ಈ ಕ್ಷಣ :

ರೈತರ ಪಾಲಿಗೆ ವರದಾನ; ಭೂಮಿಗೆ ಇದು ಅಮೃತಪಾನ: ಇದುವೇ ಜೀವಾಮೃತ

Published 16 ಮಾರ್ಚ್ 2023, 14:25 IST
Last Updated 6 ಮೇ 2023, 18:23 IST
ಸ್ನೇಹಿತನ ಕತ್ತು ಕೊಯ್ದು ರಕ್ತ ಕುಡಿದ ಕಿರಾತಕ! ಬೆಚ್ಚಿಬಿದ್ದ ಚಿಂತಾಮಣಿ

SPECIAL:

ನೀವು ಕೃಷಿಕರಾಗಿದ್ದು ಸಾವಯವ ಕೃಷಿಯ ಕಡೆಗೆ ಹೆಚ್ಚು ಆಸಕ್ತಿ ವಹಿಸಿದ್ದರೆ ಜೀವಾಮೃತದ ಬಗ್ಗೆ ಕೇಳಿಯೇ ಇರುತ್ತೀರಿ. ಜೀವಾಮೃತ ಯಾವುದೇ ಕೃಷಿ ನೆಲಕ್ಕೆ ಅಪೂರ್ವ ಮೌಲಿಕ ಗುಣಗಳನ್ನು ನೀಡುವ ಜೈವಿಕ ಸಂಪತ್ತು. ಈ ಜೀವಾಮೃತವನ್ನು ತಯಾರಿಸುವ ಬಗೆ ಹೇಗೆ? ಸಾವಯುವ ಕೃಷಿಗೆ ಬೇಡಿಕೆ ಹೆಚ್ಚುತ್ತಿರುವ ದಿನಗಳಲ್ಲಿ ನಾವು ಸಾವಯುವ ಕೃಷಿಯಲ್ಲಿ ಮುಖ್ಯ ಲಘು ಪೋಷಕಾಂಶವನ್ನೂ ಒದಗಿಸುವ ಜೀವಾಮೃತದ ಬಗ್ಗೆ ತಿಳಿದುಕೊಳ್ಳಲೇಬೇಕು. ಈ ಕುರಿತ ಮಾಹಿತಿ ಇಲ್ಲಿದೆ ನೋಡಿ

ಜೀವಮೃತ ತಯಾರಿಸಲು ನಮಗೆ ಬೇಕಾಗುವ ಸಾಮಗ್ರಿಗಳು:
ದೇಸಿ ಹಸುವಿನ ಸಗಣಿ 10 ಕೆಜಿ
ದೇಸಿ ಹಸುವಿನ ಗಂಜಲು 10 ಲೀಟರ್
ದ್ವಿದಳ ಧಾನ್ಯದ ಹಿಟ್ಟು 2 ಕೆಜಿ
ಬೆಲ್ಲ 2 ಕೆಜಿ
ಒಂದು ಹಿಡಿ ಶುದ್ಧ ಹಾಗೂ ಫಲವತ್ತಾದ ಮಣ್ಣು

ಜೀವಾಮೃತ ತಯಾರಿಕೆ ಪ್ರಕ್ರಿಯೆ:
ಜೀವಾಮೃತವನ್ನು ತಯಾರಿಸಲು ನಾವು ಒಂದು ಒಳ್ಳೆಯ ನೆರಳಿನ ಜಾಗವನ್ನು ಹುಡುಕಬೇಕು ಅದು ಗಿಡದ ಕೆಳಗಡೆಯಾದರೆ ತುಂಬಾ ಒಳ್ಳೆಯದು. ಇದನ್ನು ತಯಾರಿಸಲು ಎರಡು ನೂರು ಲೀಟರ್ ಬ್ಯಾರೆಲ್ ಅವಶ್ಯಕತೆ ಇದೆ.
ಮೊದಲಿಗೆ 10 ಕೆಜಿ ದೇಸಿ ಹಸುವಿನ ಸಗಣಿಯನ್ನು ಒಂದು ಬಕೆಟ್ ನಲ್ಲಿ ಚೆನ್ನಾಗಿ ಕಲಕಬೇಕು ಯಾವುದೇ ಗಂಟುಗಳು ಇಲ್ಲದ ಹಾಗೆ ಅದನ್ನು ಕಲಕಬೇಕು. ಚೆನ್ನಾಗಿ ಕಲಸಿದ ನಂತರ ಇದನ್ನು 200 ಲೀಟರ್ ಬ್ಯಾರೆಲ್ ಗೆ ಹಾಕಬೇಕು, ಆಮೇಲೆ ಇದಕ್ಕೆ 10 ಲೀಟರ್ ಗಂಜಲವನ್ನು ಹಾಕಬೇಕು, ಇದಾದ ನಂತರ ಇದಕ್ಕೆ ಎರಡು ಕೆಜಿ ಬೆಲ್ಲ, ಎರಡು ಕೆಜಿ ದ್ವಿದಳ ಧಾನ್ಯದ ಹಿಟ್ಟು, ಒಂದು ಹಿಡಿ ಮಣ್ಣನ್ನು ಹಾಕಿ ಇದಕ್ಕೆ 200 ಲೀಟರ್ ನೀರನ್ನು ಹಾಕಿ ಚೆನ್ನಾಗಿ ತಿರುಗಿಸಬೇಕು.
ಇದನ್ನು ಪ್ರತಿದಿನ ಎರಡು ಬಾರಿ ಒಂದೇ ದಿಕ್ಕಿನಲ್ಲಿ ತಿರುಗಿಸಬೇಕು ಹೀಗೆ ಒಂದು ವಾರದ ನಂತರ ನಿಮ್ಮ ಜೀವಾಮೃತವು ತಯಾರಾಗುತ್ತದೆ. ಇದನ್ನು ತಯಾರಿಸಿದ ಎಂಟನೇ ದಿನದಿಂದ ನೀವು ಬಳಸಬಹುದು.

