POLITICS:
ಯಾದಗಿರಿ: ಕೇಂದ್ರ ಸಚಿವ ಭಗವಂತ ಖೂಬಾ ಅವರ ನೇತೃತ್ವದಲ್ಲಿ ನಡೆದ ಜನಶಿರ್ವಾದ ಯಾತ್ರೆಯಲ್ಲಿ ನಾಡ ಬಂದೂಕಿನಿಂದ ಗುಂಡು ಹಾರಿಸಿ ಕೇಂದ್ರ ಸಚಿವರಿಗೆ ಸ್ವಾಗತ ಕೊರಲಾಗಿದೆ. ಕಲಬುರ್ಗಿ ಜಿಲ್ಲೆಯಿಂದ ಯಾದಗಿರಿ ತೆರಳಿ ಜನಶೀರ್ವಾದ ಯಾತ್ರೆಯನ್ನು ಯಾದಗಿರಿ ತಾಲೂಕಿನ ಯರಗೋಳ್ ಬಳಿ ಮುಖಂಡರು ಸ್ವಾಗತ ಮಾಡಿಕೊಂಡರು.
ಈ ವೇಳೆ ಮೂರು ನಾಡ ಬಂದುಕುಗಳಿಂದ ಗಾಳಿಯಲ್ಲಿ ಗುಂಡು ಹಾರಿಸಿ ಸ್ವಾಗತ ಮಾಡಲಾಯಿತು. ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಅವರಿಂದ ನಾಡ ಬಂದುಕು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಪೊಲೀಸರ ಎದುರೆ ಗುಂಡು ಹಾರಿಸಿದರೂ ಪೊಲೀಸರು ಕೈಕಟ್ಟಿ ಕುಳಿತಿದ್ದು ವಿಪರ್ಯಾಸವಾಗಿದೆ.
ಇದನ್ನೂ ಓದಿ : ಜನರ ಜೀವ ಉಳಿಸಿವುದಕ್ಕಾಗಿ ಸರ್ಕಾರ ಪಾಲಿಕೆ ಚುನಾವಣೆ ಮುಂದೂಡಬೇಕು: ಎಸ್.ಆರ್.ಹಿರೇಮಠ ಆಗ್ರಹ
ಸಾರ್ವಜನಿಕವಾಗಿ ಗುಂಡು ಹಾರಿಸಿ ನಾಯಕರಿಗೆ ಸ್ವಾಗತ ಕೊರುವದು ಎಷ್ಟು ಸೂಕ್ತ ಎಂಬ ಜಿಜ್ಞಾಸೆ ಸಾರ್ವಜನಿಕರಲ್ಲಿ ಮೂಡಿದೆ.