ಈ ಕ್ಷಣ :

ಭಕ್ತಿ ಭಂಡಾರಿ ಬಸವಣ್ಣ ಜನ್ಮ ಜಯಂತಿ ಮತ್ತು ಅಕ್ಷಯ ತೃತೀಯ ಆಚರಣೆ

Published 16 ಮಾರ್ಚ್ 2023, 14:29 IST
Last Updated 23 ಏಪ್ರಿಲ್ 2023, 17:21 IST
ಸ್ನೇಹಿತನ ಕತ್ತು ಕೊಯ್ದು ರಕ್ತ ಕುಡಿದ ಕಿರಾತಕ! ಬೆಚ್ಚಿಬಿದ್ದ ಚಿಂತಾಮಣಿ

OPINION:

ಭಕ್ತಿ ಭಂಡಾರಿ ಬಸವಣ್ಣ ಅಕ್ಷಯ ತೃತೀಯ ದಿನವೇ ಹುಟ್ಟಿದರಾ..? ಅಕ್ಷಯ ತೃತೀಯ ದಿನದಂದು, ಏನೇ ಖರೀದಿಸಿದರೂ ದ್ವಿಗುಣವಾಗುತ್ತಾ..? ಭಕ್ತಿ ಬಂಢಾರಿ ಬಸವಣ್ಣನವರು ಹುಟ್ಟು ಹಬ್ಬ ಅಕ್ಷಯ ತೃತೀಯ ದಿನವೇ ಆಚರಿಸೋದು ಯಾಕೆ..? ಇಂತಹ ಪ್ರಶ್ನೆಗಳು ನಿಮ್ಮಲ್ಲೂ ಮೂಡಿರುತ್ತವೆ ಅಲ್ವಾ..? ಅದಕ್ಕೆ ಉತ್ತರ ಕೊಡುವ ಪುಟ್ಟ ಪ್ರಯತ್ನವೇ ಈ ಸ್ಟೋರಿ
ಅಂದಾಗೆ ವೀಕ್ಷಕರೇ, ಅಕ್ಷಯ ತೃತೀಯದ ದಿನವೇ ಬಸವಣ್ಣನವರು ಜನಿಸಿದರೂ ಅಂತ ಹೇಳುವ ಯಾವುದೇ ಶಾಸನವಾಗಲಿ ಅಥವಾ ಲೇಖನವಾಗಲಿ ದೊರೆತಿಲ್ಲ. ಆದ್ರೆ ನಮ್ಮ ಕರ್ನಾಟಕದ ಗಾಂಧಿ ಅಂತಲೇ ಕರೆಸಿಕೊಳ್ಳುವ ಹರ್ಡೇಕರ್ ಮಂಜಪ್ಪನವರು ಜ್ಞಾನ ಜ್ಯೋತಿ ಬಸವಣ್ಣನವರ ಜನ್ಮದಿನ ಆಚರಣೆಗೆ ನಾಂದಿ ಹಾಡಿದರು. ಅಂದಿನಿಂದ ಇಂದಿನವರೆಗೂ ಬಸವ ಜಯಂತಿಯನ್ನ ನಾವು ಆಚರಿಸಿಕೊಂಡು ಬರುತ್ತಿದ್ದೇವೆ. ಅಂದಾಗೆ ಈ ಅಕ್ಷಯ ತದಿಗೆ ದಿನವೇ ಬಸವಣ್ಣನವರ ಜನ್ಮ ಜಯಂತಿ ಆಚರಿಸೋದು ಯಾಕೆ ಅನ್ನೋ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ
ಹೌದು….ಅಕ್ಷಯತದಿಗೆಯಂದು ಬಸವಜಯಂತಿಯನ್ನು ಆಚರಿಸುತ್ತಿರುವ ಸಂಪ್ರದಾಯವನ್ನು ಕರ್ನಾಟಕದ ಗಾಂಧಿಯಂದು ಪ್ರಸಿದ್ಧರಾದ ಶ್ರೀ ಹರ್ಡೇಕರ ಮಂಜಪ್ಪನವರರು ಪ್ರಾರಂಭಿಸಿದರು. 