LIFESTYLE:
ನೆಲ್ಲಿಕಾಯಿ ಅಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಅದರಲ್ಲೂ ಬೆಟ್ಟದ ನೆಲ್ಲಿಕಾಯಿ ಅಂದರೆ ಸಾಕು ಆರೋಗ್ಯಕ್ಕೆ ಉತ್ತಮ ಮದ್ದಾಗಿದೆ. ಇದು ಅನೇಕ ಆರೋಗ್ಯ ಪ್ರಯೋಜನೆಗಳನ್ನು ಹೊಂದಿದೆ. ಇದರಲ್ಲಿ ವಿಟಮಿನ್ ಸಿ ಅಂಶಗಳನ್ನು ಒಳಗೊಂಡಿರುತ್ತದೆ. ನೆಲ್ಲಿಕಾಯಿ ನಮ್ಮ ದೇಹಕ್ಕೆ ಅಗತ್ಯವಾದ ಕಬ್ಬಿಣ ಮತ್ತು ಕ್ಯಾಲ್ಸಿಯಂ ಅಂಶವನ್ನು ಒದಗಿಸುತ್ತದೆ. ಚರ್ಮ ಕೂದಲಿಗೆ ಹಾಗೂ ತೂಕ ಇಳಿಕೆಗೂ ನೆಲ್ಲಿಕಾಯಿ ತುಂಬಾ ಪ್ರಯೋಜನಕಾರಿಯಾಗಿದೆ.
ನೆಲ್ಲಿಕಾಯಿ ಚರ್ಮಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ತೆಗೆದುಹಾಕಲು ಮತ್ತು ಕೂದಲನ್ನು ಬಲಿಷ್ಠ ಮತ್ತು ಆರೋಗ್ಯಕರವಾಗಿಸಲು ಸಹಾಯ ಮಾಡುತ್ತದೆ. ಇದರ ಜತೆಗೆ ನೆಲ್ಲಿಕಾಯಿ ದೇಹದ ತೂಕವನ್ನು ಕೂಡ ಕಡಿಮೆ ಮಾಡುತ್ತದೆ.
ನೆಲ್ಲಿಕಾಯಿ ಜ್ಯೂಸ್ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ನೆಲ್ಲಿಕಾಯಿ ಜ್ಯೂಸ್ ನೀವು ಸೇವಿಸುವ ಆಹಾರದಿಂದ ಎಲ್ಲಾ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಜೀರ್ಣಕ್ರಿಯೆಯಲ್ಲಿನ ಈ ಸುಧಾರಣೆಯು ದೇಹವು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಲು ಮತ್ತು ತ್ಯಾಜ್ಯವು ದೇಹದಿಂದ ಹೊರಹಾಕಲು ಸಹಾಯ ಮಾಡುತ್ತದೆ.
ಪ್ರತಿದಿನ ನೆಲ್ಲಿಕಾಯಿ ಜ್ಯೂಸ್ ಸೇವಿಸುವುದರಿಂದ ದೇಹದಿಂದ ಎಲ್ಲಾ ಹಾನಿಕಾರಕ ಜೀವಾಣುಗಳನ್ನು ಹೊರಹಾಕಬಹುದು. ಹಾನಿಕಾರಕ ಜೀವಾಣುಗಳು ಜೀರ್ಣಾಂಗ ವ್ಯವಸ್ಥೆಯಲ್ಲಿ ಸಮಸ್ಯೆ ಉಂಟುಮಾಡುತ್ತವೆ.