LIFESTYLE:
ಮನೆಯಲ್ಲಿ ಸಣ್ಣ ಮಕ್ಕಳಿದ್ರೆ ಮನೆ ಮಂದಿಗೆಲ್ಲಾ ಅವ್ರಿಗೆ ಊಟ ಮಾಡಿಸೋದೆ ದೊಡ್ಡ ತಲೆ ನೋವು. ಅನ್ನ ಬಾಯಿಗೆ ಹಾಕಿದ್ರೆ ಉಗಿಯೋದು, ಮನೆ ತುಂಬೆಲ್ಲಾ ಹರಡಿ ಬಿಡೋದು, ಹಾಲು ಕುಡಿಸಿದ್ರೆ ವಾಕರಿಸೋದು ಮಾಡ್ತಾರೆ. ಇದ್ರಿಂದ ಮನೆಯವ್ರಿಗೆಲ್ಲಾ ಮಕ್ಕಳಿಗೆ ಊಟ ಮಾಡಿಸೋದು ಅಂದ್ರೆನೆ ಯೋಚನೆ ಶುರುವಾಗುತ್ತೆ. ಹಾಗಾದ್ರೆ ಮಕ್ಕಳು ಹಾಲು ಕುಡಿಯಲು ಹಠ ಮಾಡಿದಾಗ ಏನು ಮಾಡ್ಬೇಕು? ಅನ್ನೋದನ್ನ ಓದಿ ಈ ಲೇಖನದಲ್ಲಿ.
- ಕೆಲವೊಮ್ಮೆ ಮಕ್ಕಳು ಹಾಲನ್ನು ಕುಡಿಯುವುದಿಲ್ಲ. ಕುಡಿಸಲು ಹೋದರೆ ಹಠ ಮಾಡುತ್ತಾರೆ.ಇಂಥ ಸ್ಥಿತಿಯ ನಿವಾರಣೆಗಾಗಿ ಮಂಗಳವಾರ ಅಥವಾ ಶನಿವಾರದಂದು ಮಣ್ಣಿನ ಪಾತ್ರೆಯಲ್ಲಿ ಕಾಯಿಸಿದ ಹಸಿ ಹಾಲನ್ನು ಹಾಕಿ, ಅದರಿಂದ ಮಗುವಿನ ಮೇಲೆ ಹನ್ನೊಂದು ಬಾರಿ ನಿವಾಳಿಸಿ ಅದನ್ನು ಕಪ್ಪು ವರ್ಣದ ನಾಯಿಗೆ ಕುಡಿಸಬೇಕು. ಈ ಉಪಾಯದಿಂದ ಹಿತವಾದ ಪರಿಣಾಮ ದೊರೆಯುತ್ತದೆ.
ಮಗುವಿನ ಮೇಲೆ ಮಾಟ,ಮಂತ್ರದ ಪ್ರಭಾವವಿದ್ದರೆ
- ಮಗುವಿನ ಮೇಲೆ ಯಾರಾದರು ಮಾಟ ಮಂತ್ರ ಪ್ರಯೋಗಿಸಿದ್ದರೆ ತಾಯತವೊಂದರಲ್ಲಿ ನವಿಲಿನ ಗರಿಯನ್ನಿರಿಸಿ ಅದನ್ನು ಮಗುವಿನ ಕತ್ತಿನಲ್ಲಿ ಕಟ್ಟುವುದರಿಂದ ಅದಕ್ಕೆ ಭೂತ, ಪ್ರೇತ ಹಾಗೂ ಮಾಟ-ಮಂತ್ರದ ಪೀಡೆ ಬಾಧಿಸುವುದಿಲ್ಲ.’
- ಆನೆಯ ಲದ್ದಿಯನ್ನು ಬೆಳ್ಳಿಯ ತಾಯತದಲ್ಲಿರಿಸಿ ಮಗುವಿನ ಕತ್ತಿನಲ್ಲಿ ಕಟ್ಟುವುದರಿಂದ ಅದಕ್ಕೆ ಭೂತ-ಪ್ರೇತ ಹಾಗೂ ಮಾಟ-ಮಂತ್ರದ ಪ್ರಭಾವ ಬಾಧಿಸುವುದಿಲ್ಲ.
