POLITICS:
ನ್ಯಾಟೋದ ಪೂರ್ವದ ವಿಸ್ತರಣೆಯನ್ನು ಕೊನೆಗೊಳಿಸಲು ಬೇಡಿಕೆ ಇಟ್ಟಿದ್ದ ರಷ್ಯಾ ಇದೀಗ ಏಕಾಏಕಿ ಉಕ್ರೇನ್ ಮೇಲೆ ದಾಳಿ ಮಾಡಿರುವುದು ಇಡೀ ಜಗತ್ತನ್ನೆ ತಲ್ಲಣ ಗೊಳಿಸಿದೆ. ಉಕ್ರೇನ್ ಮೇಲೆ ರಷ್ಯಾ ಸಮರ ಸಾರಿರುವ ಹಿನ್ನೆಲೆಯಲ್ಲಿ ಉಕ್ರೇನ್ನಿಂದ ಅಂತರರಾಷ್ಟ್ರೀಯ ವಿಮಾನ ಯಾನ ಸ್ಥಗಿತಗೊಂಡಿದೆ. ಇದರಿಂದ ವಿದ್ಯಾಭ್ಯಾಸಕ್ಕೆ ತೆರಳಿದ್ದ ಸಾಕಷ್ಟು ವಿದ್ಯಾರ್ಥಿಗಳು ಉಕ್ರೇನ್ನಲ್ಲಿಯೇ ಸಿಲುಕಿಕೊಂಡಿದ್ದಾರೆ. ಭಾರತೀಯರು ಸೇರಿ ವಿಶ್ವದಲ್ಲೇ ಹೆಚ್ಚಿನ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪಡೆಯಲು ಉಕ್ರೇನ್ ಹಾಗೂ ರಷ್ಯಾಗೆ ತೆರಳುತ್ತಾರೆ. ಅಷ್ಟಕ್ಕೂ ಭಾರತದಲ್ಲಿಯೇ ಅತ್ಯುತ್ತಮ ಶಿಕ್ಷಣ ವ್ಯವಸ್ಥೆ ಇರುವಾಗ ರಷ್ಯಾಗೆ ಯಾಕೆ ಹೋಗುತ್ತಾರೆ ಅನ್ನೋ ಪ್ರಶ್ನೆಗೆ ಇಲ್ಲಿದೆ ಉತ್ತರ.
ಮೆಡಿಕಲ್ ಓದ್ಬೇಕು ಅನ್ನೊದು ಅದೆಷ್ಟೋ ಮಂದಿಯ ಕನಸು. ಉತ್ತಮ ಅಂಕ ಬಂದಿದ್ರು ದುಬಾರಿ ಫೀಸ್ ಕಟ್ಬೇಕು ಅನ್ನೋ ಕಾರಣಕ್ಕೆ ಸಾಕಷ್ಟು ಮಂದಿ ವೈದ್ಯಕೀಯ ಶಿಕ್ಷಣದ ಕನಸನ್ನೇ ಬಿಟ್ಟುಬಿಡ್ತಾರೆ. ಭಾರತದಲ್ಲಿ ಸರ್ಕಾರಿ ಕೋಟಾದಡಿ ಸೀಟು ಸಿಕ್ಕಿದ್ರೆ ಸುಲಭವಾಗಿ ಮೆಡಿಕಲ್ ಶಿಕ್ಷಣ ಪಡೆಯಬಹುದು. ಒಂದು ವೇಳೆ ಸಿಗದಿದ್ದರೆ ಖಾಸಗಿ ಕಾಲೇಜು ಕೇಳಿದಷ್ಟು ಹಣ ಕಟ್ಟಿ ಓದಬೇಕಾಗುತ್ತದೆ.
ಮೆಡಿಕಲ್ ಓದಬೇಕು ಎಂಬ ಆಸೆ ಇಟ್ಟುಕೊಂಡು ದುಭಾರಿ ಶುಲ್ಕ ಪಾವತಿಸಲು ಸಾಧ್ಯವಾಗದ ವಿದ್ಯಾರ್ಥಿಗಳು ಉಕ್ರೇನ್ ಹಾಗೂ ರಷ್ಯಾದತ್ತ ಮುಖ ಮಾಡುತ್ತಾರೆ. ಭಾರತಕ್ಕೆ ಹೋಲಿಸಿದರೆ ಉಕ್ರೇನ್ನಲ್ಲಿ ವೈದ್ಯಕೀಯ ಶಿಕ್ಷಣದ ಶುಲ್ಕ ಬಹಳ ಕಡಿಮೆ. ಭಾರತಕ್ಕೆ ಕಂಪೇರ್ ಮಾಡಿದ್ರೆ ಉಕ್ರೇನ್ನಲ್ಲಿ ಶೇ.60ರಿಂದ 70ರಷ್ಟು ಕಡಿಮೆ ಅಗ್ಗದಲ್ಲಿ ಶುಲ್ಕವಿರುತ್ತದೆ.
ಒಂದೇ ವೇಳೆ ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದುಕೊಂಡರೆ ಉಕ್ರೇನ್ನಲ್ಲಿ ಸೀಟ್ ಪಡೆಯುವುದು ತುಂಬಾ ಸುಲಭದ ಕೆಲಸ. ಜೊತೆಗೆ ಭಾರತಕ್ಕೆ ಹೋಲಿಸಿದರೆ ಉಕ್ರೇನ್ನಲ್ಲಿ ಜೀವನ ನಿರ್ವಹಣೆ ವೆಚ್ಚವೂ ಕಡಿಮೆ ಇರುತ್ತದೆ. ಇದರ ಜೊತೆಗೆ ಇಲ್ಲಿನ ವೈದ್ಯಕೀಯ ಕಾಲೇಜುಗಳು ವಿಶ್ವ ಆರೋಗ್ಯ ಸಂಸ್ಥೆ ಯುನೆಸ್ಕೋ ಹಾಗೂ ಯುರೋಪಿಯನ್ ದೇಶಗಳ ಮಾನ್ಯತೆ ಪಡೆದುಕೊಂಡಿವೆ. ಹೀಗಾಗಿ ಹೆಚ್ಚಿನ ವಿದ್ಯಾರ್ಥಿಗಳು ವೈದ್ಯಕೀಯ ವಿದ್ಯಾಭ್ಯಾಸಕ್ಕೆ ಉಕ್ರೇನ್ ಹಾಗೂ ರಷ್ಯಾಗೆ ತೆರಳುತ್ತಾರೆ.
ಸದ್ಯ ಉಕ್ರೇನ್ನಲ್ಲಿ 20 ಸಾವಿರ ಭಾರತೀಯ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು ಅವರನ್ನು ರಕ್ಷಿಸುವ ಎಲ್ಲಾ ಪ್ರಯತ್ನವನ್ನು ಭಾರತ ಮಾಡುತ್ತಿದೆ. ಸದ್ಯ ವಿದ್ಯಾರ್ಥಿಗಳು ಸದ್ಯ ಬಂಕರ್ನಲ್ಲಿ ಆಶ್ರಯ ಪಡೆದಿದ್ದು ಆದಷ್ಟು ಬೇಗ ಅವರನ್ನ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುವ ಮಾಹಿತಿ ಇದೆ.