LIFESTYLE:
ಪವಿತ್ರಾ ಶೆಟ್ಟಿ
ಹಲವು ಪೋಷಕಾಂಶಗಳು ಆಗರವಾಗಿರುವ ಬೀಟ್‌ರೂಟ್ ಸೇವನೆಯಿಂದ ದೇಹಕ್ಕೆ ಹಲವು ಲಾಭಗಳನ್ನು ಪಡೆದುಕೊಳ್ಳುವುದು ಮಾತ್ರವಲ್ಲ ಇದರಿಂದ ಸೌಂದರ್ಯ ವೃದ್ಧಿಯನ್ನು ಮಾಡಿಕೊಳ್ಳಬಹುದು. ಆ ಬಗ್ಗೆ ತಿಳಿಯೋಣ ಬನ್ನಿ.
ನಿಮ್ಮ ತ್ವಚೆ ಹೊಳಪಿನಿಂದ ತುಂಬಬೇಕು ಎಂದಾದರೆ ಬೀಟ್‌ರೂಟ್ ಅನ್ನು ತುರಿದು ಮುಖಕ್ಕೆ ಹಚ್ಚಿಕೊಳ್ಳಿ. ಇದರಿಂದ ತ್ವಚೆಯಿಂದ ಬಿಡುಗಡೆಯಾಗುವ ಹೆಚ್ಚಿನ ಎಣ್ಣೆಯಂಶ ನಿಯಂತ್ರಣವಾಗುತ್ತದೆ ಮತ್ತು ಮೃದುವಾದ ತ್ವಚೆ ನಿಮ್ಮದಾಗುತ್ತದೆ.
ಬೀಟ್‌ರೂಟ್ ಫೇಸ್ ಪ್ಯಾಕ್ ಮಾಡುವಾಗ ಅದನ್ನು ಸ್ವಚ್ಛವಾಗಿ ತೊಳೆದು ಸಿಪ್ಪೆ ತೆಗೆದು ಚೆನ್ನಾಗಿ ಕುದಿಸಿ. ಬೆಂದು ಮೆತ್ತಗಾದ ಬಳಿಕ ಮಿಕ್ಸಿಯಲ್ಲಿ ಹಾಕಿ ರುಬ್ಬಿ. ಈ ಪೇಸ್ಟ್ ಗೆ 2 ಚಮಚ ಚೈನಾ ಕ್ಲೇ ಪುಡಿ ಸೇರಿಸಿ.
ಈ ಪೇಸ್ಟನ್ನು ನಿಮ್ಮ ಮುಖ ಹಾಗೂ ಕುತ್ತಿಗೆಯ ಭಾಗಕ್ಕೆ ಹಚ್ಚಿಕೊಳ್ಳಿ. 20 ನಿಮಿಷದ ಬಳಿಕ ತಣ್ಣೀರಿನಿಂದ ಮುಖ ತೊಳೆಯಿರಿ. ಇದರಿಂದ ಮೊಡವೆ ಕಲೆಗಳು ಕೂಡ ದೂರವಾಗುತ್ತದೆ. ವಾರದಲ್ಲಿ ಎರಡು ಬಾರಿ ಹೀಗೆ ಮಾಡುವುದರಿಂದ ನಿಮ್ಮ ತ್ವಚೆಗೆ ವಿಶೇಷ ಮೆರುಗು ದೊರೆಯುತ್ತದೆ