1913ರಲ್ಲಿ ಸಾರ್ವಜನಿಕವಾಗಿ ಬಸವ ಜಯಂತಿಯ ಆಚರಣೆ ಶುರು ಮಾಡಿದರು. ಇದಕ್ಕೂ ಕಾರಣವಿತ್ತು. ವೀರಶೈವ, ಲಿಂಗಾಯತ ಸಮಾಜದ ಜಾಗೃತಿ-ಸಂಘಟನೆಗಾಗಿ ಬಸವ-ಜಯಂತಿಯನ್ನು ಆಚರಿಸುವುದು ಆವಶ್ಯಕವೆಂದು ಆಗಿನ ಸಮಾಜದ ಹಿರಿಯರು ಭಾವಿಸಿದ್ದರು. ಆದರೆ ಯಾವ ದಿನದಂದು ಆಚರಿಸಬೇಕೆಂದು ನಿರ್ವಿವಾದವಾಗಿ ನಿರ್ಧಾರ ಮಾಡುವುದು ಶಕ್ಯವಿರಲಿಲ್ಲ. ಶ್ರೀ ಮಂಜಪ್ಪನವರು ಮುರುಘಾಮಠದ ಪೂಜ್ಯ ಶ್ರೀ ಮೃತ್ಯುಂಜಯ ಸ್ವಾಮಿಗಳ ಮಾರ್ಗದರ್ಶನದಲ್ಲಿ ಅಕ್ಷಯತದಿಗೆಯಂದು ಬಸವಜಯಂತಿಯನ್ನು ಆಚರಿಸಬೇಕೆಂದು ನಿರ್ಧರಿಸಿದರು. ಅದರಂತೆ ದಾವಣಗೆರೆಯಲ್ಲಿ 1913ರಲ್ಲಿ ಮೊದಲ ಬಸವ ಜಯಂತಿಯನ್ನ ಸಾರ್ವಜನಿಕವಾಗಿ ಆಚರಣೆ ಮಾಡಲಾಯಿತು. ಅದಾದ ಮೇಲೆ ಪ್ರತಿ ವರ್ಷ ಅದೇ ದಿನದಂದು ಬಸವ ಜಯಂತಿಯನ್ನು ಆಚರಿಸುವ ಪರಂಪರೆ ನಡೆದುಕೊಂಡು ಬಂದಿದೆ.
ಅಕ್ಷಯ ತೃತೀಯ ಮತ್ತು ಬಸವ ಜಯಂತಿ ಆಚರಣೆ ಕುರಿತಂತೆ ಅನೇಕ ನಂಬಿಕೆಗಳಿವೆ. ಮೊದಲಿಗೆ ಅಕ್ಷಯ ತೃತೀಯ ಆಚರಣೆ ಕುರಿತಂತೆ ಹೇಳುವುದಾದರೆ, ಅಕ್ಷಯ ತೃತೀಯವನ್ನು ಹೆಚ್ಚು ಪವಿತ್ರ ದಿನವೆಂದು ನಂಬಲಾಗಿದೆ. ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೆಯ ದಿನದಂದು ಅಕ್ಷಯ ತೃತೀಯವನ್ನು ಆಚರಿಸಲಾಗುತ್ತದೆ. ಅಕ್ಷಯ ತೃತೀಯವೆಂಬುದು ಶುಭದ ಸಂಕೇತವಾಗಿದೆ. ಎಂದಿಗೂ ಕೊನೆಯಾಗದ ಶುಭ ನಿರೀಕ್ಷೆಗಳು ಎಂಬ ಅರ್ಥವನ್ನು ಅಕ್ಷಯ ತೃತೀಯ ಸಾರಿ ಹೇಳುತ್ತದೆ.
ಈ ದಿನದಂದು ನೀವು ಏನು ಮಾಡಿದರೂ ಅದು ನಿಮಗೆ ದೊರೆಯುತ್ತದೆ ಅಂತೆಯೇ ನೀವು ಪಡೆದುಕೊಳ್ಳುವ ಲಾಭ ದುಪ್ಪಟ್ಟಾಗುತ್ತದೆ ಎಂಬ ವಿಶ್ವಾಸವಿದೆ. ಈ ದಿನದಂದು ಜನರು ದಾನ ಧರ್ಮಗಳನ್ನು ಮಾಡುತ್ತಾರೆ. ಈ ದಿನದಂದು ವಿವಾಹವಾಗುವ ದಂಪತಿಗಳ ದಾಂಪತ್ಯ ಹೆಚ್ಚು ಬಲವಾಗಿರುತ್ತದೆ ಮತ್ತು ಅನ್ಯೂನ್ಯವಾಗಿರುತ್ತದೆ ಎಂಬುದು ಜನಜನಿತವಾದ ಮಾತು.
