LIFESTYLE: - ಪವಿತ್ರಾ ಸೂಪ್ ಆರೋಗ್ಯಕ್ಕೆ ತುಂಬಾ ಉತ್ತಮ. ಸೂಪ್ ನಲ್ಲಿ ವಿವಿಧ ಬಗೆಯ ಪೋಷಕಾಂಶಗಳಿವೆ. ಇದನ್ನು ಯಾವುದೇ ಸಮಯದಲ್ಲೂ ಕೂಡ ಸವಿಯಬಹುದು. ಇದನ್ನು ನಿಯಮಿತವಾಗಿ ಸೇವಿಸಿದರೆ ತೂಕವನ್ನು ಕೂಡ ಇಳಿಸಿಕೊಳ್ಳಬಹುದು. ಇದು ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮವಾಗಿರಿಸುತ್ತದೆ. ಆದರೆ, ಸೂಪ್ ಅನ್ನು ತಯಾರಿಸುವಾಗ ಇಂತಹ ತಪ್ಪನ್ನು ಮಾಡಿದರೆ ಸೂಪ್ ರುಚಿ ಕೆಡುತ್ತದೆ. ಹಾಗಾಗಿ ಅದು ಏನೆಂಬುದನ್ನು ತಿಳಿದುಕೊಳ್ಳಿ. -ಸೂಪ್ ತಯಾರಿಸುವಾಗ ಕುದಿ ಬಂದ ಬಳಿಕ ಕಡಿಮೆ ಉರಿಯಲ್ಲಿ ಬೇಯಿಸಬೇಕು. ಅದನ್ನು ಹೆಚ್ಚಿನ ಉರಿಯಲ್ಲಿ ಬೇಯಿಸಿದರೆ ಸೂಪ್ ನ ರುಚಿ ಹದಗೆಡುತ್ತದೆ. ಇದನ್ನು ಕಡಿಮೆ ಉರಿಯಲ್ಲಿ ಬೇಯಿಸಿದರೆ ಅದರ ಪೌಷ್ಟಿಕಾಂಶ ಉಳಿಯುತ್ತದೆ. -ಸೂಪ್ ತಯಾರಿಸುವಾಗ ಉಪ್ಪಿನ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಉಪ್ಪು ಸೇರಿಸುವಲ್ಲಿ ನೀವು ತಪ್ಪು ಮಾಡಿದರೆ ಅದು ಇಡೀ ಸೂಪಿನ ರುಚಿಯನ್ನು ಹಾಳು ಮಾಡುತ್ತದೆ. ಹಾಗೇ ಸೂಪ್ ಗೆ ಮಸಾಲೆಗಳನ್ನು ಸರಿಯಾದ ಪ್ರಮಾಣದಲ್ಲಿ ಹಾಕಿ. ಮತ್ತು ಅದಕ್ಕೆ ತಕ್ಕಂತೆ ಉಪ್ಪನ್ನು ಬಳಸಿ. -ಸೂಪ್ ರುಚಿಯನ್ನು ಹೆಚ್ಚಿಸಲು ತರಕಾರಿಗಳನ್ನು ಅತಿಯಾಗಿ ಬೇಯಿಸುವುದನ್ನು ತಪ್ಪಿಸಿ. ಇದರಿಂದ ಸೂಪ್ ಹಾಳಾಗುತ್ತದೆ. ಸೂಪ್ ತಯಾರಾಗಲು ತರಕಾರಿ ಎಷ್ಟು ಹೊತ್ತು ಬೇಯಿಸಬೇಕು ಎಂಬುದನ್ನು ತಿಳಿದು ಸರಿಯಾದ ಸಮಯದವರೆಗೆ ಬೇಯಿಸಿ. -ಸೂಪ್ ತಯಾರಿಸುವಾಗ ಟೊಮೆಟೊಗಳನ್ನು ಸೇರಿಸಬಾರದು. ಅದರಲ್ಲಿರುವ ಆಮ್ಲವು ಬೀನ್ಸ್ ಮತ್ತು ತರಕಾರಿಗಳ ರುಚಿಯನ್ನು ಕೆಡಿಸುತ್ತದೆ. ಇದರಿಂದ ಸೂಪ್ ಚೆನ್ನಾಗಿರಲ್ಲ. ಹಾಗಾಗಿ ಸೂಪ್ ಗೆ ಟೊಮೆಟೊ ಸೇರಿಸಬೇಡಿ. ಒಂದು ವೇಳೆ ಟೊಮೆಟೊ ಹಾಕಲು ಬಯಸುವವರು ಕೊನೆಯಲ್ಲಿ ಸೂಪ್ ಸೇರಿಸಿ.