LIFESTYLE:
ರಾತ್ರಿ ನಿದ್ರೆಯ ವೇಳೆ ಹಾಸಿಗೆಯಲ್ಲಿ ಮೂತ್ರ ವಿಸರ್ಜಿಸುವುದು ಚಿಕ್ಕ ಮಕ್ಕಳಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆ. ಪ್ರತಿಶತ 0.5ರಷ್ಟು ವಯಸ್ಕರಲ್ಲೂ ಈ ಸಮಸ್ಯೆ ಕಂಡುಬರುತ್ತದೆ.ಕೆಲವು ಮಕ್ಕಳು 3ರಿಂದ 5 ವರ್ಷ ವಯಸ್ಸಿನೊಳಗೆ ಮಲ, ಮೂತ್ರ ವಿಸರ್ಜನೆಯ ಮೇಲೆ ಸಂಪೂರ್ಣ ಹತೋಟಿ ಸಾಧಿಸಿದ್ರೆ, ಮತ್ತೊಂದಷ್ಟು ಮಕ್ಕಳು ಸುಮಾರು 7 ವರ್ಷದ ವರೆಗೂ ಹಾಸಿಗೆಯಲ್ಲಿ ಮೂತ್ರ ವಿಸರ್ಜಿಸುತ್ತಾರೆ. ಇದ್ರಿಂದ ಹೆತ್ತವರಿಗೆ ಮಕ್ಕಳನ್ನ ಬೇರೆ ಕಡೆ ಕರೆದುಕೊಂಡು ಹೋಗಲು ಮುಜುಗರವಾಗುತ್ತೆ. ಹಾಗಾದ್ರೆ ಬನ್ನಿ ಮಕ್ಕಳು ಹಾಸಿಗೆಯಲ್ಲಿ ಮೂತ್ರ ವಿಸರ್ಜಿಸ್ತಿದ್ರೆ ಅದನ್ನ ಹೇಗೆ ಕಂಟ್ರೋಲ್ ಮಾಡೋದು ಅನ್ನೋದನ್ನ ಹೇಳ್ತಿವಿ ಇವತ್ತಿನ ಲೇಖನದಲ್ಲಿ.
- ಒಂಟೆಯ ಕೂದಲಿನ ದಾರವನ್ನ ಸಿದ್ಧಪಡಿಸಿ, ಅದನ್ನು ಮಗುವಿನ ಬಲ ತೊಡೆಗೆ ಕಟ್ಟುವುದಿರಂದ ಮಗು ರಾತ್ರಿ ಮಲಗಿದಾಗ ಹಾಸಿಗೆ ಒದ್ದೆ ಮಾಡುವುದಿಲ್ಲ.
- ಸಾಸಿವೆಯನ್ನು ಅರೆದು ಮಗುವಿಗೆ ತಿನ್ನಿಸುವುದರಿಂದ ಮಗು ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡುವುದಿಲ್ಲ.
- ಮಂಗಳವಾರ ಅಥವಾ ಶನಿವಾರದ ದಿನದಂದು ಸ್ಮಶಾನದಿಂದ ಸ್ಪಲ್ಪ ಮಣ್ಣನ್ನು ತಂದು ಅದನ್ನು ಬೆಳ್ಳಿಯ ತಾಯತದಲ್ಲಿ ತುಂಬಿ, ಅದನ್ನು ಮಗುವಿನ ಕೈಯಿಂದಲೇ ಅರಳೀ ವೃಕ್ಷದ ಕೆಳಗೆ ಹುದುಗಿಸಿ ಇರಿಸಬೇಕು. ಹೀಗೆ ಮಾಡೋದ್ರಿಂದ ಮಗ ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡೋದಿಲ್ಲ.
- ಮಂಗಳವಾರದಂದು ಗುಲಾಬಿ ಅಗರಬತ್ತಿಯನ್ನು ಉರಿಸಿ, ಅದರ ಭಸ್ಮವನ್ನು ಅಖಂಡಿತ ಭೂರ್ಜ್ವ ಪತ್ರದ ಮೇಲೆ ಹಾಕಿ, ಅದರಲ್ಲಿ ಸ್ವಲ್ಪ ಗಂಗಾಜಲ ಸೇರಿಸಿ, ಈ ಮಿಶ್ರಣವನ್ನು ಮಗುವಿನ ನಾಭಿ ಹಾಗೂ ಉದರದ ಮೇಲೆ ಲೇಪಿಸಬೇಕು. ಈ ಉಪಾಯವನ್ನು ಒಂದು ದಿನ ಬಿಟ್ಟು ಒಂದು ದಿನದಂತೆ ಕೆಲವು ಬಾರಿ ಮಾಡುವುದರಿಂದ ಮಕ್ಕಳು ಹಾಸಿಗೆಯಲ್ಲಿ ಮೂತ್ರ ಮಾಡುವುದು ಕಮ್ಮಿ ಮಾಡುತ್ತಾರೆ.