NEWS: ಬೆಂಗಳೂರು: ಜೂನ್ ಮೊದಲ ವಾರದಲ್ಲಿ ಆಗಮಿಸುವ ಮುಂಗಾರು ಮಳೆ ಈ ಸಲ ನಾಲ್ಕು ದಿನ ಮೊದಲೇ ರಾಜ್ಯ ಪ್ರವೇಶಿಸಲಿದೆ. ಆದರೆ ಇದಕ್ಕೂ ಮೊದಲೇ ಮೇ 26ರಿಂದ ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಮಳೆ ಆರಂಭವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ತೌತೆ ಮತ್ತು ಯಾಸ್ ಚಂಡಮಾರುತಗಳು ಒಂದರ ಬೆನ್ನಿಗೊಂದರಂತೆ ದಾಳಯಿಟ್ಟ ಪರಿಣಾಮ ಇದೆಂದು ಹೇಳಲಾಗುತ್ತಿದೆ. ಸಾಮಾನ್ಯವಾಗಿ ಜೂನ್ 1ರ ಹೊತ್ತಿಗೆ ಕೇರಳ ಪ್ರವೇಶಿಸುವ ನೈಋತ್ಯ ಮುಂಗಾರು ಜೂನ್ 4ರ ಹೊತ್ತಿಗೆ ಕರ್ನಾಟಕದೆಡೆಗೆ ಆಗಮಿಸುತ್ತದೆ. ಆದರೆ ಈ ಬಾರಿ ಎರಡು ಚಂಡಮಾರುತಗಳ ಪರಿಣಾಮವಾಗಿ ಮೇ 31ಕ್ಕೇ ರಾಜ್ಯದಲ್ಲಿ ಮುಂಗಾರು ಮಳೆಯಾಗುವ ಸಾಧ್ಯತೆಗಳಿವೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಅಬ್ಬರದ ಮಳೆಯಾಗುವ ಸಾಧ್ಯತೆಯಿರುವುದರಿಂದ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.