LIFESTYLE:
ಪವಿತ್ರಾ ಶೆಟ್ಟಿ
ಜಾಹೀರಾತುಗಳಲ್ಲಿ ಕಾಣಿಸಿಕೊಂಡಂತೆ ಶಾಪ್ ಗಳಲ್ಲಿ ಸಿಗುವ ಸೋಪ್ ಲಿಕ್ವಿಡ್ ಗಳನ್ನು ಹಾಕಿ ಉಜ್ಜಿದರೂ ಕಲೆ ದೂರವಾಗಿಲ್ಲ ಎಂದು ಬೇಸರಿಸುವ ಬದಲು ಮನೆಯಲ್ಲೇ ಕಲೆಗಳನ್ನು ದೂರ ಮಾಡುವ ಕೆಲವು ಟಿಪ್ಸ್ ಗಳನ್ನು ತಿಳಿಯಿರಿ.
ಬಟ್ಟೆಯ ಮೇಲೆ ಗಾಢವಾದ ಕಲೆ ಆಗಿದ್ದರೆ ಡಿಟರ್ಜೆಂಟ್ ಸಾಬೂನನ್ನು ತಿಕ್ಕಿ. ಎರಡು ಹನಿ ಶ್ಯಾಂಪು ಹಾಕಿ. ಬಳಿಕ ಬ್ರಷ್ ನಿಂದ ಗಟ್ಟಿಯಾಗಿ ಉಜ್ಜಿ. ಬಾರ್ ಸೋಪ್ ಬಳಸುವ ಬದಲು ಲಾಂಡ್ರಿ ಸೋಪ್ ಆಯ್ದುಕೊಳ್ಳಿ. ಕಲೆ ಸಣ್ಣದಾಗಿದ್ದರೆ ಟೂತ್ ಬ್ರಶ್ ನಿಂದ ಸರಿಯಾಗಿ ತಿಕ್ಕಿ. ಬಳಿಕ ನೀರಿನಿಂದ ತೊಳೆಯಿರಿ.
ವಿನಿಗರ್ ಬಳಸಿಯು ಕಲೆಯನ್ನು ದೂರ ಮಾಡಬಹುದು. ವಿನೆಗರ್ ಪ್ರಮಾಣದ ಎರಡರಷ್ಟು ಭಾಗ ನೀರು ಸೇರಿಸಿ. ಚೆನ್ನಾಗಿ ಕಲಸಿ ಇದರಲ್ಲಿ ಬಟ್ಟೆಯ ಕಲೆಯಾದ ಭಾಗವನ್ನು ಅದ್ದಿಡಿ. ಬಳಿಕ ಮೊದಲಿನ ವಿಧಾನದಂತೆ ತೊಳೆಯಿರಿ.
ಅಡುಗೆ ಸೋಡಾವನ್ನು ಇದೇ ವಿಧಾನದಲ್ಲಿ ಬಳಸಿ ಕಲೆ ದೂರ ಮಾಡಬಹುದು. ಮೊದಲಿಗೆ ಸ್ಪ್ರೇ ಬಾಟಲ್ ಗೆ ಒಂದು ಚಮಚ ಗ್ಲಿಸರಿನ್, ಲಿಕ್ವಿಡ್ ಸೋಪ್, ಹಾಗೂ ಒಂದೂವರೆ ಕಪ್ ನಷ್ಟು ಬಿಸಿ ನೀರು ಹಾಕಿ ಚೆನ್ನಾಗಿ ಮಿಶ್ರ ಮಾಡಿ. ಇದನ್ನು ಕಲೆಯಿರುವ ಭಾಗಕ್ಕೆ ಸ್ಪ್ರೇ ಮಾಡಿ 20 ನಿಮಿಷ ಪಕ್ಕಕ್ಕಿಡಿ. ಬಳಿಕ ತಣ್ಣೀರಿನಲ್ಲಿ ಮುಳುಗಿಸಿ ಅಡುಗೆ ಸೋಡಾ ಹಾಕಿ. ಇದರಿಂದ ಯಾವುದೇ ಕಠಿಣ ಕಲೆಯಾದರೆ ದೂರವಾಗುತ್ತದೆ.