ಇನ್ನು ಹಿಂದೂ ಪುರಾಣದ ಪ್ರಕಾರ ಅಕ್ಷಯ ತೃತೀಯ ಮಹಾವಿಷ್ಣುವಿಗೆ ಸಂಬಂಧಿಸಿದ ದಿನ ಅಂತಲೂ ಹೇಳಲಾಗುತ್ತೆ. ಈ ದಿನದಂದೇ ವಿಷ್ಣು ಪರಶುರಾಮನಾಗಿ ಖುಷಿ ಜಮದಗ್ನಿ ಹಾಗೂ ರೇಣುಕಾರ ಮಗನಾಗಿ ಅವತಾರ ತಾಳಿದ್ದರು ಎನ್ನಲಾಗುತ್ತದೆ.
ಅಷ್ಟೆ ಅಲ್ಲ, ಇದೇ ದಿನ ಸ್ವರ್ಗದ ದಾರಿಯಲ್ಲಿ ಹರಿಯುವ ಗಂಗೆಯನ್ನು ಭಗೀರಥನು ಭೂಮಿಗೆ ಬರಮಾಡುವಂತೆ ಮಾಡಿದ್ದು ಎಂದೇಳಲಾಗುತ್ತದೆ. ಗಂಗಾ ಸ್ನಾನವನ್ನು ಈ ದಿನ ಮಾಡಿದರೆ ಸಕಲ ಪಾಪಗಳೂ ನಿವಾರಣೆಯಾಗುತ್ತದೆ ಎಂಬ ಮಾತಿದೆ. ಇನ್ನು ಮಹಾತಾಯಿ ಅನ್ನಪೂರ್ಣೆಯೂ ಪಾರ್ವತಿ ದೇವಿಯ ಅಂಶವಾಗಿದ್ದು, ಅಕ್ಷಯ ತೃತೀಯ ದಿನದಂದೇ ಈಕೆ ಜನ್ಮ ತಾಳಿದಳು ಎಂಬ ಮಾತಿದೆ. ಈ ದಿನದಂದು, ಅಕ್ಷಯ ಪಾತ್ರೆಯನ್ನು ಕರುಣಿಸು ಎಂದು ಭಕ್ತರು ಅನ್ನಪೂರ್ಣೆಯನ್ನು ಪೂಜಿಸಿ ಬೇಡುವ ಪರಿಪಾಠವೂ ಇದೆ.
ಇನ್ನು ಭಾರತದ ದಕ್ಷಿಣ ಭಾಗದಲ್ಲಿ ಕುಬೇರನು, ಸಂಪತ್ತು ಮತ್ತು ಐಶ್ವರ್ಯಕ್ಕಾಗಿ ಲಕ್ಷ್ಮೀ ದೇವಿಯನ್ನು ಪ್ರಾರ್ಥಿಸುತ್ತಾನೆ. ತದನಂತರ ಕುಬೇರನು ಆಗರ್ಭ ಶ್ರೀಮಂತನಾಗುತ್ತಾನೆ. ಅಂತೆಯೇ ದೇವತೆಗಳಿಗೆ ಸಾಲ ನೀಡುವಷ್ಟು ದೊಡ್ಡವನಾಗುತ್ತಾನೆ. ಅಕ್ಷಯ ತೃತೀಯದಂದು ದಕ್ಷಿಣ ಭಾರತದ ಜನರು ಮೊದಲು ವಿಷ್ಣುವನ್ನು ಪ್ರಾರ್ಥಿಸಿದರೆ ನಂತರ ಲಕ್ಷ್ಮೀಯನ್ನು ನೆನೆಯುತ್ತಾರೆ. ವಿಷ್ಣು ಮತ್ತು ಲಕ್ಷ್ಮೀಯ ವಿಗ್ರಹಗಳೊಂದಿಗೆ ಕುಬೇರನ ವಿಗ್ರಹವನ್ನು ಪೂಜಿಸಲಾಗುತ್ತದೆ.
ಮಹಾಭಾರತದಲ್ಲಿ ಕೂಡ ಅಕ್ಷಯ ತೃತೀಯ ದಿನದ ವಿಶೇಷತೆಗಳನ್ನು ವ್ಯಾಖ್ಯಾನಿಸಲಾಗಿದೆ. ಅಕ್ಷಯ ತೃತೀಯದಂದೇ ಮಹರ್ಷಿ ವೇದ ವ್ಯಾಸರು ಮಹಾಭಾರತವನ್ನು ಬರೆಯಲು ಆರಂಭಿಸಿದರು ಎನ್ನಲಾಗುತ್ತೆ. ಯುಧಿಷ್ಟಿರನಿಗೆ ಅಕ್ಷಯ ಪಾತ್ರೆ ದೊರೆತಿದ್ದು ಈ ದಿನದಂದೇ ಆಗಿದೆಯಂತೆ. ಅಕ್ಷಯ ಪಾತ್ರೆಯು ಸುಭೀಕ್ಷವಾಗಿ ಆಹಾರವನ್ನು ನೀಡುವ ಪಾತ್ರೆಯಾಗಿದ್ದು, ಇದರಲ್ಲಿ ಆಹಾರ ಎಂದಿಗೂ ಬರಿದಾಗುವುದೇ ಇಲ್ಲ. ದ್ರೌಪದಿಯು ತನ್ನ ಊಟವನ್ನು ಮುಗಿಸುವವರೆಗೂ ಈ ಪಾತ್ರೆಯು ಅನ್ನವನ್ನು ನೀಡುತ್ತಿತ್ತು ಎಂಬುದು ಪ್ರತೀತಿಯಾಗಿದೆ.
