LIFESTYLE: -ಪವಿತ್ರಾ ಪಪ್ಪಾಯಿ ವರ್ಷವಿಡೀ ಲಭ್ಯವಿರುವ ಹಣ್ಣು. ಇದು ಕೂದಲು, ಚರ್ಮ ಮತ್ತು ಆರೋಗ್ಯಕ್ಕೂ ತುಂಬಾ ಉತ್ತಮವಾಗಿದೆ. ಹಾಗಾಗಿ ಉದ್ದವಾದ, ದಪ್ಪವಾದ ಮತ್ತು ಆರೋಗ್ಯಕರವಾದ ಕೂದಲನ್ನು ಪಡೆಯಲು ಪಪ್ಪಾಯಿಯ ಈ ಹೇರ್ ಮಾಸ್ಕ್ ತಯಾರಿಸಿ ಕೂದಲಿಗೆ ಹಚ್ಚಿ. 2 ಚಮಚ ಪಪ್ಪಾಯಿ ರಸ, 2 ಚಮಚ ಅಲೋವೆರಾ ಜೆಲ್ ತೆಗೆದುಕೊಂಡು ಎರಡನ್ನು ಚೆನ್ನಾಗಿ ಮಿಕ್ಸ್ ಮಾಡಿ ನೆತ್ತಿಗೆ ಹಚ್ಚಿ ಮಸಾಜ್ ಮಾಡಿ. ಒಂದು ಗಂಟೆಗಳ ಕಾಲ ಬಿಡಿ ತಲೆಗೆ ಶವರ್ ಕ್ಯಾಪ್ ಹಾಕಿ. ನಂತರ ಶಾಂಪೂ ಮತ್ತು ಕಂಡೀಷನರ್ ಬಳಸಿ ಕೂದಲನ್ನು ತೊಳೆಯಿರಿ. ಉತ್ತಮ ಫಲಿತಾಂಶ ಪಡೆಯಲು ವಾರಕ್ಕೊಮ್ಮೆ ಈ ಪರಿಹಾರವನ್ನು ಮಾಡಿ. ಅಲೋವೆರಾ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರನಾಶಕ ಗುಣಗಳನ್ನು ಹೊಂದಿದೆ. ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದು ನೆತ್ತಿಯ ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ. ತಲೆಹೊಟ್ಟನ್ನು ನಿವಾರಿಸುತ್ತದೆ. ಪಪ್ಪಾಯ ತಿರುಳು ½ ಕಪ್, ತೆಂಗಿನ ಹಾಲು, ½ ಕಪ್, ಜೇನುತುಪ್ಪ 1 ಚಮಚ ತೆಗೆದುಕೊಂಡು ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿ. ಮೊದಲು ಕೂದಲನ್ನು ಶಾಂಪೂ ಬಳಸಿ ವಾಶ್ ಮಾಡಿ ಬಳಿಕ ಈ ಹೇರ್ ಮಾಸ್ಕ್ ಅನ್ನು ಹಚ್ಚಿ ಶವರ್ ಕ್ಯಾಪ್ ನಿಂದ ಮುಚ್ಚಿ. ಸುಮಾರು 45 ನಿಮಿಷ ಬಿಟ್ಟು ಕೂದಲನ್ನು ನೀರಿನಿಂದ ತೊಳೆಯಿರಿ. ಇದನ್ನು ವಾರದಲ್ಲಿ 2 ಬಾರಿ ಬಳಸಿದರೆ ಉತ್ತಮ ಫಲಿತಾಂಶ ಸಿಗುತ್ತದೆ.