LIFESTYLE:
ಪವಿತ್ರಾ
ಕುತ್ತಿಗೆಯ ಸುತ್ತ ಕಪ್ಪಾಗಿದೆಯೇ? ಹಲವು ಕ್ರೀಮ್ ಗಳನ್ನು ಬಳಸಿ ಸೋತಿದ್ದೀರೇ? ಹಾಗಿದ್ದರೆ ಇಲ್ಲಿ ಕೇಳಿ. ಈ ಮನೆಮದ್ದುಗಳು ನಿಮ್ಮ ಕುತ್ತಿಗೆಯನ್ನು ಬೆಳ್ಳಗಾಗಿಸುತ್ತವೆ.
ಕತ್ತಿನ ಸುತ್ತ ಕಪ್ಪಗಾಗಿದ್ದರೆ ಬಾದಾಮಿ ಎಣ್ಣೆಯಿಂದ ಆ ಭಾಗಕ್ಕೆ ಮಸಾಜ್ ಮಾಡಿ. ಹತ್ತು ನಿಮಿಷದ ಬಳಿಕ ತೊಳೆಯಿರಿ. ಇದರಲ್ಲಿ ವಿಟಮಿನ್ ಇ ಮತ್ತು ಬ್ಲೀಚಿಂಗ್ ಗುಣಗಳಿದ್ದು ತ್ವಚೆಯ ಬಣ್ಣವನ್ನು ಮರಳಿ ತರುತ್ತದೆ.
ನೈಸರ್ಗಿಕವಾಗಿ ಬೆಳೆದ ಆಲೋವೇರಾವನ್ನು ಕತ್ತರಿಸಿ. ಜೆಲ್ ಹೊರತೆಗೆಯಿರಿ. ಇದನ್ನು ನಿಧಾನವಾಗಿ ಕಪ್ಪಾದ ಕುತ್ತಿಗೆಯ ಭಾಗಕ್ಕೆ ಹಚ್ಚಿ ಸ್ಕ್ರಬ್ ಮಾಡಿ. ಅರ್ಧ ಗಂಟೆ ಬಳಿಕ ನೀರಿನಿಂದ ಸ್ವಚ್ಛವಾಗಿ ತೊಳೆಯಿರಿ.
ಮೊಸರನ್ನು ಇದೇ ರೀತಿ ಹಚ್ಚಿ ಹದಿನೈದು ನಿಮಿಷ ಬಳಿಕ ಕತ್ತು ತೊಳೆದುಕೊಳ್ಳಿ. ಆಲೂಗಡ್ಡೆ ಸಿಪ್ಪೆಯನ್ನು ಎಸೆಯುವ ಬದಲು ಇದನ್ನು ಕುತ್ತಿಗೆಯ ಭಾಗಕ್ಕೆ ತಿಕ್ಕಿ. ಇಲ್ಲವಾದರೆ ಹಸಿ ಆಲೂಗಡ್ಡೆಯನ್ನು ತುರಿದು ರಸ ಸಂಗ್ರಹಿಸಿ ಅದರಿಂದ ಕುತ್ತಿಗೆಯ ಭಾಗಕ್ಕೆ ಮಸಾಜ್ ಮಾಡಿದರೂ ಕಪ್ಪಾದ ಭಾಗ ಸಹಜ ಬಣ್ಣಗೆ ಮರಳುತ್ತದೆ.