NEWS: ನವದೆಹಲಿ: ರಾಜ್ಯ ಸರ್ಕಾರಕ್ಕೆ ಕೋವಿಡ್ ಲಸಿಕೆ ಮಾರಾಟ ಮಾಡಲು ಎರಡು ಫೈಝರ್ ಮತ್ತು ಮೊಡೆರ್ನಾ ನಿರಾಕರಿಸಿವೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಏನಿದ್ದರೂ ಕೇಂದ್ರ ಸರ್ಕಾರದೊಂದಿಗೆ ಮಾತ್ರ ತಮ್ಮ ವ್ಯವಹಾರ ಎಂದು ಅವು ಹೇಳಿವೆ. ಕೇಂದ್ರ ಸರ್ಕಾರದೊಂದಿಗೆ ಮಾತಾಡುವುದಾಗಿ ಅವು ಹೇಳಿವೆ ಎಂದು ಕೇಜ್ರಿವಾಲ್ ಬಹಿರಂಗಪಡಿಸಿದ್ದಾರೆ.