ಕಾಂಗ್ರೆಸ್ ಧಿಕ್ಕರಿಸಿ ಕಮಲಕ್ಕೆ ಮತ ನೀಡಿ: ರಾಜೀವ್ ಚಂದ್ರಶೇಖರ್
ಭ್ರಷ್ಟಾಚಾರಕ್ಕೆ ಹೆಸರಾದ ಕಾಂಗ್ರೆಸ್ ಧಿಕ್ಕರಿಸಿ ಈ ಬಾರಿ ಕಮಲಕ್ಕೆ ಮತ ನೀಡಿ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಮನವಿ ಮಾಡಿದ್ದಾರೆ
ಬೊಮ್ಮನಹಳ್ಳಿ (ಏ.21): ಭ್ರಷ್ಟಾಚಾರಕ್ಕೆ ಹೆಸರಾದ ಕಾಂಗ್ರೆಸ್ ಧಿಕ್ಕರಿಸಿ ಈ ಬಾರಿ ಕಮಲಕ್ಕೆ ಮತ ನೀಡಿ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಮನವಿ ಮಾಡಿದ್ದಾರೆ. ಗುರುವಾರ ಅವರು ಬಿಟಿಎಂ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಧರ್ ರೆಡ್ಡಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. ಕೋರಮಂಗಲದ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಶ್ರೀಧರ್ ರೆಡ್ಡಿ ಅವರೊಂದಿಗೆ ಕೋರಮಂಗಲದ ಲಕ್ಷ್ಮೇದೇವಿ ಮೈದಾನದಿಂದ ಬೇತಾನಿ ಶಾಲಾ ವರೆಗೆ ತೆರೆದ ವಾಹನದಲ್ಲಿ ಭರ್ಜರಿ ರೋಡ್ ಶೋ ನಡೆಸಿದರು. ಸಾವಿರಾರು ಕಾರ್ಯಕರ್ತರು ರೋಡ್ ಶೋನಲ್ಲಿ ಪಾಲ್ಗೊಂಡಿದ್ದರು.
ಈ ವೇಳೆ ಮಾತನಾಡಿದ ರಾಜೀವ್, ಬಾರಿ ಬಿಟಿಎಂ ವಿಧಾನಸಭಾ ಕ್ಷೇತ್ರದಲ್ಲಿ ಬದಲಾವಣೆ ತರಲು ಕಾರ್ಯಕರ್ತರು ನಿರ್ಧರಿಸಿದ್ದಾರೆ. ಈ ಚುನಾವಣೆ ತುಂಬಾ ಮಹತ್ವದ ಚುನಾವಣೆ. ಇದು ಬಿಟಿಎಂ ಜನರ ಭವಿಷ್ಯಕ್ಕಾಗಿ, ರಾಜ್ಯದ ಭವಿಷ್ಯಕ್ಕಾಗಿ ತುಂಬಾ ಮಹತ್ವದ ಚುನಾವಣೆಯಾಗಿದೆ. ಪಕ್ಷದ ಅಭ್ಯರ್ಥಿ ಶ್ರೀಧರ್ ರೆಡ್ಡಿ ಬೆಂಬಲಕ್ಕೆ ನಾನು ಬಂದಿದ್ದೇನೆ. ಮೋದಿ ನವ ಭಾರತ ನಿರ್ಮಾಣದ ಕನಸು ಕಟ್ಟಿದ್ದರು. ಹೀಗಾಗಿ ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ ಎಂದು ಹೇಳಿದರು