POLITICS:
ವಿಜಯಪುರ: ರಾಜ್ಯಕ್ಕೆ ಹೊಸ ಸಿಎಂ ಆಗಲು ನನಗಿದ್ದ ಅವಕಾಶವನ್ನು ತಪ್ಪಿಸಿದ್ದು ಯಡಿಯೂರಪ್ಪ ಎಂದು ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಮಾಧ್ಯಮಗಳೊಡನೆ ಮಾತನಾಡಿದ ಯತ್ನಾಳ್, ಹೊಸ ಸಿಎಂ ಆಗಬೇಕಾದವರ ಪಟ್ಟಿಯಲ್ಲಿ ಯತ್ನಾಳ್ ಹೊರತುಪಟಿಸಿ ಇನ್ನಾರೂ ಇರಲಿಲ್ಲ. ನಿರಾಣಿ, ಜೋಶಿ, ಬೆಲ್ಲದ್ ಇದ್ದರು ಎಂಬುದೆಲ್ಲ ಬರೀ ಸುಳ್ಳು. ನಾನೇ ಸಿಎಂ ಆಗಬೇಕಿತ್ತು. ಯಡಿಯೂರಪ್ಪ ತಪ್ಪಿಸಿದರು ಎಂದು ಹೇಳಿದರು.
ನನ್ನನ್ನು ಸಿಎಂ ಮಾಡಿದರೆ ಮೂರೇ ತಿಂಗಳಲ್ಲಿ ಸರ್ಕಾರ ಉರುಳಿಸುತ್ತೇನೆ ಎಂದು ಬಿಎಸ್ವೈ ಅವರು ಧರ್ಮೆಂದ್ರ ಪ್ರಧಾನ್ ಎದುರು ಹೇಳಿದರು. ಈ ಹಿನ್ನೆಲೆಯಲ್ಲಿ ನನಗೆ ಅವಕಾಶ ತಪ್ಪಿತು ಎಂದು ಯತ್ನಾಳ್ ಹೇಳಿದರು.
ನಾನು ಸಿಎಂ ಆಗಿಬಿಟ್ಟರೆ ತಾವು ಮಾಡಿದ್ದ ಹಗರಣಗಳೆಲ್ಲ ಬಯಲಿಗೆ ಬರುತ್ತವೆ ಎಂಬ ಭಯ ಯಡಿಯೂರಪ್ಪನವರಿಗೆ ಇತ್ತು. ನಾನು ಪ್ರಾಮಾಣಿಕವಾಗಿರುವುದರಿಂದಲೆ ಅವರಿಗೆ ಭಯ ಮತ್ತು ನನ್ನ ಮೇಲೆ ಸಿಟ್ಟು ಎಂದು ಯತ್ನಾಳ್ ವ್ಯಂಗ್ಯವಾಡಿದರು.