ಈ ಕ್ಷಣ :

ಇಮ್ರಾನ್ ಸರ್ಕಾರದ ಪತನಕ್ಕೆ ಯಾರು ಕಾರಣ?

Published 16 ಮಾರ್ಚ್ 2023, 14:13 IST
Last Updated 7 ಮೇ 2023, 00:46 IST
ಸ್ನೇಹಿತನ ಕತ್ತು ಕೊಯ್ದು ರಕ್ತ ಕುಡಿದ ಕಿರಾತಕ! ಬೆಚ್ಚಿಬಿದ್ದ ಚಿಂತಾಮಣಿ

OPINION:

ಇಮ್ರಾನ್​ಖಾನ್ ಸರ್ಕಾರ ಪತನದ ಅಂಚಿನಲ್ಲಿದೆ. ಅವಿಶ್ವಾಸ ಗೊತ್ತುವಳಿ ನಿರ್ಣಯದ ಮೇಲೆ ಚರ್ಚೆ ನಡೆಯುತ್ತಿದೆ. ಇದನ್ನು ನೀವು ಓದುವ ಹೊತ್ತಿಗಾಗಲೇ ಖಾನ್ ಸರ್ಕಾರ ಪತನವಾಗಿರಲೂಬಹುದು. ಪಾಕಿಸ್ತಾನದ ಇದುವರೆಗಿನ ಯಾವ ಪ್ರಧಾನಿಯೂ ತನ್ನ ಐದು ವರ್ಷಗಳ ಅಧಿಕಾರಾವಧಿಯನ್ನು ಪೂರೈಸಿಲ್ಲ ಎಂಬ ಮಾತಿದೆ. ಇಮ್ರಾನ್​ಖಾನ್ ವಿಷಯದಲ್ಲಿಯೂ ಅದೇ ಆಗಿದೆ. ಆದರೆ ವ್ಯತ್ಯಾಸವಿಷ್ಟೆ. ಇದುವರೆಗೆ ಪಾಕ್ ಪ್ರಧಾನಿಯನ್ನು, ಸರ್ಕಾರವನ್ನು ಅಲ್ಲಿನ ಮಿಲಿಟರಿ ಪದಚ್ಯುತಗೊಳಿಸುತ್ತಿತ್ತು. ವಿರೋಧ ಪಕ್ಷಗಳು ಅವಿಶ್ವಾಸ ಗೊತ್ತುವಳಿ ಮಂಡಿಸಿ ಇಳಿಸುತ್ತಿದ್ದರು. ಹಾಗಾದರೆ ಖಾನ್ ಸಹ ವಿರೋಧ ಪಕ್ಷಗಳ ಅವಿಶ್ವಾಸ ಗೊತ್ತುವಳಿ ಪ್ರಸ್ತಾವದ ನಂತರವೇ ಅಲ್ಲವೇ ಇಳಿಯುತ್ತಿರುವುದು ಎಂದು ನೀವು ಕೇಳಬಹುದು. ಹೌದು, ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವೇನೋ ಮಂಡಿಸಲಾಗಿದೆ. ಆದರೆ ಇಲ್ಲಿ ಇಮ್ರಾನ್ ಮಾಡುತ್ತಿರುವ ಗಂಭೀರ ಆರೋಪವೊಂದನ್ನು ಗಮನಿಸಿದರೆ ಕಹಾನಿಮೆ ಬಡಾ ಟ್ವಿಸ್ಟ್ ಹೈ ಎನಿಸುತ್ತದೆ.

