ಈ ಕ್ಷಣ :

ಪೆಟ್ರೋಲ್ ಡೀಸಲ್ ಬೆಲೆ ಹೆಚ್ಚಳ; ಅರ್ಥವಾಗದ ಕೇಂದ್ರದ ಲೆಕ್ಕಾಚಾರ!

Published 16 ಮಾರ್ಚ್ 2023, 14:13 IST
Last Updated 6 ಮೇ 2023, 02:49 IST
ಸ್ನೇಹಿತನ ಕತ್ತು ಕೊಯ್ದು ರಕ್ತ ಕುಡಿದ ಕಿರಾತಕ! ಬೆಚ್ಚಿಬಿದ್ದ ಚಿಂತಾಮಣಿ

OPINION:

ಪಂಚರಾಜ್ಯಗಳ ಚುನಾವಣೆ ಬಳಿಕ ಪೆಟ್ರೋಲ್ ಡೀಸಲ್ ದರ ಹೆಚ್ಚುವುದರಲ್ಲಿ ಯಾವುದೇ ಸಂಶಯವಿಲ್ಲ, ಖಂಡಿತ ಹೆಚ್ಚಾಗುತ್ತದೆ ಎಂದು ಚುನಾವಣಾ ಮುನ್ನವೇ ವಿಶ್ಲೇಷಿಸಲಾಗಿತ್ತು. ಈ ಸತ್ಯವನ್ನು ಕಂಡುಹಿಡಿಯಲು ಯಾರೂ ಹೆಚ್ಚು ಕಷ್ಟಪಟ್ಟಿರಲಿಲ್ಲ. ಪಂಡಿತರಿಂದ ಹಿಡಿದು ಪಾಮರರವರೆಗೂ ಎಲ್ಲರಿಗೂ ಈ ಸತ್ಯ ನಿಚ್ಚಳವಾಗಿ ಗೊತ್ತಿತ್ತು.

ಎಲ್ಲವೂ ಅಂದುಕೊಂಡಂತೆಯೇ ಆಯಿತು. ಪಂಚರಾಜ್ಯಗಳಲ್ಲಿ ಪಂಜಾಬೊಂದನ್ನು ಬಿಟ್ಟು ಬಿಜೆಪಿ ಉಳಿದ ನಾಲ್ಕೂ ರಾಜ್ಯಗಳಲ್ಲಿ ಜಯಭೇರಿ ಬಾರಿಸಿ ಕೇಕೆ ಹಾಕಿತು. ಅಲ್ಲಿಯವರೆಗೂ ಮೂರ್ನಾಲ್ಕು ತಿಂಗಳುಗಳ ಕಾಲ ಪೆಟ್ರೋಲ್ ದರವನ್ನು ಏರಿಸದೆ ಕಷ್ಟಪಟ್ಟು ಸಹಿಸಿಕೊಂಡಿದ್ದ ಕೇಂದ್ರ ಸರ್ಕಾರ ಚುನಾವಣಾ ಫಲಿತಾಂಶ ಬಂದು ಗೆದ್ದ ರಾಜ್ಯಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಂತೆಯೇ ದರ ಏರಿಸಿಯೇ ಬಿಟ್ಟಿತು.

ಎಷ್ಟು ಏರಿಸಿದ್ದು? ಕೇವಲ 80 ಪೈಸೆ! ಜನರಿಗೆ ತಮ್ಮ ಕಣ್ಣು ಕಿವಿಗಳನ್ನೇ ನಂಬಲಾಗಲಿಲ್ಲ. ಏಕೆಂದರೆ ರಷ್ಯಾ ಉಕ್ರೇನ್ ಯುದ್ಧದಿಂದಾಗಿ ಭಾರತದ ತೈಲ ಕಂಪನಿಗಳು ಜನರಿಗೆ ಒಂದು ಲೀಟರಿಗೆ ಕೊಡುತ್ತಿದ್ದ ದರಕ್ಕಿಂತ ಕನಿಷ್ಟ 15 ಮತ್ತು ಗರಿಷ್ಟ 25 ರೂಪಾಯಿಗಳಷ್ಟು ನಷ್ಟ ಅನುಭವಿಸುತ್ತಿವೆ ಎನ್ನುವ ವರದಿಗಳಿದ್ದವು. ಹಾಗಾಗಿ ತೈಲ ಕಂಪನಿಗಳು ನಷ್ಟ ಅನುಭವಿಸದಂತೆ ಮಾಡಬೇಕಾದರೆ ಕನಿಷ್ಟವೆಂದರೂ 15ರಿಂದ 20 ರೂಪಾಯಿಗಳಷ್ಟು ದರವನ್ನು ಹೆಚ್ಚು ಮಾಡುತ್ತಾರೆ ಎಂದು ಜನಸಾಮಾನ್ಯರು ಭಾವಿಸಿದ್ದರು. ಆದರೆ ಚುನಾವಣಾ ಫಲಿತಾಂಶದ 8 ದಿನಗಳ ನಂತರ ಆದದ್ದೇನು? ಕೇವಲ 80 ಪೈಸೆ ಹೆಚ್ಚಳ! ಜನರಂತೂ ಈ ಹೆಚ್ಚಳದಿಂದ ಆಕ್ರೋಶಿತರಾಗುವ ಬದಲು ಸಮಾಧಾನದ ನಿಟ್ಟುಸಿರು ಬಿಟ್ಟರು. ಅಬ್ಬ ಹೆಚ್ಚಳ ಇಷ್ಟೇ ತಾನೆ ಎಂದು!

ಆದರೆ ಜನರಿಗೆ ಇದು ಸುನಾಮಿಗೂ ಮುಂಚಿನ ಪರಿಸ್ಥಿತಿ ಎಂಬ ಅರಿವಿರಲಿಲ್ಲ. ಏಕೆಂದರೆ ಸಮುದ್ರದಲ್ಲಿ ಸುನಾಮಿ ಬರುವ ಮೊದಲು ಸಮುದ್ರದ ದಡದಲ್ಲಿಯ ನೀರು ಒಂದು ಕಿಲೋಮೀಟರಿನಷ್ಟು ಹಿಂದೆ ಹೋಗಿ ಸಮುದ್ರ ತೀರ ಖಾಲಿಯಾಗುತ್ತದೆ. ಇದೇನೂ ಸಮದ್ರದಲ್ಲಿ ನೀರೆ ಇಲ್ಲವಲ್ಲ ಎಂದು ನೀವಂದುಕೊಳ್ಳುತ್ತಿರುವಂತೆಯೇ ಹಿಂದೆ ಹೋಗಿದ್ದ ಸಮುದ್ರ ಬೃಹತ್ ಗಾತ್ರದ ಅಲೆಯೊಂದಿಗೆ ತೀರಕ್ಕೆ ಅಪ್ಪಳಿಸುತ್ತದೆ. ಒಂದು ಕಿಲೋಮಿಟರ್ ಒಳಹೋಗಿದ್ದ ಸಮುದ್ರ ಈಗ ಕಿಲೋಮಿಟರ್​ಗಟ್ಟಲೆ ಮುಂದೆ ನುಗ್ಗಿ ಎಲ್ಲವನ್ನೂ ಸರ್ವನಾಶ ಮಾಡುತ್ತದೆ. ಈಗ ನಾನು ಸುನಾಮಿಯ ಉದಾಹರಣೆಯನ್ನು ಏಕೆ ತೆಗೆದುಕೊಳ್ಳಬೇಕಾಯಿತೆಂದರೆ, ತಿಂಗಳುಗಟ್ಟಲೆ ಪೆಟ್ರೋಲಿಯಂ ಬೆಲೆಯನ್ನು ಹೆಚ್ಚಿಸದೆ ಕಷ್ಟಪಟ್ಟು ತಡೆದುಕೊಂಡಿದ್ದ ಕೇಂದ್ರ ಮೊದಲ ಬಾರಿಗೆ ಹೆಚ್ಚಿಸಿದ್ದು ಕೇವಲ 80 ಪೈಸೆಯಾದರೆ, ಅದರ ಮರುದಿನ, ಅದರ ಮರುದಿನ ಹೀಗೆ ಸತತ 8 ದಿನಗಳ ಕಾಲ ಅಷ್ಟಷ್ಟೇ ಪೈಸೆಯಷ್ಟು ಹೆಚ್ಚಿಸುತ್ತ, ಇದೀಗ ಒಂದೇ ವಾರದಲ್ಲಿ ಈ ಹೆಚ್ಚಳ 5.60 ರೂಪಾಯಿಗೆ ಬಂದು ನಿಂತಿದೆ. ಅಲ್ಲಿಗೆ 20 ಅಥವಾ 25 ರೂಪಾಯಿಗಳಷ್ಟು ದರವನ್ನು ಹೆಚ್ಚಿಸಲು ಸರ್ಕಾರಕ್ಕೆ ಇನ್ನು ಮೂರ್ನಾಲ್ಕು ವಾರಗಳಷ್ಟು ಕಾಲ ಸಾಕು. ದಿನಕ್ಕೆ 80 ಪೈಸೆಯಂತೆ 30 ದಿನ ಹೆಚ್ಚಿಸಿದರೆ 24 ರೂಪಾಯಿಗಳ ಹೆಚ್ಚಳವಾಯಿತಲ್ಲ!

