LIFESTYLE:
ರೈತರನ್ನು ಮುಖ್ಯ ವಾಹಿನಿಯೊಂದಿಗೆ ಸಂಪರ್ಕಿಸಲು ಕೇಂದ್ರ ಸರ್ಕಾರ ನಿರಂತರ ಪ್ರಯತ್ನ ನಡೆಸುತ್ತಿದೆ. ಕೃಷಿಗೆ ಉತ್ತೇಜನ ನೀಡಲು ಸರ್ಕಾರ ಪ್ರತಿದಿನ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದ್ದಾರೆ. ಅದೇ ಸಮಯದಲ್ಲಿ, ಈಗ ಸರ್ಕಾರವು ಜಾನುವಾರುಗಳ ಸುರಕ್ಷತೆಯ ದೃಷ್ಟಿಯಿಂದ ಕೆಲಸ ಮಾಡಲು ಪ್ರಾರಂಭಿಸಿದೆ.
ಮಧ್ಯಪ್ರದೇಶ ಸರ್ಕಾರವು ಪಶು ಸಂಗೋಪನೆಯನ್ನು ಉತ್ತೇಜಿಸುವ ಯೋಜನೆಯನ್ನು ಜಾರಿಗೆ ತಂದಿದೆ. ಇತರೆ ರಾಜ್ಯಗಳಲ್ಲೂ ಈ ಯೋಜನೆ ಇದ್ದು, ಸ್ಥಳಿಯ ಪಶು ಸಂಗೋಪನಾ ಇಲಾಖೆಯಲ್ಲಿ ವಿಚಾರಿಸಿ ಇದರ ಲಾಭ ಪಡೆಯುವ ಅನುಕೂಲ ಮಾಡಿಕೊಡುತ್ತಿದೆ.
ವಾಸ್ತವವಾಗಿ, ಮಧ್ಯಪ್ರದೇಶ ಸರ್ಕಾರವು 70 ಪ್ರತಿಶತದಷ್ಟು ಸಬ್ಸಿಡಿಯನ್ನು ನೀಡುತ್ತದೆ. ಅಂದರೆ ಜಾನುವಾರು ಮಾಲೀಕರಿಗೆ ಪ್ರಾಣಿಗಳ ವಿಮೆಯ ಮೇಲೆ ಅನುದಾನವನ್ನು ನೀಡುತ್ತದೆ. ಈ ಯೋಜನೆಯ ಹೆಸರು ಜಾನುವಾರು ವಿಮಾ ಯೋಜನೆ. ಈ ಯೋಜನೆಯಡಿ ಎಲ್ಲಾ ರೀತಿಯ ಪ್ರಾಣಿಗಳಿಗೆ ವಿಮೆ ನೀಡಲಾಗುತ್ತದೆ.
ಈ ಯೋಜನೆಯ ಉದ್ದೇಶವು ಜಾನುವಾರು ಮಾಲೀಕರಿಗೆ ಅವರ ಪಶುಗಳಿಗೆ ವಿಮೆ ಸೌಲಭ್ಯವನ್ನು ಒದಗಿಸುವುದು, ಇದರಿಂದಾಗಿ ಅವರ ಪ್ರಾಣಿಗಳ ಸಾವಿನಿಂದಾಗುವ ನಷ್ಟ ಮತ್ತು ಸಾವಿನ ನಂತರ ಸಂಭವಿಸುವ ಆರ್ಥಿಕ ಬಿಕ್ಕಟ್ಟನ್ನು ಸರಿದೂಗಿಸಬಹುದು. ಈ ಯೋಜನೆಯ ಮೂಲಕ, ರೈತರು ಪ್ರಾಣಿ ನಷ್ಟದ ಸಂದರ್ಭದಲ್ಲಿ ವಿಮೆ ಕ್ಲೈಮ್ ಪಡೆಯಬಹುದು. ರಾಜ್ಯದ ಎಲ್ಲ ಜಿಲ್ಲೆಗಳ ರೈತರು ಯೋಜನೆಯ ಲಾಭ ಪಡೆಯಬಹುದು.