ತಾವು ಇಳಿಯುವುದಕ್ಕೆ ಕಾರಣ ಪ್ರತಿಪಕ್ಷಗಳಲ್ಲ, ಅವು ನಿಮಿತ್ತ ಮಾತ್ರ. ನಿಜವಾದ ಕಾರಣ ಬಾಹ್ಯಶಕ್ತಿಗಳು ಎಂದು ಇಮ್ರಾನ್ ಆರೋಪಿಸಿದ್ದಾರೆ. ಇಮ್ರಾನ್ ಭಾನುವಾರದ ಶಕ್ತಿ ಪ್ರದರ್ಶನದ ರ್ಯಾಲಿಯಲ್ಲಿ ಪತ್ರವೊಂದನ್ನು ಜನರಿಗೆ ತೋರಿಸುತ್ತ ಇದನ್ನು ಹೇಳಿದ್ದರು, ನಂತರ ಜನರನ್ನುದ್ದೇಶಿಸಿ ಮಾಡಿದ ಭಾಷಣದಲ್ಲೂ ಸಹ ಹೇಳಿದ್ದಾರೆ. ಆದರೆ ತಮ್ಮನ್ನು ತಮ್ಮ ಸರ್ಕಾರವನ್ನು ಪದಚ್ಯುತಗೊಳಿಸಲು ಪ್ರಯತ್ನಿಸಲು ಸಂಚು ಹೂಡಿರುವ ದೇಶ ಯಾವುದು ಎಂಬುದಕ್ಕೆ ಉತ್ತರವಾಗಿ ಅಮೆರಿಕ ಎಂದು ಹೇಳಿದ್ದು ಈಗ ಜಗತ್ತಿನೆಲ್ಲೆಡೆ ಗುಲ್ಲಾಗಿದೆ.

ಬುಧುವಾರ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್ ಎ ಇನ್ಸಾಫ್ ನೇತೃತ್ವದ ಸರ್ಕಾರವು ವಿದೇಶಿ ಪಿತೂರಿಯ ಬಗ್ಗೆ ಆರೋಪವನ್ನು ಮಾಡಿ ಒಂದು ದೇಶದ ರಾಯಭಾರ ಕಚೇರಿಯ ಕೃತ್ಯ ಎಂದು ಧೃಡಪಡಿಸಿತು. “ಅವಿಶ್ವಾಸ ಗೊತ್ತುವಳಿ ಮಂಡನೆಯಾಗುವ ಮೊದಲೇ ಅದನ್ನು ಮಂಡಿಸಲಾಗುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ, ಅಂದರೆ ಪ್ರತಿಪಕ್ಷಗಳು ಮೊದಲೇ ಅವರೊಂದಿಗೆ ಸಂಪರ್ಕದಲ್ಲಿವೆ ಎಂದು ಖಾನ್ ಆರೋಪಿಸಿದ್ದಾರೆ.

69 ವರ್ಷದ ಇಮ್ರಾನ್​ಖಾನ್ ಅಧಿಕಾರ ಕಿತ್ತುಕೊಳ್ಳುವ ಅವರ ಪ್ರಯತ್ನ ತಮ್ಮ ವಿರುದ್ಧವಾಗಿದೆಯೇ ಹೊರತು ತಮ್ಮ ಸರ್ಕಾರದ ವಿರುದ್ಧ ಇಲ್ಲ ಎಂದು ಹೇಳಿದ್ದಾರೆ. ಅವಿಶ್ವಾಸ ನಿರ್ಣಯ ಅಂಗೀಕಾರವಾದರೆ, ಪಾಕಿಸ್ತಾನವನ್ನು ಕ್ಷಮಿಸಲಾಗುವುದು, ಇಲ್ಲದಿದ್ದರೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಆ ಪತ್ರದಲ್ಲಿ ಹೇಳಲಾಗಿದೆ ಎಂದು ಇಮ್ರಾನ್ ಆರೋಪಿಸಿದ್ದಾರೆ. ಇಮ್ರಾನ್​ಖಾನ್ ಅಧಿಕಾರದಲ್ಲಿ ಮುಂದುವರೆದರೆ ಪಾಕಿಸ್ತಾನವು ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂದು ರಾಯಭಾರಿಗೆ ತಿಳಿಸಲಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ. ಇದೆಲ್ಲವನ್ನು ಮಾಡಿರುವ ದೇಶ ಅಮೆರಿಕಾ ಎಂದು ಇಮ್ರಾನ್ ನೇರವಾಗಿ ಆರೋಪಿಸಿದ್ದಾರೆ.

