LIFESTYLE:
ಮೇಕಪ್ ಮಹಿಳೆಯರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಆದರೆ ಇದನ್ನು ಸರಿಯಾಗಿ ಹಚ್ಚಬೇಕು ಮತ್ತು ಸರಿಯಾದ ಮೇಕಪ್ ಉತ್ಪನ್ನಗಳನ್ನು ಆರಿಸಬೇಕು. ಇಲ್ಲವಾದರೆ ಇದು ಮಹಿಳೆಯರ ಸೌಂದರ್ಯವನ್ನು ಹಾಳುಮಾಡುತ್ತದೆ. ಹಾಗಾಗಿ ಒಣ ಚರ್ಮದವರು ಈ ಮೇಕಪ್ ಉತ್ಪನ್ನಗಳನ್ನು ಬಳಸಬೇಡಿ.
ನೀವು ಒಣ ಚರ್ಮವನ್ನು ಹೊಂದಿದ್ದರೆ ತ್ವರಿತವಾಗಿ ಒಣಗುವಂತಹ ಫೌಂಡೇಶನ್ ಗಳನ್ನು ಬಳಸಬೇಡಿ. ಮತ್ತು ಆಲ್ಕೋಹಾಲ್ ಮಿಶ್ರಿತ ಮೇಕಪ್ ಉತ್ಪನ್ನಗಳನ್ನು ಬಳಸಬೇಡಿ. ಇದು ಚರ್ಮದ ಶುಷ್ಕ ಮತ್ತು ನಿರ್ಜಲೀಕರಣಗೊಳಿಸುತ್ತದೆ. ಚರ್ಮದ ಕಿರಿಕಿರಿಗೆ ಕಾರಣವಾಗುತ್ತದೆ.
ಕೆಲವು ಮೇಕಪ್ ಉತ್ಪನ್ನಗಳನ್ನು ಗ್ಲೈಕೋಲಿಕ್ ಆಮ್ಲದಿಂದ ತಯಾರಿಸಲಾಗುತ್ತದೆ. ಇದನ್ನು ಮೊಡವೆ ಮತ್ತು ಮಂದ ಚರ್ಮಕ್ಕೆ ಬಳಸಲಾಗುತ್ತದೆ. ಇದು ಚರ್ಮಕೋಶಗಳ ರಚನೆಗೆ ಸಹಕಾರಿಯಾಗಿದೆ. ಆದರೆ ಇದನ್ನು ಒಣ ಚರ್ಮದವರು ಬಳಸಿದರೆ ಚರ್ಮದ ಕಿರಿಕಿರಿಯನ್ನುಂಟು ಮಾಡುತ್ತದೆ.
ತೈಲವನ್ನು ನಿಯಂತ್ರಿಸಲು, ಮೊಡವೆಗಳ ಸಮಸ್ಯೆಗಳನ್ನು ನಿವಾರಿಸಲು ಸ್ಯಾಲಿಸಿಲಿಕ್ ಆಮ್ಲವನ್ನು ಮೇಕಪ್ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ಆದರೆ ಇದನ್ನು ಒಣ ಚರ್ಮದವರು ಬಳಸಬೇಡಿ. ಇದು ತೈಲ ಉತ್ಪಾದನೆಯನ್ನು ಕಡಿಮೆ ಮಾಡಿ ಚರ್ಮವನ್ನು ಮತ್ತಷ್ಟು ಹದಗೆಡಿಸುತ್ತದೆ.
ಸೌಮ್ಯ ಸುಗಂಧಗಳನ್ನು ಕೆಲವು ಮೇಕಪ್ ಉತ್ಪನ್ನಗಳಲ್ಲಿ ಬಳಸುತ್ತಾರೆ. ಇಂತಹ ಮೇಕಪ್ ಉತ್ಪನ್ನಗಳು ಶುಷ್ಕ ಮತ್ತು ಸೂಕ್ಷ್ಮ ಚರ್ಮಕ್ಕೆ ಸೂಕ್ತವಲ್ಲ ಇದು ಚರ್ಮವನ್ನು ಮತ್ತಷ್ಟು ಕೆರಳಿಸುತ್ತದೆ. ಹಾಗಾಗಿ ಒಣ ಚರ್ಮದವರು ಇಂತಹ ವಸ್ತುಗಳನ್ನು ಬಳಸಬೇಡಿ.