LIFESTYLE: ತೂಕ ಹೆಚ್ಚಳ ನಿಮ್ಮ ದೇಹದ ಆಕಾರವನ್ನು ಕೆಡಿಸುತ್ತದೆ. ಹಾಗಾಗಿ ಹೆಚ್ಚುತ್ತಿರುವ ತೂಕವನ್ನು ನಿಯಂತ್ರಿಸಲು ಕೆಲವರು ಜಿಮ್ ಗೆ ಹೋಗುತ್ತಾರೆ. ಆದರೆ, ಕೆಲವೊಮ್ಮೆ ಅದರಿಂದ ತೂಕ ಕಡಿಮೆಯಾಗದಿದ್ದರೆ ಆಗ ಈ ಗಿಡಮೂಲಿಕೆಗಳನ್ನು ಸೇವಿಸಿ ತೂಕವನ್ನು ಕಡಿಮೆ ಮಾಡಿಕೊಳ್ಳಿ. ಇವು ಕೊಬ್ಬನ್ನು ಕರಗಿಸಿ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ನೀವು ತೂಕ ನಿಯಂತ್ರಿಸಲು ಬಯಸಿದ್ದರೆ ತ್ರಿಫಲವನ್ನು ಸೇವಿಸಿ. ಇದನ್ನು ಮೂರು ಗಿಡಮೂಲಿಕೆಗಳಾದ ನೆಲ್ಲಿಕಾಯಿ, ಅಳಲೆಕಾಯಿ ಮತ್ತು ತಾರೆಕಾಯಿ ಮೂರನ್ನು ಸೇರಿಸಿ ಪುಡಿ ತಯಾರಿಸಲಾಗುತ್ತದೆ. ಇದನ್ನು ಸೇವಿಸುವುದರಿಂದ ದೇಹದಿಂದ ವಿಷ ಹೊರಗೆ ಹೋಗುತ್ತದೆ. ಇದು ಹೊಟ್ಟೆಯನ್ನು ಸ್ವಚ್ಛಗೊಳಿಸುವುದರ ಜೊತೆಗೆ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ತೂಕವನ್ನು ನಿಯಂತ್ರಿಸಲು ದಾಸವಾಳ ಸೇವಿಸಿ. ಇದು ಕೂದಲು ಮತ್ತು ಚರ್ಮದ ಆರೋಗ್ಯಕ್ಕೂ ಉತ್ತಮ. ದಾಸವಾಳ ಹೂವನ್ನು ಸೇವಿಸುವುದರಿಂದ ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಣದಲ್ಲಿಡಬಹುದು. ಇದು ಕೊಬ್ಬನ್ನು ಕರಗಿಸುತ್ತದೆ. ಇದರಿಂದ ತೂಕ ಇಳಿಕೆಯಾಗುತ್ತದೆ. ಹಾಗಾಗಿ ದಾಸವಾಳ ಚಹಾ ತಯಾರಿಸಿ ಸೇವಿಸಿ. ಹುಣಸೆ ಹಣ್ಣು ತೂಕ ನಷ್ಟಕ್ಕೆ ನೈಸರ್ಗಿಕ ಪರಿಹಾರವಾಗಿದೆ. ಇದು ಹೊಟ್ಟೆಯಲ್ಲಿ ಶೇಖರಣೆಯಾದ ಕೊಬ್ಬನ್ನು ಕಡಿಮೆ ಮಾಡುತ್ತದೆ. ಇದು ಹೈಡ್ರಾಕ್ಸಿಸಿಟ್ರಿಕ್ ಆಮ್ಲವನ್ನು ಹೊಂದಿರುತ್ತದೆ. ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಇದು ಹಸಿವನ್ನು ಕಡಿಮೆ ಮಾಡುತ್ತದೆ. ಇದನ್ನು ಸೇವಿಸುವುದರಿಂದ ತೂಕ ನಿಯಂತ್ರಣದಲ್ಲಿರುತ್ತದೆ.