LIFESTYLE:
ಚಿಕ್ಕ ಮಕ್ಕಳು ಮನೆಯಲ್ಲಿದ್ರೆ ಹೆತ್ತವ್ರಿಗೆ ಅವರನ್ನ ನೋಡಿಕೊಳ್ಳುವುದೆ ದೊಡ್ಡ ಕೆಲಸ. ಮಗು ಸ್ವಲ್ಪ ಅತ್ತರು ಹಠ ಮಾಡಿದ್ರು ಹೆತ್ತ ಕರುಳು ವಿಲವಿಲ ಅಂತ ಒದ್ದಾಡಿ ಬಿಡುತ್ತೆ. ಮನೆಗೆ ಯಾರುದ್ರು ಬಂದು ಹೋದರೆ ಎಲ್ಲಿ ನನ್ನ ಮಗುವಿಗೆ ದೃಷ್ಟಿ ತಾಗಿ ಬಿಟ್ಟಿದೆಯೋ ಎಂದು ಮರಗುತ್ತಾಳೆ. ಹಾಗಾದರೆ ಮಕ್ಕಳಿಗೆ ದೃಷ್ಟಿ ತಾಗಿದಾಗ ಯಾವ ರೀತಿಯಲ್ಲಿ ನಿವಾರಿಸಬೇಕು ಅನ್ನೋ ಗೊಂದಲ ಸಾಕಷ್ಟು ತಾಯಂದಿರಿಗೆ ಇರುತ್ತೆ. ಬನ್ನಿ ಹಾಗಾದ್ರೆ ಇವತ್ತಿನ ಲೇಖನದಲ್ಲಿ ಮಕ್ಕಳಿಗೆ ದೃಷ್ಟಿ ತಾಗಿದಾಗ ಯಾವ ರೀತಿ ನಿವಾಳಿಸೋದು ಅನ್ನೋದನ್ನ ತಿಳಿಸಿಕೊಡ್ತಿವಿ.
- ಯಾವ ಪುರುಷ ಅಥವಾ ಸ್ತ್ರೀಯ ದೃಷ್ಟಿ ಮಗುವಿಗೆ ತಗಲಿರುತ್ತದೋ ಅವರು ಮಗುವಿನ ತಲೆಯ ಮೇಲೆ ಕೈಯನ್ನು ತಿರುಗಿಸುವುದರಿಂದ ದೃಷ್ಟಿದೋಷ ದೂರವಾಗುತ್ತದೆ.
- ಪುಟ್ಟ ಮಗುವಿನ ತುಂಟಾಟದಿಂದ ಕೆಲವೊಮ್ಮೆ ತಂದೆ, ತಾಯಿ ಅಥವಾ ಬಂಧುಗಳು ಮೋಹವಶರಾಗುವುದರಿಂದ ಕೂಡ ಮಗುವಿಗೆ ದೃಷ್ಟಿದೋಷ ತಗಲುತ್ತದೆ. ಇಂಥ ಸ್ಥಿತಿಯಲ್ಲಿ ಎಂಜಲು ಬಾಯಿಯಿಂದ ಮಗುವಿನ ಮೇಲೆ ಥೂ ಥೂ ಥೂ ಎಂದು ಉಗಿದಂತೆ ಮಾಡಿ ಊದುವುದರಿಂದ ಹಿತವಾಗುತ್ತದೆ
- ದೃಷ್ಟಿ ದೋಷ ತಗುಲಿದ ಮಗುವನ್ನು ಹನುಮಂತ ದೇವರ ಮಂದಿರಕ್ಕೆ ಕರೆದೊಯ್ದು, ಹನುಮಂತನ ಚರಣದ ಸಿಂಧೂರವನ್ನು ಮಗುವಿನ ಹಣೆಗೆ ಇರಿಸಬೇಕು. ಆ ದಿನ ಮಂಗಳವಾರ, ಶನಿವಾರ ಅಥವಾ ಹುಣ್ಣಿಮೆ ಆಗಿದ್ದರೆ ಮಗು ಶೀಘ್ರವಾಗಿ ಚೇತರಿಸಿಕೊಳ್ಳುತ್ತದೆ.
- ಚಿಕ್ಕ ಮಕ್ಕಳ ಕಣ್ಣುಗಳಿಗೆ ಹಾಗೂ ಹಣೆಗೆ ಕಾಡಿಗೆಯನ್ನು ಲೇಪಿಸುವುದರಿಂದ ಅವರು ದೃಷ್ಟಿ ದೋಷಕ್ಕೆ ಗುರಿಯಾಗುವುದಿಲ್ಲ.
