LIFESTYLE:
ಬೇಕಾಗುವ ಸಾಮಗ್ರಿಗಳು:
1/4 ಚಮಚ ತೇದಿರುವ ಗಂಧ
1/4 ಚಮಚ ಬೆಲ್ಲ
ಮಾಡುವ ವಿಧಾನ :
ಬೆಲ್ಲ ಮತ್ತು ಗಂಧವನ್ನು ಮಿಕ್ಸ್ ಮಾಡಿ ಪ್ರತಿದಿನ 2 ಅಥವ 3 ಭಾರಿ ಸೇವಿಸಿ.
ಬೇಕಾಗುವ ಸಾಮಗ್ರಿಗಳು:
ಶುಂಠಿ 1/2
ನಿಂಬೆ ಹಣ್ಣಿನ ರಸ 1 ಚಮಚ
ಜೇನು ತುಪ್ಪ 1 ಚಮಚ
ಸ್ವಲ್ಪ ಬೆಲ್ಲ (ಒಂದು ತುಂಡು)
ಕಾಳು ಮೆಣಸು 8
ನೀರು 2 ಕಪ್
ಮಾಡುವ ವಿಧಾನ:
ಕುಟ್ಟಾಣಿಯಲ್ಲಿ ಮೆಣಸನ್ನು ಜಜ್ಜಿ ಪುಡಿ ಮಾಡಿಕೊಳ್ಳಿ. ಅದರ ಜೊತೆ ಶುಂಠಿಯನ್ನು ಸ್ವಲ್ಪ ಜಜ್ಜಿಕೊಳ್ಳಿ. ನಂತರ ನೀರನ್ನು ಕುದಿಯಲು ಇಡಿ , ಕುದ್ದ ನೀರಿಗೆ ಜಜ್ಜಿಕೊಂಡ ಮೆಣಸು ಮತ್ತು ಶುಂಠಿ ಪುಡಿ ಹಾಗೂ ಬೆಲ್ಲವನ್ನು ಹಾಕಿ ಸಣ್ಣ ಉರಿಯಲ್ಲಿ 8 ಅಥವಾ 10 ನಿಮಿಷಗಳ ಕಾಲ ಕುದಿಸಿ. ಕುದಿಸಿದ ಈ ಕಷಾಯವನ್ನು ಒಂದು ಲೋಟಕ್ಕೆ ಸೋಸಿಕೊಂಡು ಅದಕ್ಕೆ 1/2 ಚಮಚ ನಿಂಬೆರಸ ಹಾಗು 1/2 ಚಮಚ ಜೇನು ತುಪ್ಪ ಸೇರಿಸಿ ಮಿಕ್ಸ್ ಮಾಡಿ 1/2 (ಅರ್ಧ) ಲೋಟ ಕುಡಿಯಿರಿ. ಪ್ರತಿದಿನ 2 ರಿಂದ 3 ಬಾರಿ ಸೇವಿಸಿ.