ಸರ್ಕಾರದ ಈ ಸಂಚು ಜನರಿಗೆ ಅರ್ಥವಾಗುವುದರೊಳಗೆ ಕೇಂದ್ರ ತನಗೆಷ್ಟು ಬೇಕೋ ಅಷ್ಟು ದರವನ್ನು ಹೆಚ್ಚಿಸಿ ಆಗಿರುತ್ತದೆ. ಜನಸಾಮಾನ್ಯರಿಗಂತೂ ಈ ‘ಚಾಣಾಕ್ಯ’ ನೀತಿ ಅರ್ಥವಾಗುವುದು ಕಷ್ಟವೆ. ಏಕೆಂದರೆ ಚಾಣಾಕ್ಯ ವಿರೋಧಿಗಳನ್ನು ಕೊಲ್ಲಲು ವಿಷಕನ್ಯೆಯರನ್ನು ಬಳಸುತ್ತಿದ್ದನಂತೆ. ವಿಷಕನ್ಯೆಯರೆಂದರೆ ಆ ಕನ್ಯೆಯರಿಗೆ ದಿನವೂ ಅತ್ಯಲ್ಪ ಪ್ರಮಾಣದಲ್ಲಿ ವಿಷವುಣಿಸುವುದು. ಇದರಿಂದ ಆ ಕನ್ಯೆಯರು ಸಾಯದೆ, ಕೆಲವೇ ವರ್ಷಗಳಲ್ಲಿ ಅವರ ಮೈಯೆಲ್ಲ ವಿಷಮಯವಾಗಿಬಿಡುತ್ತಿತ್ತು. ಇಂಥ ಕನ್ಯೆಯರನ್ನು ಚಾಣಾಕ್ಯ ತನ್ನ ಶುತ್ರುಗಳ ಬಳಿಗೆ ಕಳುಹಿಸುತ್ತಿದ್ದ. ಇಂಥ ವಿಷಕನ್ಯೆಯನ್ನು ಮೋಹಿಸಿದ ವ್ಯಕ್ತಿ ಅವಳೊಂದಿಗೆ ಒಂದು ರಾತ್ರಿ ಕಳೆಯುವುದರಲ್ಲೇ ಅವಳಲ್ಲಿದ್ದ ವಿಷದಿಂದಾಗಿ ಸಾವಿಗೀಡಾಗುತ್ತಿದ್ದ. ಈಗ ನಮ್ಮ ಕೇಂದ್ರ ಸರ್ಕಾರವೂ ಇದೇ ಚಾಣಾಕ್ಯ ನೀತಿಯನ್ನು ಅನುಸರಿಸುತ್ತಿದೆ. ದೇಶದ 140 ಕೋಟಿ ಜನರಿಗೂ ನಿಧಾನವಾಗಿ ಬೆಲೆಯೇರಿಕೆಯೆಂಬ ವಿಷವುಣಿಸಿ ಅವರನ್ನು ವಿಷಮಾನವರನ್ನಾಗಿಸುತ್ತಿದೆ.

