LIFESTYLE:
ಇತ್ತಿಚಿನ ದಿನಗಳಲ್ಲಿ ಮೀನುಗಾರಿಕೆಗೆ ಹೆಚ್ಚು ಪ್ರಾಶ್ಯಸ್ತ್ಯ ನೀಡಲಾಗಿದೆ. ಆದರೆ ಈ ಮೀನು ಸಾಕಾಣಿಕೆ ಮಾಡೋದು ಮತ್ತು ಅದರಿಂದ ಸಿಗುವ ಲಾಭದ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಹೌದು ಇದರಲ್ಲಿ ಲಾಭವೂ ಇದೆ, ನಷ್ಟವೂ ಇದೆ. ಹೀಗಾಗಿ ಮೊದಲು ಮೀನು ಸಾಕಾಣಿಕೆ ಬಗ್ಗೆ ಹೆಚ್ಚು ತಿಳಿದಕೊಳ್ಳಬೇಕು. ಮೀನು ಸಾಕಬೇಕೆಂದರೆ ಮೊದಲು ಕೆರೆ ಅಥವಾ ತೊಟ್ಟಿ ಮಾಡಬೇಕು. ನಿರ್ಮಿಸಲು ಭೂಮಿ ಬೇಕು. ಕೊಳ ಅಥವಾ ಮೀನುಗಾರಿಕೆ ಮೈದಾನವನ್ನು ರಚಿಸುವುದು ಮೊದಲ ಹಂತವಾಗಿದೆ. ನಂತರ ತಜ್ಞರ ಸಲಹೆ ಮೇರೆಗೆ ಅತ್ಯುತ್ತಮ ತಂತ್ರಜ್ಞಾನದೊಂದಿಗೆ ಮೀನು ಸಾಕಣೆ ಆರಂಭಿಸಲಾಗಿದೆ.
ಭಾರತ ಕೃಷಿ ಪ್ರಧಾನ ದೇಶ. 55 ರಿಂದ 60 ರಷ್ಟು ಜನಸಂಖ್ಯೆಯು ಕೃಷಿಯ ಮೇಲೆ ಅವಲಂಬಿತವಾಗಿದೆ, ಆದರೆ ಹದಗೆಡುತ್ತಿರುವ ಮಣ್ಣಿನ ಗುಣಮಟ್ಟ ಮತ್ತು ಸಾಂಪ್ರದಾಯಿಕ ಕೃಷಿಯಲ್ಲಿ ಸೌಲಭ್ಯಗಳ ಕೊರತೆಯಿಂದಾಗಿ ರೈತರು ಇತರ ಪರ್ಯಾಯಗಳನ್ನು ಹುಡುಕುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ಮೀನುಗಾರಿಕೆ ಉತ್ತಮ ಆಯ್ಕೆಯಾಗಿದೆ.
ಮೀನು ಸಾಕಣೆಗೆ ಹಲವು ತಂತ್ರಗಳಿವೆ. ಆದರೆ, ಮೀನುಗಾರಿಕೆ ಇಲಾಖೆಯು ಬಯೋ ಫ್ಲಾಕ್ ತಂತ್ರಜ್ಞಾನದ ಮೂಲಕ ಮೀನು ಕೃಷಿ ಮಾಡಲು ರೈತರಿಗೆ ಉತ್ತೇಜನ ನೀಡುತ್ತಿದೆ. ತಜ್ಞರ ಪ್ರಕಾರ, ಈ ವಿಧಾನದ ಪ್ರಮುಖ ಅಂಶವೆಂದರೆ ಕಡಿಮೆ ನೀರು, ಕಡಿಮೆ ಸ್ಥಳ, ಕಡಿಮೆ ವೆಚ್ಚ, ಕಡಿಮೆ ಸಮಯದ ಕೃಷಿ ಕೆಲಸಗಳ ಜೊತೆಗೆ ಹೆಚ್ಚು ಲಾಭ ನೀಡುತ್ತದೆ.