LIFESTYLE:
ಸಿಗರೇಟು ಹಚ್ಚುವುದೆಂದರೆ ನೆಲದ ಪಾಲಿಗೆ ಅತಿ ದೊಡ್ಡ ಹಾನಿ ತರುವ ಕೆಲಸಕ್ಕೆ ಮೊದಲು ಮಾಡಿದಂತೆ.
ವಿಶ್ವದ ಶೇ.2ರಷ್ಟು ವಾಯುಮಾಲಿನ್ಯ ಧೂಮಪಾನದಿಂದಲೇ ಆಗುತ್ತದೆ. ಸೇದಿ ಎಸೆದ ಸಿಗರೇಟ್ ತುಂಡುಗಳದ್ದೇ ವರ್ಷಕ್ಕೆ 8 ಲಕ್ಷ 45 ಸಾವಿರ ಟನ್ ಕಸದ ಗುಡ್ಡೆಯಾಗುತ್ತದೆ.
ತಂಬಾಕು ಬೆಳೆ ವಿಶ್ವದ ಶೇ. 5ರಷ್ಟು ಅರಣ್ಯನಾಶಕ್ಕೆ ಕಾರಣ. ತಂಬಾಕು ಬೆಳೆಯಲು ಮರ ಕಡಿಯುವುದು ಹೆಚ್ಚುತ್ತಲೇ ಇದೆ. ತಂಬಾಕು ಎಲೆ ಒಣಗಿಸಲು ಉರುವಲಿಗಾಗಿಯೇ ವರ್ಷವೂ 11 ಲಕ್ಷ 40 ಸಾವಿರ ಟನ್ ಕಟ್ಟಿಗೆ ವ್ಯಯವಾಗುತ್ತದೆ. ಒಂದು ತಂಬಾಕು ಗಿಡ ಬೆಳೆಯಲು ಆಲೂ ಗಿಡಕ್ಕೆ ಬೇಕಿರುವುದಕ್ಕಿಂತಲೂ ಹತ್ತು ಪಟ್ಟು ಹೆಚ್ಚು ನೀರು ಬೇಕು.
ಪ್ರತಿ ವರ್ಷ 6 ಲಕ್ಷ ಕೋಟಿ ಸಿಗರೇಟ್ಗಳ ಉತ್ಪಾದನೆಯಾಗುತ್ತದೆ. ಇದರಲ್ಲಿ ಶೇ.90ರಷ್ಟು ಉತ್ಪಾದನೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲೇ ಆಗುತ್ತಿದೆ.
ತಂಬಾಕು ತೋಟದಲ್ಲಿ ಕೆಲಸ ಮಾಡುವವರಂತೂ ಕ್ರಿಮಿನಾಶಕದಂಥ ಅಪಾಯಕ್ಕೆ ಒಡ್ಡಿಕೊಂಡಿರುತ್ತಾರೆ. ಬಹಳ ಬೆಲೆ ತೆರಬೇಕಾದ ಹಾನಿಯಿದು. ಪರಿಸರ ಮತ್ತು ಮತ್ತು ಮನುಷ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟುಮಾಠುತ್ತದೆಂಬ ಕಾರಣಕ್ಕಾಗಿಯೇ ಅಭಿವೃದ್ದಿ ಹೊಂದಿದ ಬಹುತೇಕ ದೇಶಗಳಲ್ಲಿ ತಂಬಾಕಿಗೆ ನಿಷೇಧ ಹೇರಲಾಗಿದೆ.
ವಿಶ್ವದ ಇಂಧನದ ಬಹುಪಾಲನ್ನು ಕೂಡ ತಂಬಾಕು ಉದ್ಯಮವೇ ತಿಂದುಹಾಕುತ್ತದೆ. ಒಂದು ಲೆಕ್ಕಾಚಾರದ ಪ್ರಕಾರ, ಅದು ಬಳಸುವ ವಾರ್ಷಿಕ ಇಂಧನ ಪ್ರಮಾಣ 20 ಲಕ್ಷ ಕಾರುಗಳ ತಯಾರಿಕೆಗೆ ಬೇಕಾಗುವಷ್ಟು.