1999ರಲ್ಲಿ ಅಂದಿನ ಪಾಕ್ ಪ್ರಧಾನಿ ನವಾಜ್ ಶರೀಫ್ ರಷ್ಯಾಗೆ ಭೇಟಿ ನೀಡಿದ 23 ವರ್ಷಗಳ ನಂತರ ಪಾಕ್ ಪ್ರಧಾನಿಯ ರೂಪದಲ್ಲಿ ಇಮ್ರಾನ್ ಖಾನ್ ಫೆಬ್ರವರಿ 24ರಂದು ಭೇಟಿ ನೀಡಿದ್ದರು. ಅದು ಉಕ್ರೇನ್ ಮೇಲೆ ರಷ್ಯಾ ಯುದ್ಧ ಘೋಷಿಸಿದ್ದ ಸಮಯ. ಇದೇ ವಿಷಯ ಅಮೆರಿಕಾ ಪಾಕಿಸ್ತಾನದಲ್ಲಿ ಖಾನ್ ಕೆಳಗಿಳಿಸಲು ಯೋಚಿಸುವಂತೆ ಮಾಡಿತಾ ಎನ್ನುವುದು ಈಗ ರಾಜಕೀಯ ಪಂಡಿತರನ್ನು ಯೋಚಿಸುವಂತೆ ಮಾಡಿರುವ ವಿಷಯ. ಆದರೆ ಅಮೆರಿಕಾ ಮಾತ್ರ ಇದನ್ನು ಅಲ್ಲಗಳೆದಿದೆ. ಇಮ್ರಾನ್​ಖಾನ್ ನೇತೃತ್ವದ ಸರ್ಕಾರದ ವಿರುದ್ಧದ ಅವಿಶ್ವಾಸ ಗೊತ್ತುವಳಿಯಲ್ಲಿ ಅಮೆರಿಕದ ಕೈವಾಡದ ಆರೋಪವನ್ನು ಯುಎಸ್ ತಳ್ಳಿಹಾಕಿದೆ. ಪಾಕಿಸ್ತಾನಕ್ಕೆ ಪ್ರಸ್ತುತ ಆ ದೇಶದ ರಾಜಕೀಯ ಪರಿಸ್ಥಿತಿಯ ಕುರಿತು ಯಾವುದೇ ಪತ್ರವನ್ನು ತಾನು ಕಳುಹಿಸಿಲ್ಲ ಎಂದು ಅಮೆರಿಕಾ ಪ್ರತಿಪಾದಿಸಿದೆ.

ಉಕ್ರೇನ್ ಮೇಲೆ ರಷ್ಯಾ ಮಾಡಿದ ಆಕ್ರಮಣವನ್ನು ಖಂಡಿಸುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ನಿರ್ಣಯದ್ಲಿ ಪಾಕಿಸ್ತಾನ ಮತದಾನದಿಂದ ದೂರವಿತ್ತು ಮತ್ತು ಸಂಘರ್ಷವನ್ನು ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಪರಿಹರಿಸಬೇಕೆಂದು ಒತ್ತಾಯಿಸಿತ್ತು. ಈ ವಿಷಯವೇ ಪಾಕಿಸ್ತಾನದ ಬಗ್ಗೆ ಅಮೆರಿಕಾ ಯೋಚಿಸುವಂತೆ ಮಾಡಿರುವ ಸಾಧ್ಯತೆಯಿದೆ. ಜೊತೆಗೆ ಈ ನಡುವೆ ಅಮೆರಿಕಾ ಜೊತೆಗಿನ ಶೀತಲ ಸಂಬಂಧವೂ ಸಹ ಪಾಕ್ ರಷ್ಯಾ ಮತ್ತು ಚೀನಾಗಳತ್ತ ವಾಲುವಂತೆ ಮಾಡಿತ್ತು.