ಇಷ್ಟೆ ಅಲ್ಲ, , ದುಶ್ಯಾಸನ ದ್ರೌಪದಿಯ ಸೀರೆಯನ್ನು ಸೆಳೆಯುವಾಗ ಶ್ರೀಕೃಷ್ಣ ಪರಮಾತ್ಮ ಮಾನ ಕಾಪಾಡಿದ್ದು ಕೂಡ ಇದೇ ಅಕ್ಷಯ ತೃತೀಯ ದಿನದಂದು ಎನ್ನಲಾಗುತ್ತೆ. ಇನ್ನು ಕೃಷ್ಣ ಮತ್ತು ಸುಧಾಮನ ಕಥೆಯೂ ತಳುಕುಹಾಕಿಕೊಂಡಿದೆ. ಸುಧಾಮ ಅವಲಕ್ಕಿ ತಂದು ಕೃಷ್ಣ ಪರಮಾತ್ಮನಿಗೆ ನೀಡಿದ್ದು, ಶ್ರೀ ಕೃಷ್ಣ ಸುಧಾಮನಿಗೆ ಆಸ್ತಿ ಐಶ್ವರ್ಯವನ್ನ ನೀಡಿದ್ದು, ಇದೇ ಅಕ್ಷಯ ತೃತೀಯ ದಿನದಂದೇ ಎನ್ನಲಾಗುತ್ತೆ. ಇಂತಹ ಪವಿತ್ರ ದಿನವನ್ನೇ ಆಯ್ಕೆ ಮಾಡಿಕೊಂಡ ಹರ್ಡೇಕರ್ ಮಂಜಪ್ಪ ಬಸವಣ್ಣನವರ ಜಯಂತಿಯನ್ನೂ ಪ್ರಾರಂಭಿಸಿದರು.
ಅಂದಾಗೆ ಬಸವಣ್ಣ ಒಬ್ಬ ಮಹಾನ್ ಕವಿ, ಸಾಮಾಜಿಕ ಸುಧಾರಕ ಮತ್ತು ದಾರ್ಶನಿಕ. ಸಮಾಜಕ್ಕೆ ಹಲವಾರು ಕೊಡುಗೆಗಳನ್ನು ನೀಡಿದ ಈ ಬಸವಣ್ಣ ಹುಟ್ಟಿದ ದಿನವನ್ನು ಪ್ರತಿವರ್ಷ ಆಚರಣೆ ಮಾಡಲಾಗುತ್ತದೆ. ಇದನ್ನು ಕರ್ನಾಟಕದಲ್ಲಿ ರಾಜ್ಯ ರಜಾದಿನವೆಂದು ಘೋಷಿಸಲಾಗಿದೆ. ಈ ದಿನ ಜನರು ಪ್ರಾರ್ಥನೆ ಸಲ್ಲಿಸಲು ಬಸವೇಶ್ವರ ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಇದು ರೈತರಿಗೆ ಒಂದು ಪ್ರಮುಖ ದಿನವಾಗಿದೆ. ಬಸವಣ್ಣನ ಬೋಧನೆಗಳನ್ನು ನೆನಪಿಟ್ಟುಕೊಳ್ಳಲು ಉಪನ್ಯಾಸಗಳು ನಡೆಯುತ್ತವೆ. ಬಸವಣ್ಣನವರ ಐಕ್ಯ ಸ್ಥಳವಾದ ಕೂಡಲಸಂಗಮದಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತವೆ.
ನೋಡುದ್ರಲ್ಲಾ, ಅಕ್ಷಯ ತೃತೀಯ ಸಂಪತ್ತು ವೃದ್ದಿಗಾಗಿ ವಿಷ್ಣು ಮತ್ತು ಲಕ್ಷ್ಮಿಯನ್ನ ಆರಾಧಿಸುವ ದಿನವಾಗಿದ್ರೆ, ಬಸವ ಜಯಂತಿ ಸಮಾಜ ಸುಧಾರಕ, ದಾರ್ಶನಿಕನನ್ನು ನೆನೆಯುವ ದಿನವಾಗಿದೆ.


ಹೆಚ್ಚು ಓದಿದ ಸುದ್ದಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ
Published 22 ಡಿಸೆಂಬರ್ 2023, 23:16

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ
Published 22 ಡಿಸೆಂಬರ್ 2023, 23:14

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್
Published 31 ಮಾರ್ಚ್ 2023, 17:40

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ
Published 16 ಮಾರ್ಚ್ 2023, 14:45

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ
Published 16 ಮಾರ್ಚ್ 2023, 14:45

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ
Published 16 ಮಾರ್ಚ್ 2023, 14:45

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!
Published 16 ಮಾರ್ಚ್ 2023, 14:45

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್
Published 16 ಮಾರ್ಚ್ 2023, 14:45

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ
Published 16 ಮಾರ್ಚ್ 2023, 14:45

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!
Published 16 ಮಾರ್ಚ್ 2023, 14:45

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ
Published 16 ಮಾರ್ಚ್ 2023, 14:45

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ
Published 16 ಮಾರ್ಚ್ 2023, 14:45