LIFESTYLE: - ಪವಿತ್ರಾ ಹಲಸಿನ ಹಣ್ಣು ಎಲ್ಲರಿಗೂ ಪ್ರಿಯವಾದ ಹಣ್ಣು. ಇದು ತುಂಬಾ ಸಿಹಿಯಾಗಿದ್ದು ಇದನ್ನು ಹಲವು ಸಿಹಿತಿಂಡಿಗಳನ್ನು ತಯಾರಿಸಲು ಬಳಸುತ್ತಾರೆ. ಹಾಗೇ ಇದರ ಬೀಜ ಕೂಡ ತುಂಬಾ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಅನೇಕ ಪೋಷಕಾಂಶಗಳಿದ್ದು, ಇದನ್ನು ಬಳಸಿ ಚರ್ಮದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು. ಹಲಸಿನ ಹಣ್ಣಿನ ಬೀಜ 5, ಮೊಸರು 1ಕಪ್, ನಿಂಬೆ ರಸ 2 ಚಮಚ ಇವಿಷ್ಟನ್ನು ತೆಗೆದುಕೊಂಡು ಮಿಕ್ಸಿಯಲ್ಲಿ ರುಬ್ಬಿ ಪೇಸ್ಟ್ ಮಾಡಿ ಇದನ್ನು ನಿಮ್ಮ ಮುಖದ ಮೇಲೆ ಹಚ್ಚಿಕೊಳ್ಳಿ. ಇದು ಒಣಗಿದ ಬಳಿಕ ಅದನ್ನು ತಣ್ಣೀರಿನಿಂದ ಸ್ವಚ್ಛಗೊಳಿಸಿ. ಇದು ಮುಖದ ಮೇಲಿರುವ ಟ್ಯಾನಿಂಗ್ ಅನ್ನು ತೆಗೆದುಹಾಕಿ ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ. ಹಲಸಿನ ಹಣ್ಣಿನ ಬೀಜ 5, ಜೇನುತುಪ್ಪ 1 ಚಮಚ , ಹಾಲು 1 ಕಪ್ ಇವಿಷ್ಟನ್ನು ತೆಗೆದುಕೊಂಡು ಹಲಸಿನ ಬೀಜಗಳನ್ನು ಹಾಲಿನಲ್ಲಿ 2 ಗಂಟೆಗಳ ಕಾಲ ನೆನೆಸಿಡಿ. ಬಳಿಕ ಮಿಕ್ಸಿಯಲ್ಲಿ ರುಬ್ಬಿ ಪೇಸ್ಟ್ ಮಾಡಿ ಅದಕ್ಕೆ ಜೇನುತುಪ್ಪ ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿ ಮುಖದ ಮೇಲೆ ಹಚ್ಚಿಕೊಳ್ಳಿ. 20 ನಿಮಿಷಗಳ ಬಳಿಕ ಅದನ್ನು ತಣ್ಣೀರಿನಿಂದ ಸ್ವಚ್ಛಗೊಳಿಸಿ.