LIFESTYLE:
ಆಗಾಗ ಕಷಾಯ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು, ಇಲ್ಲಿ ಕೆಮ್ಮು, ಶೀತ ತಡೆಗಟ್ಟುವ ರುಚಿಕರವಾದ ಕಷಾಯದ ರೆಸಿಪಿ ನೀಡಿದ್ದೇವೆ ನೋಡಿ.
ಬೇಕಾಗುವ ಸಾಮಗ್ರಿಗಳು:
ಕಾಳು ಮೆಣಸು
ಕೊತ್ತಂಬರಿ ಬೀಜ
ಲವಂಗ
ಚಕ್ಕೆ
ಏಲಕ್ಕಿ
ಜೀರಿಗೆ
ಒಮ್ ಕಾಳು
ಶುಂಠಿ
ಮಾಡುವ ವಿಧಾನ:
ಒಂದು ಕುಟ್ಟಾಣಿಗೆ 1/2 ಚಮಚ ಕಾಳು ಮೆಣಸು, 1/2 ಚಮಚ ಕೊತ್ತಂಬರಿ ಬೀಜ, 1/2 ಚಮಚ ಜೀರಿಗೆ, 1/2 ಚಮಚ ಒಮ್ ಕಾಳು, 4 ಅಥವ 5 ಲವಂಗ, 2 ಏಲಕ್ಕಿ, 1/2 ಚಕ್ಕೆ 1/2 ಶುಂಠಿ ಇದು ಎಲ್ಲವನ್ನು ನುಣ್ಣಗೆ ಕುಟ್ಟಿ ಪುಡಿ ಮಾಡಿಕೊಳ್ಳಿ. ನಂತರ ಒಂದು ಪ್ಯಾನ್ ತೆಗೆದುಕೊಳ್ಳಿ 1 ಗ್ಲಾಸ್ ನೀರು ಹಾಕಿ ಕುಟ್ಟಿಕೊಂಡ ಪುಡಿಯನ್ನು ಹಾಕಿ ಸಣ್ಣ ಉರಿಯನ್ನು ಇಟ್ಟು 10 ನಿಮಿಷಗಳ ಕಾಲ ಕುದಿಸಿ ನಂತರ ಸೋಸಿಕೊಂಡು ಕುಡಿಯಿರಿ.