POLITICS:
ಹಾಸನ: ಕಾರ್ಯಕರ್ತರು ಬಡಿದಾಡಿ ಪಕ್ಷ ಕಟ್ಟುತ್ತೇವೆ, ನಾಯಕರು ಅಡ್ಜಸ್ಟ್ಮೆಂಟ್ ರಾಜಕಾರಣ ಮಾಡುತ್ತಾರೆ ಎಂದು ಪಕ್ಷದ ನಾಯಕರ ವಿರುದ್ಧವೇ ಹಾಸನ ಶಾಸಕ ಪ್ರೀತಂ ಗೌಡ ಹರಿಹಾಯ್ದಿದ್ದಾರೆ.
ಸಿಎಂ ಬೊಮ್ಮಾಯಿ ಅವರು ದೇವೇಗೌಡರ ಮನೆಗೆ ಹೋದದ್ದಕ್ಕೆ ನೇರವಾಗಿ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಸಿಎಂ ಆದ ಕೂಡಲೇ ಎಲ್ಲರೂ ಸ್ವಾಮೀಜಿಗಳನ್ನು ಭೇಟಿಯಾಗಿ ಆಶೀರ್ವಾದ ಪಡೆಯುತ್ತಾರೆ. ಆದರೆ ಬೊಮ್ಮಾಯಿಯವರು ದೇವೇಗೌಡರ ಮನೆಗೆ ಹೋಗುತ್ತಾರೆ ಎಂದು ಕಿಡಿ ಕಾರಿದ್ದಾರೆ.
ನಾವು ಕಾರ್ಯಕ್ರತರು ಬಡಿದಾಡಿ ಪಕ್ಷ ಕಟ್ಟುತ್ತೇವೆ. ಯಾವ ಜೆಡಿಎಸ್ ನಾಯಕರ ಮನೆಗೂ ಹೋಗಿ ಊಟ ಮಾಡುವುದಿಲ್ಲ. ಅಡ್ಜಸ್ಟ್ಮೆಂಟ್ ರಾಜಕಾರಣ ಮಾಡುವುದಿಲ್ಲ ಎಂದು ಅವರು ಹೇಳಿದರು.
ತಮಗೆ ಮಂತ್ರಿ ಸ್ಥಾನ ಸಿಗದ ಬಗ್ಗೆ ಅಸಮಾಧಾನ ಹೊಂದಿರುವ ಅವರು, ಸಿಎಂ ಮೇಲಿನ ತಮ್ಮ ಅsಮಾಧಾನವನ್ನು ಹೀಗೆ ವ್ಯಕ್ತಪಡಿಸಿರುವಂತಿದೆ. ನನಗೆ ಸಚಿವ ಸ್ತಾನ ಸಿಗುವುದೆಂಬ ನಿರೀಕ್ಷೆ ಇತ್ತು. ಆದರೆ ಯಾಕೆ ಸಿಕ್ಕಿಲ್ಲ ಎಂಬುದನ್ನು ಪಕ್ಷದ ನಾಯಕರೇ ಹೇಳಬೇಕು ಎಂದಿದ್ದಾರೆ.
ಒಂದು ದಿನವೂ ಹೋಗಿ ನನ್ನನ್ನು ಮಂತ್ರಿ ಮಾಡಿ ಎಂದಿಲ್ಲ. ನನಗೆ ಮಂತ್ರಿ ಸ್ಥಾನ ಕೊಟ್ಟಿಲ್ಲ ಎಂಬುದಕ್ಕಿಂತ ನಾನು ಹೋಗಿ ಮಂತ್ರಿ ಸ್ಥಾನ ಕೇಳಿಲ್ಲ ಎಂಬುದು ಮುಖ್ಯ ಎಂದೂ ಅವರು ವ್ಯಂಗ್ಯವಾಡಿದ್ದಾರೆ.