ದಶಕಗಳ ಹಿಂದೆ ತೈಲದ ಹಿಡಿತ ಸರ್ಕಾರದ ಬಳಿಯೇ ಇತ್ತು. ನಂತರ ಅದನ್ನು ಸರ್ಕಾರ ತೈಲಕಂಪನಿಗಳಿಗೆ ಹಸ್ತಾಂತರಿಸಿ ಬೆಲೆಏರಿಕೆ ಇಳಿಕೆ ಎರಡೂ ಅವುಗಳಿಗೆ ಬಿಟ್ಟುಕೊಟ್ಟಿತು. ಪೆಟ್ರೋಲ್ ಬೆಲೆಯೇರಿಕೆಯಲ್ಲಿ ತನ್ನ ಕೈವಾಡವೇನೂ ಇಲ್ಲ ಎಂದು ಸಾರಿತು. ಹೀಗೆ ಜನರನ್ನು ನಂಬಿಸಿದ ಸರ್ಕಾರ ಪೆಟ್ರೋಲಿಯಂ ವಿಷಯದಲ್ಲಿ ತನಗೆ ಕೆಟ್ಟ ಹೆಸರು ಬಾರದಂತೆ ತೈಲದ ಮೇಲೆ ಪರೋಕ್ಷ ಹಿಡಿತ ಸಾಧಿಸಿ ಜನರನ್ನು ಮೂರ್ಖರನ್ನಾಗಿಸಿತು. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲದ ಬೆಲೆ ಹೆಚ್ಚಾದರೆ, ಜನರಿಗೆ ಕೊಡುವ ಪೆಟ್ರೋಲ್ ಬೆಲೆ ಹೆಚ್ಚಿಸುವಂತೆ, ಕಡಿಮೆಯಾದರೆ ಅದಕ್ಕನುಗುಣವಾಗಿ ತೈಲ ಕಂಪನಿಗಳು ಬೆಲೆ ಕಡಿಮೆ ಮಾಡಬೇಕು. ಆದರೆ ಇಷ್ಟು ವರ್ಷಗಳಲ್ಲಿ ತೈಲ ಕಂಪನಿ ಹಾಗೂ ಸರ್ಕಾರದ ಆಟ ಗಮನಿಸಿದರೆ ನಮಗೆ ಕಂಡುಬರುವುದೇನು?

