LIFESTYLE:
ಬೇಕಾಗುವ ಸಾಮಾಗ್ರಿಗಳು:
ಭಜೆ
ಸಣ್ಣ ರೇಷ್ಮೆ
ಜಾಕಾಯಿ
ಜೇಷ್ಠ ಮಧು
ಅರಿಶಿನದ ಕೊಂಬು
ಒಣ ಕರ್ಜೂರ
ಒಣ ಶುಂಠಿ
ಅಳಲೆಕಾಯಿ
ಹಿಪ್ಲಿ
ಮೆಣಸು
ವಾಯು ವಿಳಂಗ
ಬಿಳಿ ಮೆಣಸು
ಓಂ ಕಾಳು
ಸೈಂದ್ರ ಲವಣ
ಕರಿ ಉಪ್ಪು
ಬೆಳ್ಳುಳ್ಳಿ
ಮಾಡುವ ವಿಧಾನ:
ಸಾಮಾನ್ಯವಾಗಿ ತಾಯಿ ಎದೆ ಹಾಲಿನಿಂದಲೇ ತೇದು ಹಾಕುವುದು. ಸಾಣೆ ಕಲ್ಲನ್ನು ಶುಭ್ರವಾಗಿ ತೊಳೆಯಬೇಕು. ಸಾಣೆ ಕಲ್ಲಿನ ಮೇಲೆ ಒಂದು ತೊಟ್ಟು ಹಾಲನ್ನು ಹಾಕಿಕೊಳ್ಳಬೇಕು ಮೆಣಸನ್ನು ಒಂದು ಸುತ್ತು ತೇಯಬೇಕು. ಭಜೆ , ಸಣ್ಣ ರೇಷ್ಮೇ, ಜಾಕಾಯಿ, ಜೇಷ್ಠ ಮಧು, ಅರಿಶಿನದ ಕೊಂಬು, ಒಣ ಕರ್ಜೂರ, ಒಣ ಶುಂಠಿ, ಅಳಲೆಕಾಯಿ, ಹಿಪ್ಲಿ, ಮೆಣಸು, ವಾಯು ವಿಳಂಗ, ಬಿಳಿ ಮೆಣಸು, ಓಂ ಕಾಳು, ಸೈಂದ್ರ ಲವಣ, ಕರಿ ಉಪ್ಪು, ಬೆಳ್ಳುಳ್ಳಿ ಇವು ಎಲ್ಲವನ್ನು ಒಂದು ಸುತ್ತು ತೇಯಬೇಕು. ತೇದ ನಂತರ ಚಿಟಿಕೆ ಮಗುಗೆ ತಾಯಿ ಎದೆ ಹಾಲಿನ ಜೊತೆ ಸೇರಿಸಿ ತಿನ್ನಿಸಿ