ಈ ಕ್ಷಣ :

ನುಡಿನಮನ | ಸಿದ್ಧಲಿಂಗಯ್ಯನವರ ಕಾವ್ಯದೊಳಗಿನ ಮೌನವನ್ನು ಆಲಿಸಬೇಕಿದೆ, ದಲಿತ ಹೋರಾಟಗಳು

Published 15 ಮಾರ್ಚ್ 2023, 22:38 IST
Last Updated 6 ಮೇ 2023, 23:58 IST
ಸ್ನೇಹಿತನ ಕತ್ತು ಕೊಯ್ದು ರಕ್ತ ಕುಡಿದ ಕಿರಾತಕ! ಬೆಚ್ಚಿಬಿದ್ದ ಚಿಂತಾಮಣಿ

SPECIAL: ವೆಂಕಟ್ರಮಣ ಗೌಡ ಸಿದ್ಧಲಿಂಗಯ್ಯನವರ ಕಾವ್ಯವನ್ನು ವಿಮರ್ಶಿಸುವ ಹೊತ್ತಿನಲ್ಲಿ ಅವರ ಕಾವ್ಯದೊಳಗಿನ ಅಬ್ಬರದ ಅಭಿವ್ಯಕ್ತಿ ಮತ್ತೆ ಮತ್ತೆ ಪ್ರಸ್ತಾಪವಾಗುತ್ತಲೇ ಬಂದಿದೆ. ಅಬ್ಬರವೇ ಕಾವ್ಯವಲ್ಲ ಎಂಬ ನಿಲುವುಗಳ ಜಾಣತನಗಳನ್ನೂ ನೋಡುತ್ತಿದ್ದೇವೆ. ಇದೆಲ್ಲದರ ನಡುವೆ ಸಿದ್ಧಲಿಂಗಯ್ಯನವರ ಕಾವ್ಯ ಅಥವಾ ದಲಿತ ಕಾವ್ಯವು ಈ ಸಮಾಜವನ್ನು ತಲುಪುವ ಹೊತ್ತಿನ ಬಿಕ್ಕಟ್ಟುಗಳ ಬಗ್ಗೆ ಯೋಚಿಸಬೇಕಿದೆ. ವಿ ಡಾ. ಸಿದ್ಧಲಿಂಗಯ್ಯನವರು ತೀರಿಕೊಂಡ ಈ ಸಂದರ್ಭದಲ್ಲಿ, ಅವರೊಬ್ಬ ಮಾಸ್ ಎನ್ನಿಸಿಕೊಂಡ ಕವಿಯಾಗಿದ್ದರೆಂಬುದನ್ನು ನೆನಪು ಮಾಡಿಕೊಳ್ಳುತ್ತೇನೆ. ಮತ್ತು ದಲಿತ ಕವಿ ಎಂದೇ ಅವರು ಚಿರಪರಿಚಿತರಾಗಿದ್ದರು ಎಂಬುದನ್ನೂ ಜೋಡಿಸಿಕೊಳ್ಳುತ್ತಲೇ ಕೆಲವು ಮಾತುಗಳನ್ನು ಹೇಳಬೇಕೆಂದುಕೊಂಡಿದ್ದೇನೆ. 1870-80ರ ಕಾಲಘಟ್ಟ ಕನ್ನಡ ಸಾಹಿತ್ಯ ಮತ್ತು ಚಳವಳಿಗಳ ಆತ್ಮಬಲದಂತೆ ಕಾಣಿಸುವ ಹೊತ್ತಾಗಿತ್ತು ಎಂಬುದರಲ್ಲಿ ಸಂದೇಹವಿಲ್ಲ. ಕಾವ್ಯದ ತವಕಗಳು ಮಿಡಿಯುತ್ತಿರುವಾಗಲೇ ಚಳವಳಿಯ ತುಡಿತಗಳು ನಿಕ್ಕಿಯಾಗುತ್ತ ಎರಡೂ ಪರಸ್ಪರ ಪೂರಕವಾಗುತ್ತ, ಪರಸ್ಪರ ಕೊಡುಕೊಳ್ಳುವಿಯ ಸಾಕಾರದಂತೆ ಬೆರಗೊಂದು ಮೂಡಿಕೊಂಡದ್ದು ಅತ್ಯಂತ ಮಹತ್ವದ ಚರಿತ್ರೆ. ಅಂಥ ಚರಿತ್ರೆಯಲ್ಲಿ ಮುಖ್ಯ ಹೆಸರು ಕವಿ ಸಿದ್ಧಲಿಂಗಯ್ಯ. ದಮನಿತ ಸಮುದಾಯದ ಎಲ್ಲ ನೋವು, ಹತಾಶೆ, ತಳಮಳ, ಸಿಟ್ಟು ಮತ್ತು ಜೊತೆಜೊತೆಗೆ ಅಸಹಾಯಕತೆಯ ಪ್ರತಿರೂಪದಂಥ ಸಹನೆಯೂ ಕೂಡಿಕೊಂಡಂಥ ಸಂವೇದನೆಯೊಂದರ ಅಭಿವ್ಯಕ್ತಿಯಾಗಿ ಸಿದ್ಧಲಿಂಗಯ್ಯನವರ ಮೊದಲ ಕವನಸಂಕಲನ 'ಹೊಲೆಮಾದಿಗರ ಹಾಡು' 1975ರಲ್ಲಿ ಬಂದಾಗ ಅಲ್ಲೊಂದು ಬೆಚ್ಚಿಬೀಳಿಸುವ ಧಾರೆಯಿತ್ತು. ಮತ್ತು ಅದು ಬಹಳ ಕಾಲ ಮಾಸದೇ ಉಳಿದುಬಿಡಬಲ್ಲ ಗಾಢತೆಯೊಂದಿಗೂ ಇತ್ತು. ಕುಂದದ ಛಂದದ ನಡುಗಡಲಲ್ಲಿ ಹಾಯಿದೋಣಿಯಂತೆ ಕಾವ್ಯ ತೇಲುತ್ತಿದ್ದ ಹೊತ್ತಲ್ಲಿ ಸಿದ್ಧಲಿಂಗಯ್ಯನವರ ದನಿ ಕೇಳಿಸಿದ್ದೇ ಬೇರೆ ಬಗೆಯಲ್ಲಿ: "ಇಕ್ರಲಾ ವದೀರ್ಲಾ ಈ ನನ್ ಮಕ್ಕಳ ಚರ್ಮ ಎಬ್ರಲಾ" -ಎಂದು ಅಬ್ಬರಿಸಿತ್ತು, ಸಿದ್ಧಲಿಂಗಯ್ಯನವರ 'ಹೊಲೆಮಾದಿಗರ ಹಾಡು'. "ಹಸಿವಿನಿಂದ ಸತ್ತೋರು ಸೈಜುಗಲ್ಲು ಹೊತ್ತೋರು ವದೆಸಿಕೊಂಡು ವರಗಿದೋರು ನನ್ನ ಜನಗಳು ಕಾಲುಕಯ್ಯಿ ಹಿಡಿಯೋರು ಕೈ ಮಡಗಿಸಿಕೊಳ್ಳೋರು ಭಕ್ತರಪ್ಪ ಭಕ್ತರೋ ನನ್ನ ಜನಗಳು" ಮೇಲಿನ ಎರಡೂ ಉಲ್ಲೇಖಗಳನ್ನು ಇಲ್ಲಿ ಉದ್ದೇಶಪೂರ್ವಕವಾಗಿಯೇ ಪ್ರಸ್ತಾಪಿಸಿದ್ದೇನೆ. ಮೊದಲಿನದರಲ್ಲಿ ಮುಗಿಯದಂಥ ಸಿಟ್ಟೊಂದು ಯಾವ ಮುಲಾಜೂ ಇಲ್ಲದೆ ವ್ಯಕ್ತವಾಗಿದ್ದರೆ, ಎರಡನೆಯದರಲ್ಲಿ ಒಂದು ಸಮುದಾಯದ ಸ್ಥಿತಿಯ ಬಗೆಗಿನ ಅತ್ಯಂತ ಸಂಕಟವು ವ್ಯಂಗ್ಯವಾದ ಬಗೆಯಿದೆ. ದಲಿತರ ಸಂಕಟಗಳು ಕಾವ್ಯದ ಧಮನಿಯಲ್ಲಿ ಬಂದ ಹೊತ್ತಿನ ಮುಖ್ಯ ಸ್ವರೂಪ ಇವೆರಡು ಬಗೆಯಲ್ಲಿದೆ. ಕನ್ನಡ ಕಾವ್ಯದಲ್ಲಿ ದಲಿತರ ಆದಿಕವಿ ಎಂದು ಸಿದ್ಧಲಿಂಗಯ್ಯನವರನ್ನು ಕರೆಯುತ್ತಾರೆ ಡಿ ಆರ್ ನಾಗರಾಜ್. ಹಾಗೆ ದಲಿತರ ಆದಿಕಾವ್ಯದಲ್ಲಿ ಕಾಣುತ್ತಿರುವ ಸಿಟ್ಟು ಮತ್ತು ಅಸಹನೆ ಆ ಹೊತ್ತಿನ ಬಿಂಬಗಳಾಗಿರದೆ, ಕಟು ವಾಸ್ತವದ್ದೇ ತುಂಡುಗಳಾಗಿದ್ದವು. ಅಲ್ಲಿನ ಕಥೆಗಳಲ್ಲಿದ್ದ ತುಳಿಸಿಕೊಂಡ ನೋವು ಒಂದಿಡೀ ಪರಂಪರೆಯ ಎದುರಿಗಿನ ಅಸಹನೆಯೂ ಆಗಿತ್ತು. "ದೊಡ್ಡಗೌಡರ ಬಾಗಿಲೀಗೆ ನಮ್ಮ ಮೂಳೆಯ ತ್ವಾರಣ ನಮ್ಮ ಜನಗಳ ಕಾಲು ಕಯ್ಯಿ ಕಂಬ ಅವರ ಹಟ್ಟಿಗೆ" -ಎಂದು ಶುರುವಾಗುವ 'ಬೆಲ್ಚಿಯ ಹಾಡು' ದಲಿತರ ರಕ್ತವು ಉಳ್ಳವರ ಮನೆಯಂಗಳದ ರಂಗೋಲೆಯಾಗಿ, ಅವರ ತೋಟದ ಎಳನೀರಾಗಿ ಹೋಗಿರುವುದನ್ನೂ, ಅವರ ಅಮಲಿನಲ್ಲಿ ಕೂಲಿ ಹೆಣ್ಣು ಕಣ್ಣೀರಾಗುವ ಶೋಷಣೆಯ ಚಿತ್ರವನ್ನೂ ಕಟ್ಟಿಕೊಡುತ್ತ, ಸ್ಮೃತಿಯೊಳಗಿನ ಸಂಕಟಗಳನ್ನು ಬಿಡಿಸಿಡುತ್ತದೆ. ಅವರ 'ಒಂದು ಮೂಳೆಯ ಹಾಡು' ಅಂಥ ಅಭಿವ್ಯಕ್ತಿಯ ಅಸಾಮಾನ್ಯ ಸ್ವರೂಪದ್ದಾಗಿ ನಿಲ್ಲುತ್ತದೆ. "ನಾ ಮೂಳೆ, ನಾ ಇಂಗೇ ಇರಲ್ಲ ಕೂಗ್ತಿನಿ, ಸಿಡಿತಿನಿ, ಮನುಷ ಆಯ್ತಿನಿ" -ಎಂಬ ಬೆಳಕು ಹೊಸ ಚರಿತ್ರೆಯ ಆಸೆಯದ್ದು. 'ಸಾವಿರಾರು ನದಿಗಳು' ಹೊಮ್ಮುವುದು ಇಂಥ ಹೊಸ ಚರಿತ್ರೆಯೆಡೆಗಿನ ನೋಟದಿಂದ. "ನೆನ್ನೆ ದಿನ ನನ್ನ ಜನ ಬೆಟ್ಟದಂತೆ ಬಂದರು ಕಪ್ಪು ಮುಖ ಬೆಳ್ಳಿಗಡ್ಡ ಉರಿಯುತಿರುವ ಕಣ್ಣುಗಳು ಹಗಲು ರಾತ್ರಿಗಳನು ಸೀಳಿ ನಿದ್ದೆಯನ್ನು ಒದ್ದರು" -ಎನ್ನುವಲ್ಲಿ, 'ದಲಿತರು ಬರುವರು ದಾರಿಬಿಡಿ ದಲಿತರ ಕೈಗೆ ರಾಜ್ಯ ಕೊಡಿ' ಎನ್ನುವಲ್ಲಿ, 'ಗುಡಿಸಲುಗಳು ಗುಡುಗುತಿವೆ ಬಂಗಲೆಗಳು ನಡುಗುತಿವೆ' ಎನ್ನುವಲ್ಲಿ ಕಾಣುವ ಹಂಬಲಗಳು ಮೂಡಿಸಿದ ಪ್ರೇರಣೆಯು ಸಣ್ಣದಾಗಿರಲಿಲ್ಲ; ವಾಸ್ತವವೊಂದನ್ನು ದಾಟುವುದು ಇಷ್ಟು ಸುಲಭವೆ ಎಂಬ ಅನುಮಾನದ ನಡುವೆಯೂ ಇವತ್ತಿಗೂ ಅವರ ಕಾವ್ಯದೊಳಗಿನ ಸಹಜ ಸಿಟ್ಟಿನ ಧಾಟಿಯು ಎದೆಗೆ ನಾಟುವುದರ ಹಿಂದೆ ಅವುಗಳ ಮಾಸ್ ಸ್ವರೂಪವನ್ನೂ ದಾಟುವ ಬೇರೆಯ ಸೆಳಕೊಂದು ನಿಬಿಡವಾಗಿಯೇ ಇದೆ. ಸಿದ್ಧಲಿಂಗಯ್ಯನವರ ಕಾವ್ಯವನ್ನು ವಿಮರ್ಶಿಸುವ ಹೊತ್ತಿನಲ್ಲಿ ಅವರ ಕಾವ್ಯದೊಳಗಿನ ಅಬ್ಬರದ ಅಭಿವ್ಯಕ್ತಿ ಮತ್ತೆ ಮತ್ತೆ ಪ್ರಸ್ತಾಪವಾಗುತ್ತಲೇ ಬಂದಿದೆ. ಅಬ್ಬರವೇ ಕಾವ್ಯವಲ್ಲ ಎಂಬ ನಿಲುವುಗಳ ಜಾಣತನಗಳನ್ನೂ ನೋಡುತ್ತಿದ್ದೇವೆ. ಇದೆಲ್ಲದರ ನಡುವೆ ಸಿದ್ಧಲಿಂಗಯ್ಯನವರ ಕಾವ್ಯ ಅಥವಾ ದಲಿತ ಕಾವ್ಯವು ಈ ಸಮಾಜವನ್ನು ತಲುಪುವ ಹೊತ್ತಿನ ಬಿಕ್ಕಟ್ಟುಗಳ ಬಗ್ಗೆ ಯೋಚಿಸಬೇಕಿದೆ. ಸಿದ್ಧಲಿಂಗಯ್ಯನವರ ಕಾವ್ಯವನ್ನು ಹಾಡಿಕೊಳ್ಳುವಾಗ ಅಥವಾ ಹಾಡುವುದನ್ನು ಕೇಳಿಸಿಕೊಳ್ಳುವಾಗ ಅದು ಅಷ್ಟೇ ಸೊಗಸಾಗಿಯೂ ಕೇಳಿಸುತ್ತದೆ. ಆದರೆ ಶತಮಾನಗಳಷ್ಟು ಸುದೀರ್ಘವಾದ ಕಟುವಾಸ್ತವವು, ದಮನಿತರ ಬದುಕಿನ ದುರ್ಭರತೆಯು ಸೊಗಸಾಗಿ ಕೇಳಿಸಿಬಿಡುವಲ್ಲಿನದು ಅಪಾಯವೇ. ಮಾಸ್ ಆಗುವಲ್ಲಿನ ಅಪಾಯವೂ ಇದೇ. ಮರೆಯಲಾರದ, ಮರೆಯಬಾರದ, ಕಂಗೆಡಿಸಿದ ಚರಿತ್ರೆಯನ್ನು ಮರೆಸಿಬಿಡುವ ಮೋಹದ ಬಗೆಗೆ ಎಚ್ಚರವೊಂದು ಇರದಂತಾಗದ ಹಾಗೆ ಅದನ್ನು ಓದಿಕೊಳ್ಳಬೇಕಾದ ಜರೂರು ಇದೆ. "ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ ಗೆಳತಿ ಚೆಲುವಾದ ನಿನ್ನ ಮಲ್ಲಿಗೆಯ ಮೈಯ ಸುಟ್ಟಾವು ಬೆಳ್ಳಿಕಿರಣ" -ಎಂಬ, ರಮ್ಯತೆಯೇ ಮೈವೆತ್ತ ಕವಿತೆಗಿಂತ, 'ಮೆರವಣಿಗೆ', 'ಅಲ್ಲೆ ಕುಂತವರೆ' ದಲಿತ ಹೋರಾಟಗಳ ಹೊತ್ತಿನ ಪಠ್ಯವಾಗಬೇಕಾದ ಜರೂರು ಇವತ್ತಿಗೂ ಇದೆ. ಸಂಯಮವನ್ನು ಶಕ್ತಿಯಾಗಿಸಬಲ್ಲ ಮೌನದಲ್ಲಿ ಓದಿಕೊಳ್ಳಬೇಕಿರುವುದರ ಅಗತ್ಯವನ್ನೂ ಅನಿವಾರ್ಯತೆಯನ್ನೂ ನಮ್ಮ ಹೋರಾಟಗಳು ಮನನ ಮಾಡಿಕೊಳ್ಳಬೇಕಿದೆ. ಯಾಕೆಂದರೆ ಹೋರಾಟವೆಂಬುದು ನಂಬಿಕೆ ಮತ್ತು ಚಿಂತನೆ ಇವೆರಡೂ ಬೆಸೆದಿರಬೇಕಾದ ಸಾಂಸ್ಕೃತಿಕ ಧಾರೆ. "ನಿಂಬೇ ಹಣ್ಣು ಮಡಗವರೆ ಬಾಣ್ತಿ ಕಯ್ಯ ಮಡಗವರೆ ಮೂಳೇ ಜೋಳಿಗೆ ಹಾಕವರೆ ಮೀಸೆ ಮರೆಯಲಿ ನಗುತಾರೆ ದೊಡ್ಡ ಮನುಷರ ಹಿಂದವರೆ ಅಲ್ಲೇ ಕುಂತವರೆ ಅವರು ಅಲ್ಲೇ ಕುಂತವರೆ."


ಹೆಚ್ಚು ಓದಿದ ಸುದ್ದಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ
Published 22 ಡಿಸೆಂಬರ್ 2023, 23:16

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ
Published 22 ಡಿಸೆಂಬರ್ 2023, 23:14

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್
Published 31 ಮಾರ್ಚ್ 2023, 17:40

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ
Published 16 ಮಾರ್ಚ್ 2023, 14:45

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ
Published 16 ಮಾರ್ಚ್ 2023, 14:45

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ
Published 16 ಮಾರ್ಚ್ 2023, 14:45

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!
Published 16 ಮಾರ್ಚ್ 2023, 14:45

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್
Published 16 ಮಾರ್ಚ್ 2023, 14:45

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ
Published 16 ಮಾರ್ಚ್ 2023, 14:45

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!
Published 16 ಮಾರ್ಚ್ 2023, 14:45

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ
Published 16 ಮಾರ್ಚ್ 2023, 14:45

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ
Published 16 ಮಾರ್ಚ್ 2023, 14:45