POLITICS:
ನವದೆಹಲಿ : ರಫೇಲ್ ಯುದ್ದ ವಿಮಾನಗಳ ಖರೀದಿಯಲ್ಲಿ ನಡೆದಿದೆ ಎನ್ನಲಾಗುತ್ತಿರುವ ಭ್ರಷ್ಟಾಚಾರದ ವಿಷಯ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ರಫೇಲ್ ಹಗರಣವನ್ನು ಮುಚ್ಚಿ ಹಾಕಲು ಮೋದಿ ಸರ್ಕಾರದ ಸತತ ಪ್ರಯತ್ನಗಳ ನಂತರವು ಹಗರಣ ಹೆಡೆ ಎತ್ತಿ ನಿಂತಿದೆ. ಶತಕೋಟಿ ಡಾಲರ್‌ಗಳಲ್ಲಿ ನಡೆದಿರುವ ರಫೇಲ್ ಹಗರಣ ಬಗ್ಗೆ ಫ್ರಾನ್ಸ್ ನ ಸಾರ್ವಜನಿಕ ಸೇವೆಗಳು ಮತ್ತು ಆರ್ಥಿಕ ಅಪರಾಧ ಶಾಖೆ (ಪಿಎನ್ಎಫ್) ಈ ಒಪ್ಪಂದದ ಬಗ್ಗೆ ಭ್ರಷ್ಟಾಚಾರ ಆರೋಪವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಲು ಆದೇಶಿಸಿದೆ. ಇದಕ್ಕಾಗಿ, ನ್ಯಾಯಾಧೀಶರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.
ಪ್ರಾನ್ಸ್ ನಲ್ಲಿ ಸೇವೆ ಸಲ್ಲಿಸುತ್ತಿರುವ ಸರ್ಕಾರಿಯೇತರ ಸಂಸ್ಥೆ ಶೆರಪ (Sherpa) ಈ ಬಗ್ಗೆ 2018 ರಲ್ಲಿ ರಫೆಲ್ ಖರೀದಿಯಲ್ಲಿ ದೊಡ್ಡ ಮಟ್ಟದ ಹಗರಣ ನಡೆದಿದೆ ಎಂದು ಆರೋಪಿಸಿ ಮೊಕದ್ದಮೆಯನ್ನು ಹೂಡಿತ್ತು. ಇದರಲ್ಲಿ ರಫೇಲ್ ಒಪ್ಪಂದಕ್ಕೆ ಸಹಿ ಹಾಕಿದ ಪ್ರಾನ್ಸ್ ನ ಮಾಜಿ ಅಧ್ಯಕ್ಷ ಪ್ರಾನ್ಸ್ ವಾ ಓಲಾಂಡ್ ಮತ್ತು ಅಂದಿನ ವಿತ್ತಮಂತ್ರಿ ಮತ್ತು ಈಗಿನ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರೊ ಅಂದಿನ ರಕ್ಷಣಾ ಮತ್ತು ವಿದೇಶಾಂಗ ಮಂತ್ರಿ ಜೀನ್ ಯವೇಶ್ ಲೇಡ್ರಿಯಾನ್ ಇವರುಗಳ ಸುತ್ತ ಈ ಅರಬ್ ಮೊತ್ತದ ದೊಡ್ಡ ಹಗರಣ ಸುತ್ತಿಕೊಂಡಿದೆ.
ಪ್ರಾನ್ಸ್ ನ ಕಂಪನಿ ಡಾಸೋ ಭಾರತದಲ್ಲಿನ ಮಧ್ಯವರ್ತಿಗಳಿಗೆ ಬಹಳಷ್ಟು ಹಣವನ್ನು ನೀಡಿತ್ತು, ಎಂದು ಫ್ರೆಂಚ್ ತನಿಖಾ ಜಾಲತಾಣ ಮೀಡಿಯಾ ಪಾರ್ಟ್ ವರದಿ ಮಾಡಿತ್ತು ಮತ್ತು ರಫೇಲ್ ಖರೀದಿಯಲ್ಲಿ ಹಗರಣ ನಡೆದಿರುವ ಬಗ್ಗೆಯೂ ಹಲವಾರು ವರದಿಗಳನ್ನು ಮಾಡಿತ್ತು.
2015 ರ ಮಾರ್ಚ್ 26 ರಂದು ಪ್ರಾನ್ಸ್ ನ ಕಂಪನಿ ಡಾಸೋ ಮತ್ತು ಭಾರತದ ರಿಲಯನ್ಸ್ ಕಂಪನಿಗಳು ಮಾತುಕತೆ ನಡೆಸಿದ ಎರಡು ವಾರಗಳ ನಂತರ ಭಾರತದ ಪ್ರಧಾನಿ ನರೇಂದ್ರ ಮೋದಿ ಪ್ರಾನ್ಸ್ ಗೆ ಭೇಟಿ ನೀಡಿ ಅಲ್ಲಿನ ಆಗಿನ ಅಧ್ಯಕ್ಷ ಪ್ರಾನ್ಸ್ ವಾ ಓಲಾಂಡ್ ಅವರೊಂದಿಗೆ ಈ ಬಗ್ಗೆ ಮಾತುಕತೆ ನಡೆಸಿದ್ದರು.
