LIFESTYLE:
ಪವಿತ್ರಾ ಶೆಟ್ಟಿ
ನೈಲ್ ಪಾಲಿಶ್ ಹಚ್ಚಿಕೊಳ್ಳುವುದು ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಅದರಲ್ಲೂ ಇಂದು ಮಾರುಕಟ್ಟೆಯಲ್ಲಿ ಸಿಗುವ ವೈವಿಧ್ಯಮಯ ನೈಲ್ ಪಾಲಿಶ್ ಗಳು ನಿಮ್ಮ ಬೆರಳಿನ ಮಾತ್ರವಲ್ಲ ಕೈಯ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ. ನೀವು ಗ್ಲಾಸಿ ರೀತಿಯ ನೈಲ್ ಪಾಲಿಷ್ ಅನ್ನು ಹಾಕಿ ಅದನ್ನು ಮ್ಯಾಟ್ ರೀತಿ ಬದಲಿಸಬೇಕಾದರೆ ಅನುಸರಿಸಬೇಕಾದ ಕೆಲವು ವಿಧಾನಗಳು ಇಲ್ಲಿವೆ.
ಪಾತ್ರೆಯಲ್ಲಿ ನೀರು ಕುದಿಯಲು ಇಡಿ. ಅದರ ಹಬೆಯ ಮೇಲೆ ನಿಮ್ಮ ಕೈಬೆರಳುಗಳನ್ನು ಕೆಲವು ಹೊತ್ತು ಸೋಕಿಸಿ. ಹೀಗೆ ಮಾಡುವುದರಿಂದ ನಿಮ್ಮ ನೇಲ್ ಪಾಲಿಶ್ ಮ್ಯಾಟ್ ರೀತಿಯಲ್ಲಿ ಬದಲಾವಣೆಯಾಗುತ್ತದೆ.
ನಿಮಗಿಷ್ಟದ ಬಣ್ಣದ ನೇಲ್ ಪಾಲಿಶ್ ಅನ್ನು ಮೊದಲು ಬೆರಳಿಗೆ ಹಚ್ಚಿಕೊಳ್ಳಿ. ಬಳಿಕ ಡಾರ್ಕ್ ಬಣ್ಣದಲ್ಲಿ ಟೂತ್ ಪಿಕ್ ಅನ್ನು ಮುಳುಗಿಸಿ ನಿಮ್ಮ ಉಗುರಿನ ಮೇಲೆ ಚುಕ್ಕಿಯನ್ನು ಇಡುತ್ತಾ ಬನ್ನಿ. ಇದು ಆಕರ್ಷಕವಾಗಿ ಕಾಣುತ್ತದೆ.
ನಿಮ್ಮ ಉಗುರಿಗೆ ಎರಡು ಬಣ್ಣದ ನೇಲ್ ಪಾಲಿಷ್ ಗಳನ್ನು ಹಚ್ಚಿಕೊಳ್ಳಬೇಕು ಎಂದಿದ್ದರೆ ಮೊದಲು ಅರ್ಧ ಭಾಗಕ್ಕೆ ಅಂಟಿಸಿ. ಈಗ ಮೊದಲ ಅರ್ಧಕ್ಕೆ ನಿಮಗಿಷ್ಟದ ಬಣ್ಣ ಹಚ್ಚಿ. ಅದು ಒಣಗಿದ ಬಳಿಕ ಮೇಲ್ಭಾಗದ ಸೆಲ್ಲೋ ಟೇಪ್ ಅನ್ನು ತೆಗೆದು ಇನ್ನೊಂದು ಬಣ್ಣವನ್ನು ಹಚ್ಚಿ. ಇದು ನಿಮ್ಮ ಬೆರಳನ್ನು ಸುಂದರವಾಗಿ ಕಾಣುವಂತೆ ಮಾಡುತ್ತದೆ