ಉಪಯೋಗಗಳು:
ಬೆಳೆಗಳಿಗೆ ಬೇಕಾದ ಲಘು ಪೋಷಕಾಂಶಗಳನ್ನು ಒದಗಿಸುತ್ತದೆ
ಭೂಮಿಯಲ್ಲಿರುವಂತಹ ಸಾರಜನಕ ಸ್ಥಿರೀಕರಿಸುವ ಬ್ಯಾಕ್ಟೀರಿಯಾ ಹಾಗೂ ರಂಜಕ ಕರಗಿಸುವ ವ್ಯಕ್ತಿಗಳಿಗೆ ಇದು ಉತ್ತೇಜನ ನೀಡುತ್ತದೆ ಹಾಗೂ ಅವುಗಳ ಕಾರ್ಯಕ್ಷಮತೆಯನ್ನು ವೃದ್ಧಿಸುತ್ತದೆ.
ದೇಸಿ ಹಸುವಿನ ಸಗಣಿ ಹಾಗೂ ಗಂಜಲು ಲಕ್ಷಾಂತರ ಪ್ರಯೋಜನಕಾರಿ ಸೂಕ್ಷ್ಮಾಣುಜೀವಿಗಳನ್ನು ಹೊಂದಿದೆ. ಹೀಗಾಗಿ ನಾವು ಇದನ್ನು ಏಳು ದಿನಗಳ ಕಾಲ ಅದರಲ್ಲಿರುವ ಅಂತಹ ಸೂಕ್ಷ್ಮಾಣುಜೀವಿಗಳನ್ನು ದ್ವಿಗುಣಗೊಳಿಸಿ ಅಥವಾ ತ್ರಿಗುಣ ಗೊಳಿಸಿ ಅದನ್ನು ಹೆಚ್ಚಾಗಿ ವೃದ್ಧಿಸಿ ಬೆಳೆಗಳಿಗೆ ನೀಡುವುದರ ಮೂಲಕ ನಾವು ಬೆಳೆಗಳ ಬೆಳವಣಿಗೆಯನ್ನು ಪ್ರಚೋದಿಸಬಹುದು.

ಜೀವಾಮೃತದಲ್ಲಿ ಇರುವಂತಹ ಪ್ರಯೋಜನಕಾರಿ ಸೂಕ್ಷ್ಮಾಣುಜೀವಿಗಳು ಬೆಳೆಗಳಲ್ಲಿ ರೋಗಗಳಿಗೆ ಕಾರಣವಾಗುವ ಹಾನಿಕಾರಕ ಸೂಕ್ಷ್ಮಾಣು ಜೀವಿಗಳನ್ನು ಕೊಲ್ಲುತ್ತದೆ.

ಜೀವಾಮೃತವನ್ನು ನಾವು ಮಣ್ಣಿಗೂ ಕೂಡ ಪ್ರಚೋದಿಸಬಹುದು ಇದರ ಮೂಲಕ ಮಣ್ಣಿನಲ್ಲಿರುವ ಸೂಕ್ಷ್ಮ ಜೀವಿಗಳನ್ನು ವೃದ್ಧಿಸುತ್ತದೆ ಹಾಗೂ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ.
ಇನ್ನೇಕೆ ತಡ. ಈಗಲೇ ನೀವೇ ಜೀವಾಮೃತವನ್ನ ತಯಾರು ಮಾಡಿಕೊಂಡು ನಿಮ್ಮ ಕೃಷಿ ಭೂಮಿಗೆ ಅಮೃತ ಉಣಿಸಿ. ಸಾವಯವ ಕೃಷಿಯಿಂದ ದೇಶದ ಆರೋಗ್ಯವನ್ನ ಕಾಪಾಡೋಣ ಏನಂತ್ತೀರಾ?

ಹೆಚ್ಚು ಓದಿದ ಸುದ್ದಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ
Published 22 ಡಿಸೆಂಬರ್ 2023, 23:16

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ
Published 22 ಡಿಸೆಂಬರ್ 2023, 23:14

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್
Published 31 ಮಾರ್ಚ್ 2023, 17:40

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ
Published 16 ಮಾರ್ಚ್ 2023, 14:45

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ
Published 16 ಮಾರ್ಚ್ 2023, 14:45

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ
Published 16 ಮಾರ್ಚ್ 2023, 14:45

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!
Published 16 ಮಾರ್ಚ್ 2023, 14:45

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್
Published 16 ಮಾರ್ಚ್ 2023, 14:45

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ
Published 16 ಮಾರ್ಚ್ 2023, 14:45

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!
Published 16 ಮಾರ್ಚ್ 2023, 14:45

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ
Published 16 ಮಾರ್ಚ್ 2023, 14:45

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ
Published 16 ಮಾರ್ಚ್ 2023, 14:45