ಸಣ್ಣ ಡಿನ್ನರ್ ಪಾರ್ಟಿಗೆ ದುಬಾರಿ ಬ್ಯಾಗ್ ಧರಿಸಿದ ನಟಿ ಕರೀನಾ ಕಪೂರ್

ಸಣ್ಣ ಡಿನ್ನರ್ ಪಾರ್ಟಿಗೆ ದುಬಾರಿ ಬ್ಯಾಗ್ ಧರಿಸಿದ ನಟಿ ಕರೀನಾ ಕಪೂರ್

ಸಿನಿಮಾ ಸ್ಟಾರ್ ಗಳು ದುಬಾರಿ ಜೀವನಶೈಲಿಯನ್ನು ನಡೆಸುತ್ತಿರುತ್ತಾರೆ. ಅವರು ಯಾವುದೇ ಡ್ರೆಸ್, ಶೂ, ಬ್ಯಾಗ್, ಮನೆ ಖರೀದಿಸಿದರೂ ಅದು ಸುದ್ದಿಯಾಗುತ್ತದೆ. ಯಾಕೆಂದರೆ ಅವುಗಳ ಬೆಲೆ ಕೂಡ ತುಂಬಾ ದುಬಾರಿಯಾಗಿರುತ್ತದೆ. ಹಾಗಾಗಿ ಸಿನಿಮಾ ತಾರೆಯರು ಧರಿಸುವ ವಸ್ತುಗಳ ಬಗ್ಗೆ ಸಾಮಾನ್ಯ ಜನರಿಗೆ ಕುತೂಹಲ ಇದ್ದೆ ಇರುತ್ತದೆ. ಇದೀಗ ನಟಿ ಕರೀನಾ ಕಪೂರ್ ಅವರ ಬ್ಯಾಗ್ ಮೇಲೆ ಜನರ ಕಣ್ಣುದ ಬಿದ್ದಿದೆ.

ಕರೀನಾ ಕಪೂರ್ ಅವರು ತುಂಬಾ ದುಬಾರಿ ವಸ್ತುಗಳನ್ನು ಖರೀದಿಸುತ್ತಾರೆ. ಅವರು ಇತ್ತೀಚೆಗೆ ವಿಹಾರಕ್ಕೆ ಹೋದಾಗ ಕೊಂಡೊಯ್ಯದ ಬ್ಯಾಗ್ ವೊಂದು ಇದೀಗ ಸುದ್ದಿಯಾಗಿದೆ. ಇತ್ತೀಚೆಗೆ ಅವರು ನಟಿ ಮಲೈಕಾ ಅರೋರಾ ಅವರ ಮನೆಯಲ್ಲಿ ಸಣ್ಣ ಡಿನ್ನರ್ ಪಾರ್ಟಿಗೆ ತೆರಳಿದ್ದು, ಆ ವೇಳೆ ಅವರು ಸಣ್ಣ ದೊಂದು ಬ್ಯಾಗ್ ಅನ್ನು ತೆಗೆದುಕೊಂಡು ಹೋಗಿದ್ದಾರೆ. ಇದು ಈಗ ಆನ್ ಲೈನ್ ನಲ್ಲಿ ಕಾಣಿಸಿಕೊಂಡು ಭಾರೀ ಸುದ್ದಿಯಾಗಿದೆ.

ಕರೀನಾ ಕಪೂರ್ ಅವರು ಪಾರ್ಟಿಗೆ ಸರಳವಾದ ಬೂದು ಬಣ್ಣದ ಟಾಪ್ ಮತ್ತು ಬಿಳಿ ಪ್ಯಾಂಟ್ ಧರಿಸಿದ್ದಾರೆ. ಜೊತೆಗೆ ಶನಲ್ ಬ್ಯಾಗ್ ಅನ್ನು ಧರಿಸಿದ್ದಾರೆ. ಈ ಬ್ಯಾಗ್ ನ ಬೆಲೆ 4,76,000ಲಕ್ಷ ರೂ. ಎನ್ನಲಾಗಿದೆ.