LIFESTYLE:
ಬೇಕಾಗುವ ಸಾಮಾಗ್ರಿಗಳು
ಅಕ್ಕಿ-250 ಗ್ರಾಂ
ಮೂಲಂಗಿ- 2
ಜೀರಿಗೆ-ಅರ್ಧ ಚಮಚ
ತೆಂಗಿನಕಾಯಿ ತುರಿ- ಒಂದು ಸಣ್ಣ ಬಟ್ಟಲು
ಹಸಿಮೆಣಸಿನ ಕಾಯಿ- 5-6
ಉಪ್ಪು- ರುಚಿಗೆ ತಕ್ಕಷ್ಟು
ಎಣ್ಣೆ- ಸ್ವಲ್ಪ
ಮಾಡುವ ವಿಧಾನ: ಅಕ್ಕಿಯನ್ನು ಚೆನ್ನಾಗಿ ತೊಳೆದು 3 ಗಂಟೆಗಳ ಕಾಲ ನೆನೆಯಲು ಬಿಡಿ. ನಂತರ ಮೂಲಂಗಿಯನ್ನು ಚೆನ್ನಾಗಿ ತೊಳೆದು ಮೇಲಿನ ಸಿಪ್ಪೆ ತೆಗೆದು ಸಣ್ಣಗೆ ತುರಿದುಕೊಳ್ಳಿ. ಅಕ್ಕಿ ನೆಂದ ಬಳಿಕ ಹಸಿಮೆಣಸಿನ ಕಾಯಿ, ತುರಿದುಕೊಂಡಿರುವ ಮೂಲಂಗಿ ಹಾಗೂ ಕಾಯಿ ತುರಿಯನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಹಿಟ್ಟನ್ನು ಒಂದು ಪಾತ್ರೆಗೆ ಹಾಕಿ ಉಪ್ಪು, ಜೀರಿಗೆ ಹಾಕಿ ಸ್ವಲ್ಪ ಸಮಯ ಮುಚ್ಚಿಡಬೇಕು. ನಂತರ ಕಾವಲಿ ಕಾದ ಬಳಿಕ ಎಣ್ಣೆ ಸವರಿ ಹಿಟ್ಟನ್ನು ಹಾಕಿ ಎರಡೂ ಬದಿಯಲ್ಲೂ ಬೇಯಿಸಿದರೆ, ರುಚಿಕರವಾದ ಮೂಲಂಗಿ ದೋಸೆ ಸವಿಯಲು ಸಿದ್ಧ.