ಈ ಕ್ಷಣ :

ಜ್ಯೋತಿಷ್ಯ ಹೇಳುವ ನೆಪದಲ್ಲಿ ಕೋಟಿ ಕೋಟಿ ವಂಚನೆ; ಎಂಥವರನ್ನೂ ಮೀರಿಸಿದ ಲಖ್ನೋ ಮಹಿಳೆ

Published 15 ಮಾರ್ಚ್ 2023, 21:47 IST
Last Updated 6 ಮೇ 2023, 23:53 IST
ಸ್ನೇಹಿತನ ಕತ್ತು ಕೊಯ್ದು ರಕ್ತ ಕುಡಿದ ಕಿರಾತಕ! ಬೆಚ್ಚಿಬಿದ್ದ ಚಿಂತಾಮಣಿ

NEWS: ಜ್ಯೋತಿಷ್ಯ ಹೇಳುವ ನೆಪದಲ್ಲಿ ವ್ಯಕ್ತಿಯೊಬ್ಬರ ಬದುಕನ್ನೇ ಮೂರಾಬಟ್ಟೆ ಮಾಡಿದ್ದು ಮಾತ್ರವಲ್ಲದೆ, ಬರೋಬ್ಬರಿ 2 ಕೋಟಿ ವಂಚಿಸಿದ ಪ್ರಕರಣವೊಂದು ಉತ್ತರ ಪ್ರದೇಶದ ಹಜ್ರತ್​ಗಂಜ್​ನಲ್ಲಿ ನಡೆದಿದೆ. ಇಂಥ ಬಹುದೊಡ್ಡ ವಂಚನೆಯೊಂದರೆ ಸೂತ್ರಧಾರಿ ಪೂಜಾ ಅಲಿಯಾಸ್ ರೀನಾ ಶ್ರೀವಾಸ್ತವ್. ಈಕಗೆ ಜೊತೆಯಾಗಿದ್ದವರು ಈಕೆಯ ಸಹೋದರ ಅಮನ್ ಶ್ರೀವಾಸ್ತವ್ ಮತ್ತು ಸಹೋದರಿ ಆರತಿ ಶ್ರೀವಾಸ್ತವ್. ರೀನಾ ವಿರುದ್ಧ ದೂರು ದಾಖಲಿಸಿರುವ ವ್ಯಕ್ತಿ, ತಾನು ಹೇಗೆ ಈಕೆಯಿಂದ ಪೂರ್ತಿಯಾಗಿ ಹಿಪ್ನೋಟಿಸಮ್​ಗೆ ಒಳಗಾಗಿ ಸಂಪೂರ್ಣ ಬದುಕನ್ನೇ ಹಾಳುಮಾಡಿಕೊಂಡೆ ಎಂಬುದನ್ನು ವಿವರಿಸಿದ್ದಾರೆ. ಖಿನ್ನತೆಯಿಂದ ಬಳಲುತ್ತಿದ್ದ ಆ ವ್ಯಕ್ತಿ ಈಕೆಯನ್ನು ಮೊದಲ ಬಾರಿಗೆ ಸಂಪರ್ಕಿಸಿದ್ದು 2014ರಲ್ಲಿ. ಆತನ ಜಾತಕವು ತುಂಬ ಕೆಟ್ಟದ್ದಾಗಿದೆ ಎಂದು ಹೇಳಿ, ಅಲ್ಲಿಂದಲೇ ಆ ವ್ಯಕ್ತಿಯ ಮನಸ್ಸಿನಲ್ಲಿ ಪೂರ್ತಿ ಭಯವನ್ನು ತುಂಬಲಾಯಿತು. 2016ರ ಅಂತ್ಯದವರೆಗೂ ಆತನನ್ನು ನಿತ್ಯ ಹಲವು ಗಂಟೆಗಳ ಕಾಲ ಆಶ್ರಮಕ್ಕೆ ಕರೆಸಿಕೊಂಡು ಅತ್ಯಂತ ಕಠಿಣ ರೀತಿಯ ಪರಿಹಾರೋಪಾಯಗಳನ್ನು ಹೇಳುವುದು ನಡೆಯಿತು. ಉದಾಹರಣೆಗೆ, ದೇವಾಲಯಕ್ಕೆ ಹೋಗುವಾಗ ಸಾವಿರ ಬಾರಿ ಪ್ರಾಣಿಗಳಿಗೆ ಆಹಾರ ತಿನ್ನಿಸಬೇಕು ಮೊದಲಾದ, ಪೂರೈಸಲಿಕ್ಕೇ ಆಗದಂಥ ಪರಿಗಾರೋಪಾಯಗಳು ಅವಾಗಿದ್ದವು. 2016ರ ನಂತರ ಆಕೆ ಆ ಆಸ್ರಮ ಬಿಟ್ಟು ಫೋನ್ ಮೂಲಕ ಸಂಪರ್ಕಿಸಲು ಶುರು ಮಾಡಿದ್ದಳು. ಆದರೆ ಭೇಟಿಗೆಅವಕಾಶ ಕೇಳಿದರೆ ಒಮ್ಎಯೂ ವಿಳಾಸ ಕೊಡದೇ ಸತಾಯಿಸಿದ್ದಳು. ಆ ವ್ಯಕ್ತಿಯಂತೂ ಹಿಪ್ನೋಟಿಸಮ್​ಗೆ ಒಳಗಾದವನಂತೆ, ಬ್ಲ್ಯಾಕ್​ಮೇಲ್​ಗೆ ತುತ್ತಾಗಿರುವಂತೆ, ತುಂಬ ಒತ್ತಡದಲ್ಲಿರುವಂತೆ ವಿಚಿತ್ರ ಸಂಕಟ ಅನುಭವಿಸುವಂತಾಯಿತು. ಐದು ಬಾರಿನಾನು ನಗರದಿಂದ ನಗರಕ್ಕೆ ಮನೆಯಿಂದ ಮನೆಗೆ ವಾಸ್ತವ್ಯ ಬದಲಾಯಿಸಿದೆ. ಆಕೆ ಹೇಳಿದಂತೆ ಯಾವ ಕೆಲಸವೂ ನನಗೆ ದೊರೆಯಲಿಲ್ಲ. ಯಾವ ಒಳ್ಳೆಯ ಪರಿಹಾರವೂ ಆಕೆಯಿಂದ ಇಲ್ಲಿಯವರೆಗೂ ನನಗೆ ಒದಗಲಿಲ್ಲ ಎಂದು ಆ ವ್ಯಕ್ತಿ ದೂರಿದ್ದಾರೆ. ಹಣ ಕಳೆದುಕೊಂಡದ್ದು ಮಾತ್ರವೇ ಪೂಜಾ ಅಲಿಯಾಸ್ ರೀನಾ ಶ್ರೀವಾಸ್ತವ್ ಎಂಬ ಜ್ಯೋತಿಷಿಯ ಸೋಗಿನಲ್ಲಿರುವ ಆಕೆಯಿಂದ ಆ ವ್ಯಕ್ತಿಗೆ ಸಿಕ್ಕ ಫಲ. ಜನರ ಮಾನಸಿಕ ದೌರ್ಬಲ್ಯವನ್ನೇ ಬಂಡವಾಳ ಮಾಡಿಕೊಂಡು, ಅವರನ್ನು ಭಯದಲ್ಲಿಟ್ಟು ವಂಚಿಸುತ್ತ ಹಣ ಮಾಡಿಕೊಳ್ಳುವ ಇಂಥವರ ಸಂಖ್ಯೆ ದೊಡ್ಡದೇ ಇದೆ. ಆದರೆ ಕೋಟಿಗಟ್ಟಲೆ ಹಣ ಕಿತ್ತಿರುವ ಈಕೆಯ ಚಮತ್ಕಾರ ಮಾತ್ರ ಎಲ್ಲರನ್ನೂ ಮೀರಿಸುವ ಹಾಗಿದೆ.

ಹೆಚ್ಚು ಓದಿದ ಸುದ್ದಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ
Published 22 ಡಿಸೆಂಬರ್ 2023, 23:16

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ
Published 22 ಡಿಸೆಂಬರ್ 2023, 23:14

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್
Published 31 ಮಾರ್ಚ್ 2023, 17:40

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ
Published 16 ಮಾರ್ಚ್ 2023, 14:45

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ
Published 16 ಮಾರ್ಚ್ 2023, 14:45

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ
Published 16 ಮಾರ್ಚ್ 2023, 14:45

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!
Published 16 ಮಾರ್ಚ್ 2023, 14:45

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್
Published 16 ಮಾರ್ಚ್ 2023, 14:45

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ
Published 16 ಮಾರ್ಚ್ 2023, 14:45

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!
Published 16 ಮಾರ್ಚ್ 2023, 14:45

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ
Published 16 ಮಾರ್ಚ್ 2023, 14:45

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ
Published 16 ಮಾರ್ಚ್ 2023, 14:45