LIFESTYLE:
ಪುದೀನ ದೇಹದ ಬಿಸಿಯನ್ನು ಕ್ಷಣದಲ್ಲಿ ನಿವಾರಿಸುತ್ತದೆ. ಇದು ಜೀರ್ಣಕ್ರಿಯೆಗೂ ಸಹಕಾರಿ. ಹೊಟ್ಟೆಯ ಸ್ನಾಯುವನ್ನು ಮೃದುಗೊಳಿಸಿ ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ. ಪುದೀನಾ ಜ್ಯೂಸನ್ನು ಸೇವಿಸುವುದರಿಂದ ದೇಹ ತಂಪಾಗಿರುತ್ತದೆ. ಇಂಥ ಅದ್ಭುತ ಗುಣ ಪುದೀನಾಕ್ಕಿದ್ದು, ಇದು ನಿಮ್ಮನ್ನು ಹೈಡ್ರೇಟ್ ಆಗಿ ಇರಿಸುತ್ತದೆ. ಡೀಹೈಡ್ರೇಶನ್, ಸನ್ ಸ್ಟ್ರೋಕ್ ಮುಂತಾದ ಬೇಸಿಗೆಯ ಸಮಸ್ಯೆಗಳನ್ನು ದೂರ ಮಾಡುವ ಶಕ್ತಿ ಪುದೀನಾಕ್ಕಿದೆ. ಪುದೀನ ಜ್ಯೂಸ್ ಮಾಡಲು ಬೇಕಾಗುವ ಸಾಮಗ್ರಿಗಳು:
ಪುದೀನ : ಒಂದು ಕಪ್
ಸಕ್ಕರೆ : ಅರ್ಧ ಕಪ್
ಒಂದು ನಿಂಬೆಹಣ್ಣು
ಮಾಡುವ ವಿಧಾನ:
ಪುದೀನವನ್ನು ತೊಳೆದು ಎಲೆಯನ್ನು ಬಿಡಿಸಿಕೊಳ್ಳಬೇಕು. ನಂತರ ನಿಂಬೆಹಣ್ಣಿನ ಬೀಜವನ್ನು ತೆಗೆದು ರಸವನ್ನು ಒಂದು ಕಪ್ ಹಿಂಡಿಕೊಳ್ಳಬೇಕು, ಮತ್ತು ಜ್ಯೂಸ್ ಜಾರನ್ನು ತೆಗೆದುಕೊಂಡು ಮೊದಲಿಗೆ ನಿಂಬೆರಸವನ್ನು ಹಾಕಬೇಕು. ನಂತರ ಪುದೀನವನ್ನು ಹಾಕಬೇಕು ಮತ್ತು 1/2 ಕಪ್ನಷ್ಟು ಸಕ್ಕರೆ ಹಾಕಬೇಕು. 2 ಗ್ಲಾಸ್ ನೀರನ್ನು ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಬೇಕು. ರುಬ್ಬಿದ ನಂತರ ಜ್ಯೂಸನ್ನು ಜಾಲರಿಯಿಂದ ಸೋಸಿಕೊಂಡರೆ ಪುದೀನ ಜ್ಯೂಸ್ ರೆಡಿ.