2014ಕ್ಕಿಂತ ಮುಂಚೆ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿ ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಪೆಟ್ರೋಲ್ ಡೀಸೆಲ್ ದರವನ್ನು 60ರಿಂದ 70ರಷ್ಟನ್ನು 10 ವರ್ಷಗಳ ಅವಧಿಯಲ್ಲಿ ಹೆಚ್ಚಿಸಿದಾಗ ಮಾಡಿದಷ್ಟು ಟೀಕೆಯನ್ನು ಬೇರಾರೂ, ಎಲ್ಲೂ ಮಾಡಿರಲಿಕ್ಕಿಲ್ಲ. ಮೋದಿ ಆಗ ಪೆಟ್ರೋಲ್ ದರ ಹೆಚ್ಚಳದ ಬಗ್ಗೆ ಮಾಡಿದ್ದ ಭಾಷಣಗಳು ಇಂದಿಗೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವುದುಂಟು. ಅವರು ಅಂದು ಮಾಡಿದ ಭಾಷಣವನ್ನು ಕೇಳಿ, ಇಂದಿನ ಸ್ಥಿತಿಯನ್ನು ನೋಡಿದರೆ ಮೋದಿ ತಮಗೆ ತಾವೇ ಬೊಯ್ಯುತ್ತಿದ್ದಾರೆಯೇ ಎಂದು ಅನಿಸದಿರುವುದಿಲ್ಲ! ಇರಲಿ, ತೈಲ ಕಂಪನಿಗಳ, ಕೇಂದ್ರದ ಬೆಲೆಯೇರಿಕೆಯ ಆಟದ ಬಗ್ಗೆ ಹೇಳುವುದಾದರೆ, ಎರಡು ವರ್ಷಗಳ ಹಿಂದೆ ಕೊರೋನ ಇಡೀ ಜಗತ್ತನ್ನು ತಲ್ಲಣಗೊಳಿಸಿದ್ದ ಸಂದರ್ಭದಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ತೈಲಬೆಲೆ ಪಾತಾಳಕ್ಕೆ ಕುಸಿದುಬಿಟ್ಟಿತ್ತು. ಒಂದು ಬ್ಯಾರೆಲ್ ತೈಲದ ಬೆಲೆ ಸೊನ್ನೆ ಎಂಬಷ್ಟು ಧರಾಶಾಹಿಯಾಗಿತ್ತು. ಆದರೆ ಆಗಲೂ ಭಾರತದಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಯಾವುದೇ ಕಡಿತವನ್ನು ಮಾಡಲಿಲ್ಲ. ಜನರು ಆಗಲೂ 80-90ರ ಆಸುಪಾಸಿನಲ್ಲಿಯೇ ಪೆಟ್ರೋಲ್ ಡೀಸೆಲ್ ಖರೀದಿಸಿದ್ದರು.

ಇದೀಗ ಕೊರೋನ ನಂತರ ರಷ್ಯಾ ಉಕ್ರೇನ್ ಯುದ್ಧ ಶುರುವಾಗಿ ಪ್ರಪಂಚದಲ್ಲಿ ತೈಲ ಬಿಕ್ಕಟ್ಟು ತಲೆದೋರಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲಬೆಲೆ ಬ್ಯಾರಲ್​ಗೆ 140 ಡಾಲರ್​ಗಳಷ್ಟು ಗರಿಷ್ಟಬೆಲೆ ತಲುಪಿದೆ. ಹೀಗಾಗಿ ಭಾರತದಲ್ಲೂ ತೈಲಬೆಲೆ ಹೆಚ್ಚುವುದು ಸಾಮಾನ್ಯ ವಿಷಯ ಎಂದು ಕೇಂದ್ರ ಸರ್ಕಾರ ಹಾಗೂ ಅದರ ಪರ ವಹಿಸಿಕೊಳ್ಳುವವರು ತೈಲಬೆಲೆಯೇರಿಕೆಯನ್ನು ಸಮರ್ಥಿಸಿಕೊಳ್ಳು​ತ್ತಾರೆ. ಆದರೆ ಇದೇ ಸಮಯದಲ್ಲಿ ಅವರು ರಷ್ಯಾ ಕೊಟ್ಟ ಆಫರ್​ನಡಿಯಲ್ಲಿ ತೈಲವನ್ನು ಅತ್ಯಂತ ಕಡಿಮೆ ದರದಲ್ಲಿ, ಅಂತಾರಾಷ್ಟ್ರೀಯ ವಿರೋಧದ ನಡುವೆಯೂ ಕೊಂಡುಕೊಳ್ಳುತ್ತಿರುವುದನ್ನು ಮರೆಸುತ್ತಾರೆ! ಹಾಗಾದರೆ ರಷ್ಯಾದಿಂದ ಕಡಿಮೆ ದರದಲ್ಲಿ ತೈಲ ಆಮದಾಗುತ್ತಿರುವುದರಿಂದ ಜನರಿಗೆ ಬೆಲೆ ಹೆಚ್ಚಿಸದೆ ತೈಲ ಕೊಡಲು ಸರ್ಕಾರಕ್ಕೆ ಏಕೆ ಸಾಧ್ಯವಾಗುತ್ತಿಲ್ಲ?

