POLITICS:
ವಿಜಯಪುರ: ನಾನು ಎಲ್ಲಿಯೂ ಸಚಿವ ಸ್ಥಾನ ಇದೇ ಕೊಡಿ, ಅದೇ ಕೊಡಿ ಅಂತಾ ಕೇಳಿಲ್ಲ. ಸಂಪುಟ ವಿಸ್ತರಣೆ ಆದರೆ ಯಾವುದಾದರೂ ಖಾತೆ ಕೊಡಲಿ. ಒಂದು ವೇಳೆ ಗೃಹ ಖಾತೆ ಕೊಟ್ರೇ, ಹಿಜಾಬ್, ಕೇಸರಿ ಶಾಲು ವಿವಾದಕ್ಕೆ ಅಂತ್ಯ ಹಾಡುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರವಿದೆ. ಇಲ್ಲಿ ದೇಶಭಕ್ತಿಗೆ ಮಾತ್ರವೇ ಅವಕಾಶ. ಶಾಲಾ-ಕಾಲೇಜುಗಳಲ್ಲಿ ಧಾರ್ಮಿಕ ಸಂಪ್ರದಾಯಕ್ಕೆ ಅವಕಾಶವಿಲ್ಲ. ಯುವ ಜನರು ಜಾಗೃತರಾಗಬೇಕು. ದೇಶಭಕ್ತರಾಗಬೇಕು. ಎಲ್ಲಾ ಕಾಲೇಜಿನಲ್ಲಿ ವಸ್ತ್ರ ಸಂಹಿತೆ ಪಾಲಿಸಬೇಕು ಎಂದು ತಿಳಿಸಿದರು.
ನಾನು ಯಾವುದೇ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿಲ್ಲ. ಸಿಎಂ ಬಳಿ ಏಕಾಂಕಿಯಾಗೇ ಅರ್ಧ ಗಂಟೆ ಚರ್ಚಿಸಿದ್ದೇನೆ. ನಗರಾಭಿವೃದ್ಧಿ ಖಾತೆ ಅಥವಾ ಯಾವುದೇ ಖಾತೆ ಕೊಟ್ಟರು ಸರಿಯೇ ಎಂದರು.