- ಓಂ ಮಹಾದೇವೀಭ್ಯಾಂ ನಮಃ | ಈ ಮಂತ್ರವನ್ನು ಭೂರ್ಜ್ವ ಪತ್ರದ ಮೇಲೆ ದಾಳಿಂಬೆ ಲೇಖನಿ ಹಾಗೂ ಚಂದನದಿಂದ ಬರೆದು ಬೆಳ್ಳಿಯ ತಾಯಿತದಲ್ಲಿರಿಸಿ ಮಗುವಿಗೆ ಧಾರಣೆ ಮಾಡಿಸುವುದರಿಂದ ಅದು ಸಕಲ ಪ್ರಕಾರದ ಮಾಟ, ಮಂತ್ರದ ಪ್ರಭಾವದಿಂದ ರಕ್ಷಣೆ ಹೊಂದುತ್ತದೆ.
ಮಗುವಿನ ಉತ್ತಮ ಆರೋಗ್ಯಕ್ಕಾಗಿ
- ಒಂದು ಕಪ್ಪು ವರ್ಣದ ರೇಷ್ಮೆ ದಾರವನ್ನು ತೆಗೆದುಕೊಂಡು ಅದರ ಮೇಲೆ ಓಂ ನಮೋ ಭಗವತೇ ವಾಸುದೇವಾಯ | ಈ ಮಂತ್ರವನ್ನು ಉಚ್ಚರಿಸುತ್ತ ಏಳು ಗಂಟುಗಳನ್ನು ಹಾಕಬೇಕು. ನಂತರ ಅದನ್ನು ಮಗುವಿನ ಕತ್ತು ಅಥವಾ ಸೊಂಟದಲ್ಲಿ ಕಟ್ಟಬೇಕು. ಮಗುವಿನ ಆರೋಗ್ಯ ಉತ್ತಮವಾಗಿರುತ್ತದೆ.
- ಪ್ರತ್ಯೇಕ ಮಂಗಳವಾರದಂದು ಸಂಜೆಯ ಸಮಯ ಹಸಿ ಹಾಲನ್ನು ಮಗುವಿನ ಮೇಲೆ ಏಳು ಬಾರಿ ನಿವಾಳಿಸಿ ಅದನ್ನು ನಾಯಿಗೆ ಕುಡಿಸುವುದರಿಂದ ಮಗುವಿನ ಆರೋಗ್ಯ ಉತ್ತಮವಾಗಿರುತ್ತದೆ ಹಾಗೂ ದೀರ್ಘಾಯುವಾಗುತ್ತದೆ.
- ಬೆಳ್ಳಿಯಲ್ಲಿ ಗೋಮತಿ ಚಕ್ರದ ಪದಕ ಮಾಡಿಸಿ ಕೆಂಪು ದಾರದ ಮೂಲಕ ಮಗುವಿನ ಕತ್ತಿಗೆ ಕಟ್ಟುವುದರಿಂದ ಮಗುವಿನ ಆರೋಗ್ಯ ಉತ್ತಮವಾಗುತ್ತದೆ.
- ಸೋಮವಾರದ ದಿನದಂದು ಗರ್ಭವತಿ ಮಹಿಳೆಯು ಒಂದು ಕರ್ಪೂರದ ತುಂಡನ್ನು ತೆಗೆದುಕೊಂಡು ಅದರಲ್ಲಿ ಅರ್ಧ ಭಾಗವನ್ನು ಸುಡಬೇಕು ಹಾಗೂ ಉಳಿದ ಅರ್ಧ ಭಾಗವನ್ನು ಶಿವ ಮಂದಿರದಲ್ಲಿ ಅರ್ಪಿಸಬೇಕು. ಇದರಿಂದ ಸುಂದರ ಹಾಗೂ ಆರೋಗ್ಯವಂತ ಮಗು ಜನಿಸುತ್ತದೆ.