POLITICS:
ನವದೆಹಲಿ: ಭಾನುವಾರ ನಿಧನರಾದ ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರ ಗೌರವಾರ್ಥ ರಾಜ್ಯ ಸಭೆಯನ್ನು ಒಂದು ಗಂಟೆ ಮುಂದೂಡಲಾಯಿತು. ಬೆಳಗ್ಗೆ ಸದನ ಸೇರುತ್ತಿದ್ದಂತೆ ಮೌನಾಚರಣೆ ಮಾಡುವ ಮೂಲಕ ಲತಾ ಮಂಗೇಶ್ಕರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಂತಾಪ ಸೂಚಿಸಿ ಮಾತನಾಡಿದ ಸಭಾಪತಿ ಎಂ.ವೆಂಕಯ್ಯ ನಾಯ್ಡು, ದೇಶ ಒಬ್ಬ ಪ್ರಸಿದ್ದಿ ಗಾಯಕಿಯನ್ನು ಕಳೆದುಕೊಂಡಿದೆ ಮತ್ತು ಅವರ ನಿಧನವು ಸಂಗೀತ ಜಗತ್ತಿನಲ್ಲಿ ಸರಿಪಡಿಸಲಾಗದ ಶೂನ್ಯ ಸೃಷ್ಟಿಸಿದೆ. ಭಾರತೀಯ ಸಂಗೀತ ಮತ್ತು ಚಲನಚಿತ್ರೋದ್ಯಮ ಕ್ಷೇತ್ರದಲ್ಲಿ ಉನ್ನತ ವ್ಯಕ್ತಿತ್ವ ಅವರದಾಗಿತ್ತು. ಲತಾ ಮಂಗೇಶ್ಕರ್ ಅವರ ಗಾಯನ ಕೌಶಲ್ಯ ನಮ್ಮ ದೇಶದಂತೆಯೇ ವೈವಿಧ್ಯಮಯ ಎಂದರು.