LIFESTYLE: - ಪವಿತ್ರಾ ಮಗುವಿನ ತಲೆಗೆ ಬೇಬಿ ಶಾಂಪೂವನ್ನು ಬಳಸಿ ಸ್ನಾನ ಮಾಡಿಸುತ್ತಾರೆ. ಇದು ನೆತ್ತಿಯನ್ನು ತೇವಾಂಶದಿಂದ ಕೂಡಿರುವಂತೆ ಮಾಡುತ್ತದೆ. ಹಾಗೇ ಮಗುವಿನ ಕಣ್ಣಿಗೆ ಉರಿಯನ್ನುಂಟುಮಾಡುವುದಿಲ್ಲ. ಆದರೆ ಈ ಬೇಬಿ ಶಾಂಪುವನ್ನು ಮಗುವಿನ ಕೂದಲಿಗೆ ಮಾತ್ರವಲ್ಲಿ ಈ ಕೆಲಸಗಳಿಗೂ ಬಳಸಬಹದು. ಬೇಬಿ ಶಾಂಪೂ ಚರ್ಮವನ್ನು ಮೃದುವಾಗಿಸುತ್ತದೆ. ಹಾಗಾಗಿ ಇದನ್ನು ಬಳಸಿ ಪ್ರತಿದಿನ ಮುಖವನ್ನು ತೊಳೆಯಬಹುದು. ಇದರಿಂದ ಚರ್ಮದ ಆರೋಗ್ಯ ಉತ್ತಮವಾಗಿರುತ್ತದೆ ಮತ್ತು ಚರ್ಮ ತೇವಾಂಶದಿಂದ ಕೂಡಿದ್ದು, ಹೊಳೆಯುತ್ತಿರುತ್ತದೆ. ಚರ್ಮಕ್ಕೆ ಅಂಟಿಸಿದ ನೋವಿನ ಬ್ಯಾಂಡೇಜ್ ಅನ್ನು ತೆಗೆಯಲು ಬೇಬಿ ಶಾಂಪೂವನ್ನು ಬಳಸಬಹುದು. ನೋವಿನ ಬ್ಯಾಡೇಂಜ್ ಚರ್ಮಕ್ಕೆ ಅಂಟಿಕೊಂಡಿರುವುದರಿಂದ ಅದನ್ನು ತೆಗೆಯುವಾಗ ಚರ್ಮಕ್ಕೆ ನೋವಾಗುತ್ತದೆ. ಆಗ ಬೇಬಿ ಶಾಂಪುವನ್ನು ಉಜ್ಜಿದರೆ ಬ್ಯಾಂಡೇಜ್ ಸುಲಭವಾಗಿ ಕಿತ್ತು ಬರುತ್ತದೆ. ಸೈನಸ್ ಮತ್ತು ಗೊರಕೆ ಸಮಸ್ಯೆ ನಿವಾರಿಸಲು ಬೇಬಿ ಶಾಂಪೂವನ್ನು ಬಳಸಬಹುದು. ನೀರಿಗೆ 1 ಚಮಚ ಬೇಬಿ ಶಾಂಪೂ ಮಿಕ್ಸ್ ಮಾಡಿ ಸ್ಟೀಮ್ ತೆಗೆದುಕೊಂಡರೆ ಸೈನಸ್ ಕಡಿಮೆಯಾಗುತ್ತದೆ. ಕಣ್ಣಿನ ರೆಪ್ಪೆಯಲ್ಲಿ ತುರಿಕೆ, ಕೆಂಪಾಗುವುದು, ಉರಿ ಕಂಡುಬಂದರೆ ಅದು ಬ್ಯಾಕ್ಟೀರಿಯಾ ಸೋಂಕು ಕಾರಣ, ಈ ಬ್ಯಾಕ್ಟೀರಿಯಾ ಸೋಂಕನ್ನು ನಿವಾರಿಸಲು ಬೇಬಿ ಶಾಂಪು ಮಿಕ್ಸ್ ಮಾಡಿದ ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆಯಿರಿ. ಆಭರಣಗಳನ್ನು ಧರಿಸುವುದರಿಂದ ಅದರ ಮೇಲೆ ಕೊಳೆ ಕುಳಿತು ಅದು ಹೊಳಪನ್ನು ಕಳೆದುಕೊಂಡಿರುತ್ತದೆ. ಈ ಆಭರಣಗಳನ್ನು ಬೇಬಿ ಶಾಂಪೂ ಹಚ್ಚಿ ಹಲ್ಲುಜ್ಜುವ ಬ್ರಷ್ ನಿಂದ ಉಜ್ಜಿ ವಾಶ್ ಮಾಡಿದರೆ ಆಭರಣಗಳು ಸ್ವಚ್ಛವಾಗಿ ಹೊಳೆಯುತ್ತವೆ.