NEWS: ನವದೆಹಲಿ: ದೇಶದ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಈವರೆಗೆ 21.89 ಕೋಟಿ ಕೊರೊನಾ ಲಸಿಕೆಯನ್ನು ಹಂಚಿಕೆ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟಾರೆ 1,77,67,850 ಕೋಟಿ ಲಸಿಕೆ ಲಭ್ಯವಿದೆ ಎಂದು ಅದು ತಿಳಿಸಿದೆ. ಈವರೆಗೆ 21,89,69,250 ಡೋಸ್‌ಗಳನ್ನು ಕೇಂದ್ರ ಸರ್ಕಾರ ನೀಡಿದೆ. ಇದರಲ್ಲಿ ಕೇಂದ್ರದಿಂದ ಉಚಿತವಾಗಿ ನೀಡುವ ಲಸಿಕೆ ಹಾಗೂ ರಾಜ್ಯಗಳು ನೇರವಾಗಿ ಖರೀದಿ ಮಾಡುವ ಲಸಿಕೆಗಳು ಕೂಡ ಸೇರಿದೆ. ಇದರಲ್ಲಿ ವೇಸ್ಟೇಜ್ ಸೇರಿದಂತೆ 19,93,39,750 ಡೋಸ್‌ಗಳು ಬಳಕೆಯಾಗಿವೆ ಎಂದು ಸಚಿವಾಲಯ ತಿಳಿಸಿದೆ.