LIFESTYLE:
ಈ ಅದ್ಭುತವಾದ ಸೊಪ್ಪಿನಲ್ಲಿ ಹಲವಾರು ವಿಧದ ಪೋಷಕಾಂಶಗಳಿದ್ದು, ಇದರ ಜ್ಯೂಸ್ ಮಾಡಿಕೊಂಡು ನಿತ್ಯವೂ ಸೇವನೆ ಮಾಡಿದರೆ ಅದರಿಂದ ದೇಹ ಬಲವಾಗುವುದು ಮತ್ತು ಆರೋಗ್ಯ ವೃದ್ಧಿಸುವುದು.
ಬೇಕಾಗುವ ಸಾಮಗ್ರಿಗಳು:
ಎಣ್ಣೆ
ಬೆಣ್ಣೆ
ಜೀರಿಗೆ
ಬೆಳ್ಳುಳ್ಳಿ
ಈರುಳ್ಳಿ
ಹಸಿ ಶುಂಠಿ
ತೊಳೆದು ಕತ್ತರಿಸಿದ ಪಾಲಕ್ ಸೊಪ್ಪು
1/2 ಕಪ್ ನೀರು
1/2 ಕಪ್ ಹಾಲು
ಕರಿ ಮೆಣಸಿನ ಪುಡಿ
ಮಾಡುವ ವಿಧಾನ:
ಒಂದು ಕಡಾಯಿಯನ್ನು ತೆಗೆದುಕೊಳ್ಳಬೇಕು. ಅದು ಸ್ವಲ್ಪ ಬಿಸಿಯಾದ ಮೇಲೆ ಅದಕ್ಕೆ 1/2 ಚಮಚ ಎಣ್ಣೆ ಮತ್ತು 1/2 ಚಮಚ ಬೆಣ್ಣೆಯನ್ನು ಹಾಕಿ ನಂತರ ಜೀರಿಗೆ ಹಾಕಿ ಫ್ರೈ ಮಾಡಬೇಕು. ಅದರ ಜೊತೆಗೆ ಈರುಳ್ಳಿ ಬೆಳ್ಳುಳ್ಳಿ ಪಾಲಕ್ ಸೊಪ್ಪು ಹಾಗೂ 1/2 ಕಪ್ ನೀರನ್ನು ಹಾಕಿ 5 ನಿಮಿಷಗಳ ಕಾಲ ಬೇಯಿಸಿರಿ. ನಂತರ ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಅದನ್ನು ಜಾಲರಿಗೆ ಹಾಕಿ ಸೋಸಿಕೊಳ್ಳಿ. ಆ ರಸವನ್ನು ಒಂದು ಕಡಾಯಿಗೆ ಹಾಕಿ 2 ಕಪ್ ನೀರು ಸೇರಿಸಿ ಮಧ್ಯಮ ಉರಿಯಲ್ಲಿ ಬೇಯಿಸಿಕೊಳ್ಳಿ. ರುಚಿಗೆ ತಕ್ಕಷ್ಟು ಉಪ್ಪು ಹಾಗು ಕರಿ ಮೆಣಸನ್ನು ಸೇರಿಸಿ ಕುದಿಸಿ. ಹೀಗೆ ನೀರು ಕುದಿದ ನಂತರ 1/2 ಕಪ್ ಹಾಲನ್ನು ಹಾಕಿ 1 ನಿಮಿಷ ಮತ್ತೆ ಕುದಿಸಿ. ನಂತರ ಲೋಟಕ್ಕೆ ಹಾಕಿ ಸೇವಿಸಿ.