ಇದರ ನಡುವೆ ಮತ್ತೊಂದು ಮುಖ್ಯ ಪ್ರಶ್ನೆ ಹಾಗೆಯೇ ಉಳಿದುಬಿಡುತ್ತದೆ! ತೈಲ ಕಂಪನಿಗಳಿಗೆ ತೈಲದ ಎಲ್ಲಾ ಅಧಿಕಾರ ಹಸ್ತಾಂತರಿಸಿದ ನಂತರ ಸರ್ಕಾರಕ್ಕೆ ಅದರ ಮೇಲೆ ಔಪಚಾರಿಕವಾಗಿ ಯಾವುದೇ ಹಕ್ಕು ಉಳಿದಿಲ್ಲ. ಹಾಗಾದರೆ ಚುನಾವಣೆಯ ಮುನ್ನ ಮೂರ್ನಾಲ್ಕು ತಿಂಗಳು ಯುದ್ಧದ ಬಿಕ್ಕಟ್ಟಿನ ನಡುವೆಯೂ ಒಂದು ಪೈಸೆಯಷ್ಟು ಬೆಲೆಯನ್ನು ತೈಲಕಂಪನಿಗಳು ಹೆಚ್ಚಿಸದಿರಲು ಕಾರಣವೇನು? ಮೂರು ತಿಂಗಳುಗಳಷ್ಟು ಕಾಲ ನಷ್ಟವನ್ನು ತಲೆಯ ಮೇಲೆ ಹಾಕಿಕೊಂಡು ಕಂಪನಿ ನಡೆಸಲು ಕಾರಣವೇನು? ಇದರರ್ಥ ಎಲ್ಲವೂ ಕೇಂದ್ರ ಸರ್ಕಾರದ ಮರ್ಜಿಯಂತೆಯೇ ನಡೆಯುವುದು. ಇಲ್ಲಿ ತೈಲಕಂಪನಿಗಳ ಅಧಿಕಾರ ಹೆಸರಿಗೆ ಮಾತ್ರ. ಚುನಾವಣಾ ಆಯೋಗಕ್ಕಿರುವ ಅಧಿಕಾರದಂತೆ! ಅದನ್ನು ಇನ್ನೊಮ್ಮೆ ವಿಶ್ಲೇಷಿಸೋಣ. ಈಗ ತೈಲಬೆಲೆಗಳ ವಿಷಯವನ್ನು ಮಾತ್ರ ನೋಡುವುದಾದರೆ ಕೇಂದ್ರದ ತೈಲಬೆಲೆ ಏರಿಕೆಯ ಲೆಕ್ಕಾಚಾರವನ್ನು ಯಾವುದೇ ದೃಷ್ಟಿಕೋನದಿಂದ ನೋಡಿದರೂ ಅದನ್ನು ಸಮರ್ಥಿಸಿಕೊಳ್ಳಲು ಸಾಧ್ಯವೇ ಇಲ್ಲ.

ಸಂಪಾದಕೀಯ, ಹಿರಿಯ ಉಪಸಂಪಾದಕ ಓಂಪ್ರಕಾಶ್ ನಾಯಕ್


ಹೆಚ್ಚು ಓದಿದ ಸುದ್ದಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ
Published 22 ಡಿಸೆಂಬರ್ 2023, 23:16

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ
Published 22 ಡಿಸೆಂಬರ್ 2023, 23:14

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್
Published 31 ಮಾರ್ಚ್ 2023, 17:40

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ
Published 16 ಮಾರ್ಚ್ 2023, 14:45

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ
Published 16 ಮಾರ್ಚ್ 2023, 14:45

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ
Published 16 ಮಾರ್ಚ್ 2023, 14:45

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!
Published 16 ಮಾರ್ಚ್ 2023, 14:45

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್
Published 16 ಮಾರ್ಚ್ 2023, 14:45

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ
Published 16 ಮಾರ್ಚ್ 2023, 14:45

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!
Published 16 ಮಾರ್ಚ್ 2023, 14:45

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ
Published 16 ಮಾರ್ಚ್ 2023, 14:45

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ
Published 16 ಮಾರ್ಚ್ 2023, 14:45