POLITICS:
ಮಂಗಳೂರು: ಹಿರಿಯ ಧುರೀಣ ಸಿಎಂ ಇಬ್ರಾಹಿಂ ಕಾಂಗ್ರೆಸ್ ಸಂಬಂಧ ಕಡಿದುಕೊಳ್ಳುವ ವಿಚಾರಕ್ಕೂ ತಮಗೆ ವಿಧಾನಸಭೆ ಕಾಂಗ್ರೆಸ್ ಉಪನಾಯಕನ ಸ್ಥಾನ ದೊರೆತಿರುವುದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಶಾಸಕ ಯು.ಟಿ.ಖಾದರ್ ಸ್ಪಷ್ಟಪಡಿಸಿದ್ದಾರೆ. ಇಬ್ರಾಹಿಂ ಅವರ ವಿಚಾರವೇ ಬೇರೆ, ನನ್ನ ವಿಚಾರವೇ ಬೇರೆ, ಪರಸ್ಪರ ಇವೆರಡಕ್ಕೂ ಯಾವುದೇ ಸಂಬಂಧ ಇಲ್ಲ ಎಂದರು. ಇಬ್ರಾಹಿಂ ಅವರು ಕಾಂಗ್ರೆಸ್ ಪಕ್ಷದಲ್ಲೇ ಇರುತ್ತಾರೆ. ಅವರು ಪಕ್ಷ ಬಿಡುವುದಿಲ್ಲ. ಅವರೊಂದಿಗೆ ಈಗಾಗಲೇ ನಾನು ಮಾತನಾಡಿದ್ದೇನೆ. ಪಕ್ಷದ ಹಿರಿಯ ನಾಯಕರು ಅವರೊಂದಿಗೆ ಮಾತನಾಡುತ್ತಾರೆ ಎಂದರು.
ಹುಲಿಯೂ ಅಲ್ಲ, ಕುರಿಯೂ ಅಲ್ಲ
ಅಲಿಂಗ, ಅವೋ ಎಲ್ಲಾ ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳೇ ಎಂದು ಖಾದರ್, ಇಬ್ರಾಹಿಂ ಅವರು ಕಾಂಗ್ರೆಸ್ ಪಕ್ಷದಲ್ಲೆ ಇದ್ದಾರೆ ಮತ್ತು ಅವರು ಪಕ್ಷದ ವಿಧಾನಪರಿಷತ್ ಸದಸ್ಯ ಎಂದರು. ತಮಗೆ ಕಾಂಗ್ರೆಸ್ ಉಪನಾಯಕನ ಸ್ಥಾನ ದೊರಕಿಸಿರುವುದಕ್ಕೆ ಹಿರಿಯ ಶಾಸಕರಾದ ತನ್ವೀರ್ ಸೇಟ್, ಜಮೀರ್ ಅಹಮದ್ ಯಾರಿಗೂ ಅಸಮಾಧಾನವಾಗಿಲ್ಲ. ಎಲ್ಲರೂ ದೂರವಾಣಿ ಮೂಲಕ ನನ್ನೊಂದಿಗೆ ಮಾತನಾಡಿದ್ದಾರೆ ಎಂದರು.