ಈ ಬೆಳವಣಿಗೆಯ ನಂತರ ಯಾವುದೇ ಕೆಲಸ ಕಾರ್ಯವಿಲ್ಲದ ಅನಿಲ್ ಅಂಬಾನಿಯ ಕಂಪನಿಯಲ್ಲಿ ಪ್ರಾನ್ಸ್ ನ ಡಾಸೋ ಕಂಪನಿಯು ಪ್ರಾರಂಭಿಕ ಮೊತ್ತ 280 ಕೋಟಿ ಹೂಡಿಕೆ ಮಾಡಿತ್ತು. ಇದೇ ಸಂದರ್ಭದಲ್ಲಿ ಅಗಸ್ತ್ಯ ವೆಸ್ಟ್ ಲ್ಯಾಂಡ್ ಹಗರಣದಲ್ಲಿ ಭಾಗಿಯಾಗಿ ಜೈಲು ಸೇರಿದ್ದ ಸುಶೀಲ್ ಗುಪ್ತ ಈ ಹಗರಣದಲ್ಲಿ ಮಧ್ಯವರ್ತಿಗಳಲೊಬ್ಬನಾಗಿ ಬಹಳ ದೊಡ್ಡ ಮೊತ್ತವನ್ನು ಜೇಬಿಗಿಳಿಸಿದ್ದ.
ಪ್ರಾನ್ಸ್ ನಲ್ಲಿ ರಫೇಲ್ ಹಗರಣದ ಕುರಿತು ತನಿಖೆಗೆ ಅಲ್ಲಿನ ಸಾರ್ವಜನಿಕ ಸೇವೆಗಳು ಮತ್ತು ಆರ್ಥಿಕ ಅಪರಾಧ ಶಾಖೆ (ಪಿಎನ್ಎಫ್) ನ್ಯಾಯಾಧೀಶರನ್ನು ನೇಮಕ ಮಾಡಿದ ಹಿನ್ನೆಲೆಯಲ್ಲಿ ರಫೇಲ್ ಯುದ್ಧವಿಮಾನಗಳ ಖರೀದಿ ಕುರಿತು ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಯಿಂದ ತನಿಖೆಯನ್ನು ನಡೆಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. ಇದು ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ವಿರೋಧದ ವಿಷಯವಲ್ಲ, ಇದು ರಾಷ್ಟ್ರದ ರಕ್ಷಣೆ ಮತ್ತು ಭದ್ರತೆಯ ಬಗೆಗಿನ ರಕ್ಷಣಾ ಒಪ್ಪಂದದಲ್ಲಿ ನಡೆದ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಗಂಭೀರ ವಿಷಯವಾಗಿದೆ. ಇದು ರಾಷ್ಟ್ರೀಯ ಹಿತಾಸಕ್ತಿಯ ವಿಷಯವಾಗಿದೆ.
ಈ ವ್ಯವಹಾರದಲ್ಲಿ ನಡೆದಿರವ ಭ್ರಷ್ಟಾಚಾರದ ಕುರಿತು ಸತ್ಯವನ್ನು ಬಯಲಿಗೆಳೆಯಲು ಇದೊಂದೇ ಮಾರ್ಗವಾಗಿದೆ, ಎಂದಿರುವ ಕಾಂಗ್ರೆಸ್ ಪ್ರಧಾನಿ ನರೇಂದ್ರ ಮೋದಿ ಅವರು ಈ ಬಗ್ಗೆ ತನಿಖೆಗೆ ಆದೇಶಿಸಬೇಕು ಎಂದು ಹೇಳಿದೆ.
59,000 ಕೋ.ರೂಪಾಯಿಗಳ ವ್ಯವಹಾರದಲ್ಲಿ ಭ್ರಷ್ಟಾಚಾರ ಆರೋಪಗಳ ಕುರಿತು ಭಾರತದಲ್ಲಿ ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆದರೆ ರಾಹುಲ್ ಗಾಂಧಿ ಹೇಳಿದ ಗಡ್ಡದ ಕಳ್ಳನೂ ಸೇರಿದಂತೆ ರಿಲಯನ್ಸ್ ನ ಅನಿಲ್ ಅಂಬಾನಿ ಮತ್ತು ಉಳಿದಂತೆ ಇದಕ್ಕೆ ಸಹಕರಿಸಿದ ಇಡೀ ವ್ಯವಸ್ಥೆಯ ಪ್ರಮುಖ ಮುಖಗಳು ಜೈಲು ಸೇರಲಿದೆ.