- ಮಧ್ಯಾಹ್ನದ 12 ಗಂಟೆಯ ಸಮಯದಲ್ಲಿ ಸಾಸಿವೆ, ಉಪ್ಪು, ಒಣ ಮೆಣಸಿನಕಾಯಿ ಈ ಮೂರನ್ನು ಮುಷ್ಟಿಯಲ್ಲಿ ಹಿಡಿದು ಮಗುವಿನ ಮೇಲೆ ಏಳು ಬಾರಿ ನಿವಾಳಿಸಿ ಬೆಂಕಿಯಲ್ಲಿ ಹಾಕಬೇಕು. ಈ ಉಪಾಯವನ್ನು ಮೌನವಾಗಿದ್ದುಕೊಂಡೇ ಮಾಡಬೇಕು.
- ಶುದ್ಧವಾದ ಗೋಮಯದಿಂದ ಪ್ರಣತಿಯೊಂದನ್ನ ನಿರ್ಮಿಸಿ, ಅದರಲ್ಲಿ ಬತ್ತಿಯನ್ನಿರಿಸಿ, ಸಾಸಿವೆ ಎಣ್ಣೆ ಹಾಕಿ, ಮೇಲೆ ಸ್ವಲ್ಪ ಬೆಲ್ಲವನ್ನಿರಿಸಬೇಕು. ನಂತರ ಅದನ್ನು ಮನೆಯ ಮುಖ್ಯ ದ್ವಾರದ ಹೊಸ್ತಿಲ ಮೇಲೆ ಬೆಳಗಿಸಿ, ಆ ದೀಪವನ್ನು ದೃಷ್ಟಿ ತಲುಲಿದ ಮಗುವಿಗೆ ತೋರಿಸಬೇಕು. ನಂತರ ಅದನ್ನು ಪಾದರಕ್ಷೆಯಿಂದ ಆರಿಸಬೇಕು. ಹೀಗೆ ಮಾಡುವುದರಿಂದ ದೃಷ್ಟಿ ದೋಷ ನಿವಾರಣೆಯಾಗುತ್ತದೆ.
- ಹಸುವಿನ ಹಸಿ ಹಾಲನ್ನು ಚಿಕ್ಕ ಮಣ್ಣಿನ ಪಾತ್ರೆಯಲ್ಲಿ ಹಾಕಿ, ಎಡಗೈಯಲ್ಲಿ ಹಿಡಿದು ಅದನ್ನು ಮಗುವಿನ ಶಿರದ ಮೇಲೆ ಏಳು ಬಾರಿ ನಿವಾಳಿಸಿ ನಂತರ ಆ ಹಾಲನ್ನು ನಾಯಿಗೆ ಹಾಕುವುದರಿಂದ ದೃಷ್ಟಿ ದೋಷ ದೂರವಾಗುತ್ತದೆ.
- ಪಟಕದ ತುಂಡೊದನ್ನು ದೃಷ್ಟಿ ದೋಷ ತಗುಲಿದ ಮಗುವಿನ ಮೇಲೆ ಏಳು ಬಾರಿ ನಿವಾಳಿಸಿ ಒಲೆಗೆ ಹಾಕಬೇಕು. ನಿತ್ಯ ನಿಯಮಿತವಾಗಿ ಮೂರು ದಿನಗಳವರೆಗೆ ಈ ಉಪಾಯವನ್ನು ಮಾಡುವುದರಿಂದ ದೃಷ್ಟಿ ದೋಷ ಶಮನವಾಗುತ್ತದೆ.
- ಪುಷ್ಯ ನಕ್ಷತ್ರ ಯುಕ್ತ ಮಂಗಳವಾರದಂದು ಯಾವುದಾದರೂ ಬೇವಿನ ಗಿಡದ ಕೆಳಗೆ ಕುಳಿತು ಸ್ಯಾಮ ಗೌರ ಸುಂದರ ದೋಲು ಜೋರೀ | ನಿರಕಹಿಂ ಛಬಿ ಜನನೀಂ ತೃನ ತೋರೀ || ಈ ಮಂತ್ರವನ್ನು ಹತ್ತು ಸಾವಿರ ಸಂಖ್ಯೆಯಷ್ಟು ಜಪ ಮಾಡಿ ಸಿದ್ಧಿಗೊಳಿಸಿಕೊಳ್ಳಬೇಕು. ನಂತರ ಯಾವ ಮಗುವಿಗಾದರೂ ದೃಷ್ಟಿ ತಗುಲಿದಾಗ ಬೇವಿನ ಎಲೆಯನ್ನು ಕೈಯಲ್ಲಿ ಹಿಡಿದು ಈ ಮಂತ್ರವನ್ನು ಏಳು ಬಾರಿ ಉಚ್ಚರಿಸುತ್ತ ಏಳು ಬಾರಿ ನಿವಾಳಿಸಬೇಕು.