LIFESTYLE:
ಇತ್ತಿಚೆಗೆ ಜೀವನ ಶೈಲಿಯಿಂದ ದೇಹದ ತೂಕ ಹೆಚ್ಚಾಗುತ್ತದೆ. ಅದನ್ನು ಇಳಿಸಿಕೊಳ್ಳಲು ತುಂಬಾ ಕಸರತ್ತು ಮಾಡುತ್ತಾರೆ, ಆದರೂ ಕೂಡ ದೇಹದ ತೂಕ ಇಳಿಯುವುದಿಲ್ಲ. ದೇಹದ ಹೆಚ್ಚುವರಿ ತೂಕ ಇಳಿಸಲು ಪ್ರತಿಯೊಬ್ಬರು ತಮ್ಮದೇ ಆಗಿರುವಂತಹ ವಿಧಾನ ಬಳಸುವರು. ಅದಾಗ್ಯೂ, ತೂಕ ಇಳಿಸಲು ಹಿಂದೆ ಕೆಲವೊಂದು ಸಮಯ ನಿಗದಿ ಮಾಡಲಾಗುತ್ತಿತ್ತು.
ಇದರಿಂದಾಗಿ ತೂಕ ಇಳಿಸಲು ಕೆಲವೊಂದು ಸಲಹೆಗಳನ್ನು ಪಾಲಿಸಿಕೊಂಡು ಹೋಗಬೇಕಾಗುತ್ತಿತ್ತು. ಆಹಾರ ಕ್ರಮವನ್ನು ತುಂಬಾ ಕ್ರಮಬದ್ಧವಾಗಿ ಪಾಲಿಸಿಕೊಂಡು ಹೋಗಿ ಆರೋಗ್ಯಕರ ರೀತಿಯಲ್ಲಿ ತೂಕ ಇಳಿಸಬಹುದು. ಇಲ್ಲಿದೆ ಸರಳ ಮನೆಮದ್ದು.
ದಾಲ್ಚಿನ್ನಿ-ಜೇನುತುಪ್ಪ ಪಾನೀಯ
ದಾಲ್ಚಿನ್ನಿ ಆಂಟಿವೈರಲ್, ಬ್ಯಾಕ್ಟೀರಿಯಾ ಮತ್ತು ಆಂಟಿಫಂಗಲ್ ಆಗಿದ್ದರೆ, ಜೇನುತುಪ್ಪವು ಆ್ಯಂಟಿ ಆಕ್ಸಿಡೆಂಟ್ಗಳ ಶಕ್ತಿ ಕೇಂದ್ರವಾಗಿದೆ. ದಾಲ್ಚಿನ್ನಿ-ಜೇನುತುಪ್ಪ ನೀರನ್ನು ಉಗುರು ಬೆಚ್ಚಗೆ ಸೇವನೆ ಮಾಡಬೇಕು.ಇದ್ದರಿಂದ ಕ್ರಮೇಣವಾಗಿ ದೇಹದ ತೂಕ ಇಳಿಯುತ್ತದೆ.
ನಿಂಬೆ-ಶುಂಠಿ ಪಾನೀಯ
ನಿಂಬೆ ಮತ್ತು ಶುಂಠಿಯಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ. ಎಲ್ಲರೂ ಮನೆಯಲ್ಲಿ ಈವೆರಡು ವಸ್ತುಗಳು ಇದ್ದೆ ಇರುತ್ತದೆ. ಹೀಗಾಗಿ ನಿಂಬೆ-ಶುಂಠಿ ಡಿಟಾಕ್ಸ್ ಪಾನೀಯವನ್ನು ತಯಾರಿಸುವ ವಿಧಾನ ಇಲ್ಲಿದೆ. ಅರ್ಧ ನಿಂಬೆ ರಸ ಮತ್ತು 2 ಇಂಚು ತುರಿದ ಶುಂಠಿಯನ್ನು ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಸೇರಿಸಬೇಕು.ನಂತರ ಕುಡಿಯುವುದರಿಂದ ತೂಕ ಇಳಿಸಲು ಸಹಕರಿಯಾಗುತ್ತದೆ.
ಸೌತೆಕಾಯಿ ಮತ್ತು ಪುದೀನ ಪಾನೀಯ
ಸೌತೆಕಾಯಿ ಮತ್ತು ಪುದೀನ ಪಾನೀಯವನ್ನು ತಯಾರಿಸಲು, ನೀವು ಒಂದು ಕಪ್ ನೀರಿಗೆ ಕೆಲವು ಸೌತೆಕಾಯಿ ಮತ್ತು ಸಣ್ಣದಾಗಿ ಕೊಚ್ಚಿದ ಪುದೀನ ಎಲೆಗಳನ್ನು ಸೇರಿಸಿ. ಈ ಡಿಟಾಕ್ಸ್ ನೀರನ್ನು ಪ್ರತಿದಿನ ಸೇವಿಸಬಹುದು.