LIFESTYLE:
ಸಿನಿಮಾ ನಟಿಯರು ತಮ್ಮ ತ್ವಚೆಯನ್ನು ಕಾಪಾಡಲು ಹಲವು ವಿಧಾನಗಳನ್ನು, ಮನೆಮದ್ದುಗಳನ್ನು ಬಳಸುತ್ತಾರೆ. ಉತ್ತಮ ಮೈಕಟ್ಟನ್ನು ಹೊಂದಲು ಹಗಲುರಾತ್ರಿ ಶ್ರಮಿಸುತ್ತಾರೆ. ಜೀವನಶೈಲಿಯಲ್ಲಿ ವಿಶೇಷವಾದ ಆಹಾರ ಕ್ರಮಗಳನ್ನು ಪಾಲಿಸುತ್ತಾರೆ. ಅದರಂತೆ ಈ ನಟಿಯರು ಬೆಳ್ಳಗಾಗಲು ಬೆಳಿಗ್ಗೆ ಈ ಆಹಾರಗಳನ್ನು ಸೇವಿಸುತ್ತಾರಂತೆ.
ಆಲಿಯಾ ಭಟ್ ಬೆಳಿಗ್ಗೆ ಉಪಹಾರದಲ್ಲಿ ಪೋಹಾ ಅಥವಾ ಕಾರ್ನ್ ಫ್ಲೇಕ್ ಗಳನ್ನು ಸೇರಿಸುತ್ತಾರಂತೆ. ಹಾಗೇ ಅವರು ಬೆಳಿಗ್ಗೆ ತಾಜಾ ಹಣ್ಣಿನ ರಸವನ್ನು ಕುಡಿಯುತ್ತಾರಂತೆ.
ಅನುಷ್ಕಾ ಅವರು ಬೆಳಿಗ್ಗೆ ಅರಿಶಿನ ಮಿಶ್ರಿತ ನೀರನ್ನು ಕುಡಿಯುತ್ತಾರಂತೆ. ನಂತರ ನಿಂಬೆ ಪಾನಕ ಸೇವಿಸುತ್ತಾರಂತೆ. ಕೊನೆಯಲ್ಲಿ ಅಡುಗೆ ಸೋಡಾ ಮತ್ತು ನಿಂಬೆ ಮಿಶ್ರಿತ ನೀರನ್ನು ಕುಡಿಯುತ್ತಾರಂತೆ.
ಕಿಯಾರ ಅವರು ಅರಿಶಿನ ನೀರಿನಿಂದ ದಿನ ಪ್ರಾರಂಭಿಸುತ್ತಾರಂತೆ. ಇದು ದೇಹವನ್ನು ಒಳಗಿನಿಂದ ಶುದ್ಧೀಕರಿಸುತ್ತದೆಯಂತೆ. ಇದರಿಂದ ದೇಹ, ಮತ್ತು ಚರ್ಮ ಆರೋಗ್ಯವಾಗಿರುತ್ತದೆ ಎಂದು ನಟಿ ತಿಳಿಸಿದ್ದಾರೆ.
ಮಲೈಕಾ ಅರೋರಾ ಅವರು ಬೆಳಿಗ್ಗೆ ಎದ್ದ ತಕ್ಷಣ ಬೆಚ್ಚಗಿನ ನೀರನ್ನು ಕುಡಿಯುತ್ತಾರಂತೆ. ಬಳಿಕ ಜೇನುತುಪ್ಪ ಮಿಶ್ರಿತ ನಿಂಬೆ ಪಾನಕ ಸೇವಿಸುತ್ತಾರಂತೆ.
ನಟಿ ಸಮಂತಾ ಅವರು ತೆಂಗಿನ ನೀರು, ಅಗಸೆ ಬೀಜಗಳು, ಚಿಯಾ ಬೀಜಗಳು, ಪಾಲಕ್ ಮತ್ತು ಸೆಲರಿಗಳನ್ನು ಸೇವಿಸುತ್ತಾರಂತೆ. ಇದು ಉತ್ಕರ್ಷಣ ನಿರೋಧಕ ಗುಣಗಲನ್ನು ಹೊಂದಿದ್ದು ಚರ್ಮವನ್ನು ದೋಷರಹಿತವಾಗಿ ಮಾಡುತ್ತದೆಯಂತೆ