LIFESTYLE:
ಇಂಗು ಮತ್ತು ತೆಂಗು ಇದ್ದರೆ ಮಂಗನೂ ಅಡುಗೆ ಮಾಡುತ್ತೆ ಅನ್ನೋ ಮಾತು ಕೇಳಿದ್ದೇವೆ. ಹಾಗೆ ಅಡುಗೆ ಬಗ್ಗೆ ಆಸಕ್ತಿ ಇದ್ದರೆ ವಿವಿಧ ರೀತಿಯ ರುಚಿ ರುಚಿಯಾಗಿ ಫುಡ್ ತಯಾರು ಮಾಡಬಹುದು. ಅದೇ ರೀತಿ ಈಗ ಪನೀರ್ ಭುರ್ಜಿ ಸುಲಭವಾಗಿ ತಯಾರು ಮಾಡಿ ನೋಡಿ ಒಮ್ಮೆ.
ಬೇಕಾಗುವ ಸಾಮಾಗ್ರಿಗಳು
ಪನೀರ್ 2 ಕಪ್
ಅಡುಗೆ ಎಣ್ಣೆ- ಅರ್ಧ ಕಪ್
ಬೆಣ್ಣೆ- ಸ್ವಲ್ಪ
ಜೀರಿಗೆ- 1 ಚಮಚ
ರಚಿಗೆ ತಕ್ಕಷ್ಟು ಉಪ್ಪು
ಕಡಲೆ ಹಿಟ್ಟು- 1 ಚಮಚ
ಟೊಮೆಟೊ – 1
ಕ್ಯಾಪ್ಸಿಕಂ- 1
ಗರಂ ಮಸಾಲಾ- 1 ಚಮಚ
ಕಸೂರಿ ಮೇಥಿ- ಸ್ವಲ್ಪ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಈರುಳ್ಳಿ-1
ಶುಂಠಿ ಬೆಳ್ಳುಳ್ಳಿ ಪೇಸ್ಟ್- 2 ಚಮಚ
ಅರಿಶಿಣ- 1 ಚಮಚ
ಮೆಣಸಿನ ಪುಡಿ- 1ಚಮಚ
ಜೀರಿಗೆ ಪುಡಿ- 1 ಚಮಚ
ದನಿಯಾ ಪುಡಿ- 1ಚಮಚ
ಮಾಡುವ ವಿಧಾನ:
ಪಾತ್ರೆಗೆ ಅಡುಗೆ ಎಣ್ಣೆ, ಬೆಣ್ಣೆ, ಜೀರಿಗೆ, ಈರುಳ್ಳಿ, ಟೊಮೆಟೋ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಈರುಳ್ಳಿ ಹಾಕಿ ಚೆನ್ನಾಗಿ ಬೇಯಿಸಬೇಕು. ನಂತರ ಅದಕ್ಕೆ ಸ್ವಲ್ಪ ಅರಿಶಿಣ ಪುಡಿ, ಮೆಣಸಿನ ಪುಡಿ, ಜೀರಿಗೆ ಪುಡಿ, ಕೊತ್ತಂಬರಿ ಪುಡಿ, ಉಪ್ಪು, ಕ್ಯಾಪ್ಸಿಕಂ, ಹಿಸುಕಿದ ಪನೀರ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ಗರಂ ಮಸಾಲಾ, ಕಸೂರಿ ಮೇಥಿ, ಕೊತ್ತಂಬರಿ ಸೊಪ್ಪನ್ನು ಸೇರಿಸಿ ಬೇಯಿಸಿದರೆ ಪನೀರ್ ಸವಿಯಲು ಸಿದ್ದ.