ಅಮೆರಿಕಾ ಹಾಗೂ ರಷ್ಯಾ ಒಂದೇ ನಾಣ್ಯದ ಎರಡು ಮುಖಗಳು ಎಂಬುದನ್ನು ಪಾಕ್​ನಲ್ಲಿ ನಡೆಯುತ್ತಿರುವ ಈ ಬೆಳವಣಿಗೆ ಸ್ಪಷ್ಟವಾದ ಸಂದೇಶವನ್ನು ಜಗತ್ತಿಗೆ ರವಾನಿಸಿದೆ. ರಷ್ಯಾ ತನಗೆ ಬೇಕಾದ ದೇಶದಲ್ಲಿ ತಾನು ಹೇಳಿದಂತೆ ಕೇಳುವ ಅಧ್ಯಕ್ಷ ಅಥವಾ ಪ್ರಧಾನಿಯನ್ನು ಬಯಸುತ್ತದೆ. ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿರುವುದೂ ಇದೇ ವಿಷಯಕ್ಕೆ ಎಂಬುದು ಎಲ್ಲರಿಗೂ ತಿಳಿದ ವಿಷಯವೇ. ಉಕ್ರೇನ್ ಅಧ್ಯಕ್ಷ ಝಿಲೆನ್ಸ್ಕಿ ರಷ್ಯಾದ ಪುಟಿನ್ ಕೈಗೊಂಬೆಯಾಗಲಿಲ್ಲವೆಂಬ ಏಕೈಕ ಕಾರಣಕ್ಕೆ ರಷ್ಯಾ ಅಲ್ಲಿ ಯುದ್ದವನ್ನು ಸಾರಿ ಮಾರಣಹೋಮವನ್ನೇ ನಡೆಸುತ್ತಿದೆ.

ಈ ವಿಷಯದಲ್ಲಿ ಅಮೆರಿಕಾ ಕೂಡ ರಷ್ಯಾದ ದೊಡ್ಡಣ್ಣನೆಂದೇ ಹೇಳಬಹುದು. ಏಕೆಂದರೆ ರಷ್ಯಾ ಎಲ್ಲರಿಗೂ ಗೊತ್ತಾಗುವಂತೆ ಹುಂಬತನವನ್ನು ತೋರಿ ಯುದ್ಧ ಮಾಡಿದರೆ, ಅಮೆರಿಕಾ ಮಾತ್ರ ದಶಕಗಳಿಂದಲೂ ತನ್ನ ಮಾತು ಕೇಳದ ಚಿಕ್ಕ ದೇಶಗಳ ಪ್ರಧಾನಿಗಳನ್ನು ಒಂದೋ ಸಂಚು ಹೂಡಿ ಕೆಳಗಿಳಿಸುತ್ತದೆ ಇಲ್ಲದಿದ್ದರೆ ಅವರನ್ನು ಗುಪ್ತವಾಗಿ ಕೊಲ್ಲಿಸಿಬಿಡುತ್ತದೆ! ಹೊರಜಗತ್ತಿಗೆ ಮಾತ್ರ ಅಮೆರಿಕದ ಈ ಮುಖವಾಡದ ಹಿಂದಿನ ಕ್ರೌರ್ಯ ಎಂದಿಗೂ ತಿಳಿಯುವುದೇ ಇಲ್ಲ. ಈ ವಿಷಯವನ್ನು ಗಮನಸಿದರೆ ಈಗ ಪಾಕ್ ಪ್ರಧಾನಿಯನ್ನು ಇಳಿಸುವ ಬಗ್ಗೆ ಅಮೆರಿಕಾ ಸಂಚು ಹೂಡಿದೆ ಎಂದು ಖಾನ್ ಮಾಡಿರುವ ಆರೋಪ ತೀರ ಸುಳ್ಳೆಂದು ಹೇಳಲೂ ಸಹ ಆಗುವುದಿಲ್ಲ.

ಓಂಪ್ರಕಾಶ್ ನಾಯಕ್, ಹಿರಿಯ ಉಪಸಂಪಾದಕರು, BMG24x7ಲೈವ್​ಕನ್ನಡ


ಹೆಚ್ಚು ಓದಿದ ಸುದ್ದಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ
Published 22 ಡಿಸೆಂಬರ್ 2023, 23:16

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ
Published 22 ಡಿಸೆಂಬರ್ 2023, 23:14

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್
Published 31 ಮಾರ್ಚ್ 2023, 17:40

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ
Published 16 ಮಾರ್ಚ್ 2023, 14:45

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ
Published 16 ಮಾರ್ಚ್ 2023, 14:45

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ
Published 16 ಮಾರ್ಚ್ 2023, 14:45

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!
Published 16 ಮಾರ್ಚ್ 2023, 14:45

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್
Published 16 ಮಾರ್ಚ್ 2023, 14:45

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ
Published 16 ಮಾರ್ಚ್ 2023, 14:45

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!
Published 16 ಮಾರ್ಚ್ 2023, 14:45

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ
Published 16 ಮಾರ್ಚ್ 2023, 14:45

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ
Published 16 ಮಾರ್ಚ್ 2023, 14:45