LIFESTYLE:
ಬೇಸಿಗೆ ಬಿಸಲಿನಿಂದ ಜನರು ತತ್ತರಿಸಿ ಹೋಗಿದ್ದಾರೆ. ಸಿಕ್ಕಾಪಟ್ಟೆ ಸೆಖೆ ಇರುವುದರಿಂದ ಆರೋಗ್ಯದ ಮೇಲೆ ನಿಗಾವಹಿಸಬೇಕಾಗುತ್ತದೆ. ದಿನ ನಮ್ಮ ಆಹಾರ ಹೇಗಿರಬೇಕು ಹಾಗೂ ಈ ಸಮಯದಲ್ಲಿ ನಮ್ಮ ಉಡುಗೆ- ತೊಡುಗೆಗಳು ಯಾವ ರೀತಿ ಇರಬೇಕು ಅಂತಾ ತಿಳಿದುಕೊಳ್ಳಬೇಕಾಗುತ್ತದೆ. ಋತುಮಾನಕ್ಕೆ ತಕ್ಕಂತೆ ನಾವುಗಳು ಅಭ್ಯಾಸಗಳನ್ನು ಬದಲಾಯಿಸಿಕೊಳ್ಳುವುದರಿಂದ ಸಾಕಷ್ಟು ಆರೋಗ್ಯಕ್ಕೆ ಪ್ರಯೋಜನಗಳನ್ನು ಪಡೆಯಬಹುದು.
ಬಟ್ಟೆಯ ವಿಷಯಕ್ಕೆ ಬಂದರೆ ಬೇಸಿಗೆಯ ಬೇಗೆಯಿಂದಾಗಿ ದೇಹವು ಹೆಚ್ಚು ಬೆವರುತ್ತದೆ. ನೀವು ಕಾಟನ್ ಬಟ್ಟೆಗಳನ್ನು ಧರಿಸಿದಾಗ ಅದು ಸುಲಭವಾಗಿ ಹೀರಿಕೊಳ್ಳುತ್ತದೆ. ಇದರ ಪರಿಣಾಮ ದೇಹದಿಂದ ಬೆವರು ಆವಿಯಾಗುವುದರಿಂದ ನಮ್ಮ ದೇಹವು ಶಾಖವನ್ನು ತೆಗೆದುಕೊಳ್ಳುತ್ತದೆ. ಹೀಗಿರುವಾಗ ನಮ್ಮ ಉಡುಗೆ ಯಾವ ರೀತಿ ಇರಬೇಕು ಇಲ್ಲಿದೆ ನೋಡಿ ಮಾಹಿತಿ
ಬೇಸಿಗೆಯಲ್ಲಿ ಅತ್ಯಂತ ಆರಾಮದಾಯಕ ಬಟ್ಟೆಗಳಲ್ಲಿ ಕಾಟನ್ ಕೂಡ ಒಂದು. ಇದರ ಮೃದುತ್ವ ಮತ್ತು ಸೌಕರ್ಯದ ಕಾರಣದಿಂದ ಬಹುತೇಕ ಮಂದಿ ಕಾಟನ್ ಉಡುಪುಗಳನ್ನು ಧರಿಸಲು ಬಯಸುತ್ತಾರೆ. ಹತ್ತಿ ಬಟ್ಟೆಗಳನ್ನು ಹವಾಮಾನ ನಿರೋಧಕ ಉಡುಪುಗಳಾಗಿ ಸುಲಭವಾಗಿ ತಯಾರಿಸಬಹುದು.
ಆರಾಮದಾಯಕ ಬಟ್ಟೆ

ಕಾಟನ್ ಬಲವಾದ ಮತ್ತು ಬಾಳಿಕೆ ಬರುವ ಬಟ್ಟೆಯಾಗಿದೆ. ಅಲ್ಲದೆ, ಕಾಟನ್ ಬಟ್ಟೆಗಳನ್ನು ವಾಷಿಂಗ್ ಮಿಷಿನ್ನಿಂದ ಸುಲಭವಾಗಿ ತೊಳೆಯಬಹುದು. ವಾಸ್ತವವಾಗಿ, ಹಣ, ನೀರು ಮತ್ತು ಶಕ್ತಿಯನ್ನು ಉಳಿಸುತ್ತೀರಿ.
ತೇವಾಂಶ ನಿಯಂತ್ರಣ
ಕಾಟನ್ ಬಟ್ಟೆಗಳನ್ನು ಅತ್ಯಂತ ಆರಾಮದಾಯಕ ಬಟ್ಟೆಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಈ ರೀತಿಯ ಬಟ್ಟೆಗಳನ್ನು ಧರಿಸುವುದರಿಂದ ದೇಹಕ್ಕೆ ಗಾಳಿಯಾಡುವುದರ ಜೊತೆ ಜೊತೆಗೆ ತೇವಾಂಶವನ್ನು ನೀಡುತ್ತದೆ.