ ತಾಕದಂತೆ ನೋಡಿಕೊಳ್ಳಿ. ನಿತ್ಯ ಎರಡರಿಂದ ಮೂರು ಬಾರಿ ಹೀಗೆ ಮಾಡಿ. 15 ದಿನದಲ್ಲಿ ನಿಮ್ಮ ಕಣ್ಣ ರೆಪ್ಪೆಗಳು ಉದ್ದಕ್ಕೆ ದಪ್ಪಕ್ಕೆ ಆಕರ್ಷಕವಾಗಿ ಬೆಳೆಯುವುದನ್ನು ನೀವೇ ನೋಡಿ.