LIFESTYLE:
ಸಾಮಾನ್ಯವಾಗಿ ಬೇಸಿಗೆಯಲ್ಲಿ ದೇಹ ಉಷ್ಣವಾಗುತ್ತದೆ. ಇದರಿಂದ ಬಾಯಿಯಲ್ಲಿ ಉಣ್ಣು, ತಲೆ ನೋವು, ಕಣ್ಣು ಉರಿ ಈ ಸಮಸ್ಯೆಗಳು ಉಂಟಾಗುತ್ತವೆ. ಇದಕ್ಕೆ ಪರಿಹಾರ ಇಲ್ಲಿದೆ ನೋಡಿ.
ಬೇಕಾಗುವ ಸಾಮಾಗ್ರಿಗಳು:
1/2 kg ರಾಗಿ (2 ಗಂಟೆಗಳ ಕಾಲ ನೆನೆಸಿದ)
12 ಬಾದಾಮಿ ( ನೆನೆಸಿದ ಬಾದಾಮಿ)
1 ಕಪ್ ತೆಂಗಿನ ತುರಿ
4 ಏಲಕ್ಕಿ
1 ಕಪ್ ಬೆಲ್ಲ
ಮಾಡುವ ವಿಧಾನ:
ನೆನಸಿದ ರಾಗಿಯನ್ನು ಮಿಕ್ಸಿ ಜಾರಿಗೆ ಹಾಕಿ ನಂತರ ಅದರ ಜೊತೆ 10 ರಿಂದ 12 ಸಿಪ್ಪೆ ಬಿಡಿಸಿದ ಬಾದಾಮಿಯನ್ನು ಹಾಕಿ ಮತ್ತು ತೆಂಗಿನ ತುರಿ, ಏಲಕ್ಕಿ ಹಾಗೂ 1 ಲೋಟ ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣವನ್ನು ಸೋಸಿ ಉಳಿದ ಗಸಿಯನ್ನು ಮತ್ತೆ ಜಾರಿಗೆ ಹಾಕಿ 2 ಅಥವ 3 ಬಾರಿ ಹಾಕಿ ಗಸಿಯನ್ನು ತೆಗೆದು ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣ ಅಂದರೆ ನಿಮಗೆ ಎಷ್ಟು ಬೇಕೋ ಅಷ್ಟಕ್ಕೆ ಮಾತ್ರ ಬೆಲ್ಲ ಮತ್ತು ಚಿಟಿಕೆ ಉಪ್ಪನ್ನು ಸೇರಿಸಿ ಮಿಕ್ಸ್ ಮಾಡಿ ಕುಡಿಯಿರಿ