LIFESTYLE:
ಪವಿತ್ರಾ ಶೆಟ್ಟಿ
ಶೇವಿಂಗ್ ಮಾಡುವಾಗ ಕೆಲವೊಮ್ಮೆ ನಿಮಗೆ ತಿಳಿಯದಂತೆ ಮುಖದ ಇಲ್ಲವೇ ಗಡ್ಡದ ಮೇಲೆ ಗಾಯಗಳಾಗಬಹುದು. ಇದನ್ನು ದೂರಮಾಡಿ ನೀವು ಸುಂದರವಾಗಿ ಕಾಣುವಂತೆ ಹೇಗೆ ಮಾಡಬಹುದು ಎಂದರೆ…
ಅಲೋವೆರಾ ಗೆ ಗಾಯವನ್ನು ಬಹುಬೇಗ ಮಾಗಿಸುವ ಗುಣವಿದೆ. ನಿಮ್ಮ ಗಡ್ಡದ ಜಾಗದಲ್ಲಿ ಗಾಯವಾಗಿದ್ದರೆ ಅಲೋವೆರಾ ಜೆಲ್ ಅನ್ನು ಆ ಭಾಗಕ್ಕೆ ಹಚ್ಚಿ ನೋಡಿ.
ನಿಂಬೆರಸವನ್ನು ಗಾಯವಾದ ಜಾಗಕ್ಕೆ ಹಚ್ಚಿಕೊಂಡರೂ ಸೋಂಕು ನಿವಾರಣೆಯಾಗುತ್ತದೆ. ಹಚ್ಚಿದಾಕ್ಷಣ ಇದು ಉರಿದರೂ, ಬಳಿಕ ಬ್ಯಾಕ್ಟೀರಿಯಾ ಸಂತತಿ ಬೆಳೆಯದಂತೆ ನೋಡಿಕೊಳ್ಳುತ್ತದೆ. ಸೋಂಕು ಹರಡುವ ಸಾಧ್ಯತೆಯನ್ನು ತಪ್ಪಿಸುತ್ತದೆ.
ಟೀಟ್ರೀ ಆಯಿಲ್ ಅನ್ನು ಹಚ್ಚಿಕೊಂಡರೆ ಇದು ತ್ವಚೆಯ ಸಮಸ್ಯೆಯನ್ನು ನಿವಾರಿಸುತ್ತದೆ. ಇದು ಆಂಟಿ-ಬ್ಯಾಕ್ಟಿರಿಯಾ ಏಜೆಂಟ್ ಆಗಿ ಕೆಲಸ ಮಾಡುತ್ತದೆ. ಬಿಸಿ ನೀರಿನಿಂದ ಶಾಖ ಕೊಡುವುದರಿಂದಲು ಗಾಯ ಜೋರಾಗದು.
ಶೇವಿಂಗ್ ಮಾಡಿಕೊಳ್ಳುವ ಮುನ್ನ ಭಾಗಕ್ಕೆ ಸೋಪು ಹಚ್ಚಿಕೊಳ್ಳುವುದನ್ನು ಮರೆಯದಿರಿ. ಇದರಿಂದ ಗಾಯಗಳಾಗುವ ಸಾಧ್ಯತೆ ಕಡಿಮೆ.